ಕರ್ನಾಟಕ

karnataka

ETV Bharat / state

ಆರ್​​​ಟಿಐ ಅಡಿ ಮಾಹಿತಿ ನೀಡಲು ಹತ್ತೂವರೆ ಲಕ್ಷ ರೂ. ಶುಲ್ಕ: ಬೆಚ್ಚಿಬಿದ್ದ ಅರ್ಜಿದಾರ - ಆರ್​ಟಿಐ

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಲು ಸುಮಾರು ಹತ್ತೂವರೆ ಲಕ್ಷ ರೂಪಾಯಿ ಶುಲ್ಕ ಕೇಳಿದ ಘಟನೆ ಗದಗ್​ನಲ್ಲಿ ನಡೆದಿದೆ.

rti
ಆರ್​ಟಿಐ

By

Published : Jun 21, 2020, 10:25 AM IST

ಗದಗ:ಆರ್​ಟಿಐ ಕಾಯ್ದೆಯಡಿಯಲ್ಲಿ ಮಾಹಿತಿ ನೀಡಲು ಬರೋಬ್ಬರಿ‌ 10 ಲಕ್ಷ ರೂ. ಶುಲ್ಕ ಪಾವತಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಯೊಬ್ಬರು ಅರ್ಜಿದಾರರಿಗೆ ತಿಳಿಸಿದ ಘಟನೆ ಗದಗ್​ನಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಅವ್ಯಾಹತವಾಗಿ ಅಕ್ರಮ‌ ಮರಳು ಗಣಿಗಾರಿಕೆ ನಡೆಯುತ್ತಿರೋದು ಜಗಜ್ಜಾಹೀರಾಗಿರೋ ವಿಚಾರ. ಇದರ ಬಗ್ಗೆ ಬಸನಗೌಡ ಗಿರಡ್ಡಿ ಎಂಬಾತ ಈ ಕುರಿತು ಮಾಹಿತಿ ಪಡೆಯಲು ಅರ್ಜಿ ಹಾಕಿದ್ದರು. ಆದರೆ ಮಾಹಿತಿ ನೀಡಲು ಸುಮಾರು ಹತ್ತೂವರೆ ಲಕ್ಷ ರೂಪಾಯಿ ಶುಲ್ಕ ಪಾವತಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ರಾಜೇಶ್ ನಾಯಕ್ ತಿಳಿಸಿದ್ದಾರೆ.

ಆರ್​ಟಿಐ

ಮೂಲತಃ ರೋಣ ಪಟ್ಟಣದ ನಿವಾಸಿಯಾಗಿರುವ ಬಸನಗೌಡ ಅವರು ಜಿಲ್ಲೆಯಲ್ಲಿ ಹಲವು ಕಡೆ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಂತೆ ನೂರಾರು ಬಾರಿ ಅಧಿಕಾರಿಗಳಿಗೆ ಅರ್ಜಿ ಕೊಟ್ಟಿದ್ದಾರೆ. ಆದರೆ ಸಮಸ್ಯೆ ಸರಿಪಡಿಸದೆ ಅಧಿಕಾರಿಗಳು ಉದ್ಧಟತನ ತೋರಿದ್ದಾರೆ. ಹಾಗಾಗಿ ಆರ್.ಟಿ.ಐ ಕಾಯ್ದೆ ಅಡಿ ಬಸನಗೌಡ ಆರ್ ಗಿರಡ್ಡಿ ಎನ್ನುವವರು ಮೇ 15 ರಂದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಆರ್‌ಟಿಐ ನಿಯಮದಂತೆ ಅರ್ಜಿ ಸಲ್ಲಿಸಿದ್ದಾರೆ.

ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ಮರಳು ಬ್ಲಾಕ್‌ಗಳಿಂದ ಮರಳು ಒಯ್ಯುವ ಲಾರಿ, ಟಿಪ್ಪರ್‌ಗಳ ಜಿಪಿಎಸ್ ಟ್ರ್ಯಾಕ್ ರಿಪೋರ್ಟ್ ಅನ್ನು ಮಾಹಿತಿ ಅರ್ಜಿ‌ ಮೂಲಕ‌ ಕೇಳಿದ್ದಾರೆ. ಏಪ್ರಿಲ್ 1ರಿಂದ ಮೇ 15ರ ನಡುವಿನ 45 ದಿನಗಳ ಮಾಹಿತಿ ಒದಗಿಸಿ ಎಂದು ಅರ್ಜಿಯಲ್ಲಿ ಉಲ್ಲೇಖಿಸುತ್ತಾರೆ.

ಆದ್ರೆ ಅದಕ್ಕೆ ಜೂನ್ 15ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ರಾಜೇಶ್ ನಾಯಕರು ಇದಕ್ಕೆ ಉತ್ತರಿಸಿ, ನೀವು ಕೇಳಿದ ಮಾಹಿತಿ ಇರುವ ಪತ್ರವನ್ನು ಟ್ರ್ಯಾಕಿಂಗ್ ಮಾಡುವ ‘ಟೆಲಿಮ್ಯಾಟಿಕ್ಸ್ 4-ಯು ಸರ್ವಿಸಸ್’ ಕಂಪನಿಗೆ ಕಳಿಸಿದ್ದೆವು. ಅವರು 10,55,660 ರೂ. ಶುಲ್ಕ ಪಾವತಿಸಲು ಕೋರಿದ್ದಾರೆ. ಈ ಶುಲ್ಕ ಪಾವತಿಸಿದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಅಧಿಕಾರಿಯ ಪತ್ರ ಓದಿದ ಬಸನಗೌಡ ಕಂಗಾಲಾಗಿದ್ದು, 2005ರಲ್ಲಿಯೇ ಆಗಿನ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದಿದೆ. ಅಧಿಕಾರಿಗಳು ಇಷ್ಟೊಂದು ಹಣ ಶುಲ್ಕವನ್ನು ಪಾವತಿಸಲು ತಿಳಿಸಿದರೆ ಎಲ್ಲಿಂದ ಕಟ್ಟಲಿ ಅಂತ ಕಂಗಾಲಾಗಿದ್ದಾರೆ. ಇದು ಅಧಿಕಾರಿಗಳ ಅಸಡ್ಡೆತನ ತೋರಿಸುತ್ತದೆ ಅಂತ ಬಸನಗೌಡ ಅವರು ಆರೋಪಿಸಿದ್ದಾರೆ.

ಒಂದು ವೇಳೆ ಅವರಿಗೆ ಮಾಹಿತಿ ಕೊಡುವುದು ಮನಸ್ಸಿರಲಿಕ್ಕಿಲ್ಲ ಅಥವಾ ಅವರ ಭ್ರಷ್ಟಾಚಾರ ಹೊರ ಬೀಳಬಹುದೆಂಬ ಭಯದಿಂದ ಈ ರೀತಿಯ ಶುಲ್ಕ ಪಾವತಿಸಲು ತಿಳಿಸಿ ನುಣುಚಿಗೊಳ್ಳಬಹುದು. ಈ ಕುರಿತು ಗದಗ್​ ಜಿಲ್ಲಾಧಿಕಾರಿಯನ್ನು ಭೇಟಿಯಾಗುತ್ತೇನೆ. ಅವರೂ ಸಮಸ್ಯೆ ಸರಿಪಡಿಸದೇ ಇದ್ದರೇ ಸಿಎಂ ಹಾಗೂ ಪಿಎಂ ಅವರನ್ನೂ ಜಾಲತಾಣದ ಮೂಲಕ ಸಂಪರ್ಕಿಸುತ್ತಾರೆ ಎಂದು ಬಸನಗೌಡ ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಇಷ್ಟು ಮೊತ್ತದ ಹಣ ಸಾಲ ನೀಡಿ, ಮಾಹಿತಿ ನೀಡಲಿ, ನನ್ನ ಆಸ್ತಿಯನ್ನು ಬೇಕಾದರೆ ಶ್ಯೂರಿಟಿ ಇಡುತ್ತೇನೆ ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details