ಗದಗ: ರಾಣಿ ಚೆನ್ನಮ್ಮಳ ಕರ್ಮ ಭೂಮಿ ಕಿತ್ತೂರು ಹೆಸರಲ್ಲಿ ಮುಂಬೈ ಕರ್ನಾಟಕ ಮರು ನಾಮಕರಣ ಮಾಡಿದ್ದಾರೆ ಅಂತ ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ.
ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮಾತನಾಡಿದ ಸಿಸಿ ಪಾಟೀಲ್, ಇದುವರೆಗೆ ಈ ಪ್ರಾಂತ್ಯವನ್ನು ಮುಂಬೈ ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ನಮ್ಮ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಮುಂಬೈ ಕರ್ನಾಟವನ್ನು ತೆಗೆದುಹಾಕಿ ರಾಣಿ ಚೆನ್ನಮ್ಮಳ ಕರ್ಮಭೂಮಿಯಾಗಿರುವ ಕಿತ್ತೂರಿನ ಹೆಸರಿನಲ್ಲಿ ಕಿತ್ತೂರು ಕರ್ನಾಟಕ ಎಂದು ಮರು ನಾಮಕರಣ ಮಾಡಲು ನಾವೆಲ್ಲರೂ ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದೇವೆ.
ಈ ನಿರ್ಣಾಯವನ್ನು ತೆಗೆದುಕೊಂಡ ಬೊಮ್ಮಾಯಿಯವರಿಗೆ ಅಭಿನಂಧನೆ ಸಲ್ಲಿಸುತ್ತೇವೆ. ಇನ್ನು ಮುಂದೆ ಮುಂಬೈ ಕರ್ನಾಟಕದ ಬದಲಾಗಿ ಈ ಭಾಗವನ್ನು ಸ್ವಾತಂತ್ರ ಹೋರಾಟಗಾರ್ತಿ ರಾಣಿ ಚೆನ್ನಮ್ಮ ಗೌರವಾರ್ಥ ಕಿತ್ತೂರು ಕರ್ನಾಟಕ ಎಂದು ಚಾಲ್ತಿಗೆ ಬರಲಿದೆ ಎಂದು ಸಿಸಿ ಪಾಟೀಲ್ ಹೇಳಿದರು.
ಇನ್ನು ಮಹದಾಯಿಗಾಗಿ ಬೆಳವಣಿಗೆಯ ಬಗ್ಗೆ ಮಾತನಾಡಿ, ನಮ್ಮ ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಮಹದಾಯಿ ನೀರು ಮಲಪ್ರಭಾ ನದಿಗೆ ಜೋಡನೆ ಮಾಡುತ್ತೇವೆ. ಈ ಮಾರ್ಗದಲ್ಲಿ ಬಿಜೆಪಿ ಸರ್ಕಾರ ಪ್ರಬುದ್ಧತ್ತೆಯಿಂದ ಕೆಲಸ ಮಾಡುತ್ತಿದೆ ಎಂದು ಪ್ರತಿಕ್ರಿಯಿಸಿದರು.
ಇದನ್ನು ಓದಿ:ನ.11ರಂದು ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಿಸಲು ಸರ್ಕಾರದ ಆದೇಶ