ಗದಗ:ನಗರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣದಿಂದಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನಗರದಲ್ಲಿ ಬೇಕಾಬಿಟ್ಟಿಯಾಗಿ ಓಡಾಡುವ ವಾಹನಗಳಿಗೆ ಕಡಿವಾಣ ಹಾಕಲು ಪೆಟ್ರೋಲ್ ಬಂಕ್ಗಳನ್ನು ಬಂದ್ ಮಾಡಲಾಗಿದೆ.
ಗದಗಿನಲ್ಲಿ ಪೆಟ್ರೋಲ್ ಬಂಕ್‌ಗಳು ಸಂಪೂರ್ಣ ಬಂದ್.. ಆ್ಯಂಬುಲೆನ್ಸ್‌ಗಳಿಗೂ ಇಲ್ಲ ಇಂಧನ..
ಜಿಲ್ಲಾಡಳಿತದ ಆದೇಶದ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ನಗರದಲ್ಲಿ ಎಲ್ಲಾ ಪೆಟ್ರೋಲ್ ಬಂಕ್ಗಳನ್ನ ಸಂಪೂರ್ಣ ಬಂದ್ ಮಾಡಲಾಗಿದೆ.
ಪೆಟ್ರೋಲ್ ಬಂಕ್
ಜಿಲ್ಲಾಡಳಿತದ ಆದೇಶದ ಹಿನ್ನೆಲೆಯಲ್ಲಿಗದಗ-ಬೆಟಗೇರಿ ನಗರದಲ್ಲಿ ಎಲ್ಲಾ ಪೆಟ್ರೋಲ್ ಬಂಕ್ಗಳನ್ನ ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದಾಗಿ ಕೆಲ ಅಗತ್ಯ ಸೇವೆಗಳಾದ ಆ್ಯಂಬುಲೆನ್ಸ್‌ಗಳಿಗೂ ಡೀಸೆಲ್ ಅಲಭ್ಯವಾಗಿದೆ. ಜೊತೆಗೆ ಕೆಲ ಆರೋಗ್ಯ ಸೇವೆಗಳಿಗೆ ಹೋಗುವ ಸಿಬ್ಬಂದಿಗೂ ಪೆಟ್ರೋಲ್ ಸಿಗುತ್ತಿಲ್ಲ.
ಅಗತ್ಯ ಸೇವೆಗಳಿಗೆ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿಯವರು ಹೇಳಿದ್ದರು. ಜಿಲ್ಲಾಡಳಿತ ಸೂಚಿಸಿದರೆ ಅಗತ್ಯ ಸೇವೆಗಳ ವಾಹನಗಳಿಗೂ ಪೆಟ್ರೋಲ್ ಹಾಕಲಾಗುತ್ತೆ ಎನ್ನುತ್ತಾರೆ ಬಂಕ್ ಮಾಲೀಕರು.