ಗದಗ : ದಿಂಗಾಲೇಶ್ವರ ಶ್ರೀಗಳು ವಚನಗಳ ಮೂಲಕ ಅಪಾರವಾದ ಕ್ರಾಂತಿ ಮಾಡುತ್ತಿದ್ದಾರೆ. ಇಂತಹ ಒಬ್ಬ ಮಹಾನ್ ಮಠಾಧೀಶರನ್ನು ಭೇಟಿ ಮಾಡಬೇಕು ಎಂದು ಬಹಳ ದಿನಗಳಿಂದ ಕಾಯುತ್ತಿದ್ದೆ. ಹಾಗಾಗಿ ಅವರ ದರ್ಶನ, ಮಾರ್ಗದರ್ಶನ ಮತ್ತು ಆಶೀರ್ವಾದ ಪಡೆದು ಹೋಗುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದಿಂಗಾಲೇಶ್ವರ ಮಠದಲ್ಲಿ ಮಾತನಾಡಿದ ಅವರು, ಎಲ್ಲಿ ಶಕ್ತಿ ಇರುತ್ತೋ ಅಲ್ಲಿಗೆ ಜನ ಹೋಗ್ತಾರೆ. ಅವರಲ್ಲಿ ಶಕ್ತಿ ಇದೆ. ಜ್ಞಾನ ಭಂಡಾರ, ಸಂಸ್ಕೃತಿ, ಮಾರ್ಗದರ್ಶನ ಕೊಡುವ ಶಕ್ತಿ ಅವರಲ್ಲಿದೆ. ಹಾಗಾಗಿ ಅವರ ದರ್ಶನ ಮಾಡಿ ಧನ್ಯನಾಗಬೇಕು ಅಂತ ಬಂದಿದ್ದೆ ಎಂದು ತಿಳಿಸಿದರು.