ಕರ್ನಾಟಕ

karnataka

ETV Bharat / state

ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಿಂದ ಕೋವಿಡ್ ನಿಯಮ ಉಲ್ಲಂಘನೆ: ಪೋಷಕರ ಸಭೆಯಲ್ಲಿ ನಡೆದಿದ್ದೇನು?

ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ಪೋಷಕರ ಸಭೆಯ ನೆಪದಲ್ಲಿ ಹರ್ಬಲ್ ಉತ್ಪನ್ನಗಳನ್ನು ಮಾರಾಟ ಮಾಡಿದ ಆರೋಪ ಕೇಳಿಬಂದಿದೆ.

By

Published : Jun 20, 2020, 1:04 PM IST

chikkatti-educational-institution-breaks-covid-19-ruls-and-marketing-herebal-products-in-parents-meeting-in-gadaga
ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಿಂದ ಕೋವಿಡ್‌-19 ನಿಯಮ ಉಲ್ಲಂಘಟನೆ; ಪೋಷಕರ ಸಭೆಯಲ್ಲಿ ಹರ್ಬಲ್‌ ಉತ್ಪನ್ನಗಳ ಪ್ರಚಾರ ಆರೋಪ

ಗದಗ:ಶಾಲೆಗಳ ಪುನರಾರಂಭ ಕುರಿತು ಪಾಲಕರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಹರ್ಬಲ್ ಪ್ರಾಡಕ್ಟ್ ಕುರಿತು ಪ್ರಚಾರ ಮಾಡಿದ ಆರೋಪ ಗದಗದ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ವಿರುದ್ಧ ಕೇಳಿಬಂದಿದೆ.

ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಿಂದ ಕೋವಿಡ್‌-19 ನಿಯಮ ಉಲ್ಲಂಘನೆ ಆರೋಪ

ಶಾಲೆಗಳ ಪುನರಾರಂಭ ಕುರಿತು ಪಾಲಕರ ಅಭಿಪ್ರಾಯ ಸಂಗ್ರಹ ಸಭೆ ಏರ್ಪಡಿಸಲಾಗಿತ್ತು. ಇದನ್ನೇ ಬಂಡವಾಳವಾಗಿಟ್ಟುಕೊಂಡ ಶಿಕ್ಷಣ ಸಂಸ್ಥೆ, ಚಲನಚಿತ್ರ ನಟಿ ಪಂಕಜ ರವಿಶಂಕರ್ ಹಾಗೂ ಇನ್ನಿಬ್ಬರನ್ನು ಕರೆತಂದು ಹರ್ಬಲ್ ಪ್ರಾಡಕ್ಟ್ ಮಾರ್ಕೆಟಿಂಗ್ ಮಾಡಿದೆ ಎನ್ನಲಾಗುತ್ತಿದೆ. ಗುರುವಾರ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೋವಿಡ್‌-19 ನಿಯಮಗಳನ್ನು ಉಲ್ಲಂಘಿಸಿ 300ಕ್ಕೂ ಹೆಚ್ಚು ಪಾಲಕರನ್ನು ಸೇರಿಸಿ ಸಭೆ ನಡೆಸಲಾಗಿದೆ. ಅಷ್ಟೇ ಅಲ್ಲದೆ, ಬಲವಂತವಾಗಿ ಪಾಲಕರಿಂದ ಶುಲ್ಕ ವಸೂಲಿಗೂ ಸಂಸ್ಥೆ ಮುಂದಾಗಿದೆ. ಮೇ 25 ರೊಳಗೆ 50ರಷ್ಟು ಶುಲ್ಕ ಕಟ್ಟಲೇಬೇಕು. ಇಲ್ಲವಾದಲ್ಲಿ ನಿಮ್ಮ ಮಕ್ಕಳನ್ನು ಶಾಲೆಯಲ್ಲಿ ಮುಂದುವರೆಸುವ ಇಚ್ಛೆ ಇಲ್ಲ ಎಂದು ಭಾವಿಸಿ ಬೇರೆಯವರಿಗೆ ಅಡ್ಮಿಷನ್ ಕೊಡುತ್ತೇವೆ ಎನ್ನುವ ಮಾಹಿತಿಯನ್ನು ಪತ್ರದ ಮೂಲಕ ಆಡಳಿತ ಮಂಡಳಿ ತಿಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ, ಸಂಸ್ಥೆಯ ಮುಖ್ಯಸ್ಥ ಎಸ್‌.ವೈ ಚಿಕ್ಕಟ್ಟಿ ಅವರನ್ನು ಪಾಲಕರು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರ ಜಿಲ್ಲಾಡಳಿತದ ಗಮನದಲ್ಲಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ABOUT THE AUTHOR

...view details