ಗದಗ:ಜನಸ್ನೇಹಿ ಎಂಬ ಫೈನಾನ್ಸ್ ಕಂಪನಿಯೊಂದು ಹಣವನ್ನು ಡಬಲ್ ಮಾಡಿಕೊಡುವುದಾಗಿ ನಂಬಿಸಿ ಬಡ ಮಹಿಳೆಯರು ಸೇರಿದಂತೆ ನೂರಾರು ಜನರಿಂದ ಕೋಟಿಗಟ್ಟಲೇ ಹಣ ಪಡೆದು ವಂಚನೆ ಎಸಗಿರುವ ಆರೋಪ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯಲ್ಲಿ ಜನಸ್ನೇಹಿ ರಿಯಲ್ ವೆಲ್ತ್ ಸೊಲ್ಯೂಷನ್ಸ್ ಪ್ರೈ.ಲಿ. ಕಂಪನಿ ಎಂಬ ಹೆಸರಿನ ಕಂಪನಿಯೊಂದು ಏಜೆಂಟರ್ಗಳ ಮೂಲಕ ನೂರಾರು ಜನರಿಂದ ದುಡ್ಡು ಪಡೆದು ಹಣವನ್ನು ಡಬಲ್ ಮಾಡಿ ಕೊಡುವುದಾಗಿ ನಂಬಿಸಿ ಮೋಸ ಮಾಡಿದೆ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದಲ್ಲಿ ಕಂಪನಿ ಅಧಿಕಾರಿಗಳ ಮಾತಿಗೆ ಮರುಳಾಗಿ ನೂರಾರು ಮಹಿಳೆಯರು ಕೂಲಿ ನಾಲಿ ಮಾಡಿ ಉಳಿತಾಯ ಮಾಡಿದ್ದ ಹಣವನ್ನು ಕಂಪನಿಗೆ ತುಂಬಿ ಕೈ ಸುಟ್ಟುಕೊಂಡಿದ್ದಾರೆ. ಇದೊಂದೆ ಗ್ರಾಮದಲ್ಲಿ ಸುಮಾರು 500 ಕ್ಕೂ ಅಧಿಕ ಮನೆಗಳಲ್ಲಿ 50 ಸಾವಿರದಿಂದ 1 ಲಕ್ಷಕ್ಕೂ ಅಧಿಕ ಮೊತ್ತದ ಪಾಲಿಸಿ ಮಾಡಿದ್ದಾರೆ. ಆದರೆ ಇದುವೆರೆಗೂ ಕಂಪನಿಯಿಂದ ಗ್ರಾಹಕರಿಗೆ ಒಂದು ನಯಾ ಪೈಸೆ ಕೂಡ ಹಿಂದಿರುಗಿ ಬಂದಿಲ್ಲವಂತೆ.