ಕರ್ನಾಟಕ

karnataka

ETV Bharat / state

ಕರ್ನಾಟಕದವರು ನಿಮ್ಮನ್ನೇ ಬ್ಯಾನ್ ಮಾಡುವವರಿದ್ದಾರೆ: ಕಾಂಗ್ರೆಸ್​​ ವಿರುದ್ಧ ಯತ್ನಾಳ್​ ಕಿಡಿ - ಕಾಂಗ್ರೆಸ್ ಪ್ರಣಾಳಿಕೆ

ಇವತ್ತಿನ ರಾಮ ಅಂದ್ರೆ ಪ್ರಧಾನಿ ನರೇಂದ್ರ ಮೋದಿ. ಹನುಮಂತ ಯಾರು ಅಂದ್ರೆ ಯೋಗಿ ಆದಿತ್ಯನಾಥ್​. ಲಕ್ಷ್ಮಣ- ಅಮಿತ್​ ಶಾ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗುಣಗಾನ ಮಾಡಿದರು.

Basanagouda Patil Yatnal l
ಬಸನಗೌಡ ಪಾಟೀಲ ಯತ್ನಾಳ್

By

Published : May 3, 2023, 9:55 AM IST

ರೋಡ್ ಶೋ ನಡೆಸಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ

ಗದಗ:ವಿಜಯಪುರದಲ್ಲಿ ಒಂದು ಲಕ್ಷ‌ ಪಾಕಿಸ್ತಾನಿ ಮತದಾರರಿದ್ದಾರೆ. ನಿಮ್ಮ ಒಂದೇ ಒಂದು ವೋಟ್ ನನಗೆ ಬೇಡ. ನಾನು ಹಿಂದೂಗಳಿಂದಲೇ ಆರಿಸಿ ಬರುವೆ ಎಂದು ಹೇಳಿದ್ದೆ. ಆ ಮಾತಿಗೆ ಈಗಲೂ ಬದ್ಧ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು. ಮಂಗಳವಾರ ರಾತ್ರಿ ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ರೋಡ್ ಶೋ ನಡೆಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು "ಕರ್ನಾಟಕದವರು ನಿಮ್ಮನ್ನೇ ಬ್ಯಾನ್ ಮಾಡುವವರಿದ್ದಾರೆ. ಇನ್ನು ನೀವೇನು ಬ್ಯಾನ್ ಮಾಡ್ತೀರಿ"? ಎಂದು ವ್ಯಂಗ್ಯವಾಡಿದರು. ನಿಮಗೆ ಕಡೆಗಾಲ ಬಂದೈತಿ. ಹೆಲಿಕಾಪ್ಟರ್​ನಲ್ಲಿ ಹೋಗುವಾಗ ನಮ್ಮ ಹನುಮಪ್ಪ ದೇವರು ತೋರಿಸಿದ್ದಾನೆ ಎಂದರು. ಬಜರಂಗದಳ ಏನಾದ್ರೂ ದೇಶದ್ರೋಹಿ ಕೆಲಸ‌ ಮಾಡಿದೆಯಾ?, ಭಯೋತ್ಪಾದನೆ ಕೆಲಸ ಮಾಡಿದೆಯಾ? ಕೇಸರಿ ಝಂಡಾ ಹಾರಿಸಿದ್ದು ತಪ್ಪಾ? ಬಜರಂಗದಳ ಎಂಬುವುದು ಹನುಮಾನ್ ದೇವರ ಒಂದು‌ ಶಕ್ತಿ. ಈ ದೇಶದಲ್ಲಿ ಇವತ್ತಿನ ರಾಮ ಅಂದ್ರೆ ಪ್ರಧಾನಿ ನರೇಂದ್ರ ಮೋದಿ. ಹನುಮಂತ ಯಾರು ಅಂದ್ರೆ ಯೋಗಿ ಆದಿತ್ಯನಾಥ್​. ಲಕ್ಷ್ಮಣ- ಅಮಿತ್​ ಶಾ ಅವರು. ನಿಮ್ಮದು ವಾದ್ರಾ ಯಾರೋ, ಗೊಡ್ರಾ ಯಾರೋ, ಗಾಂಧಿ ಯಾರೋ ಗುರುತೇ ಇಲ್ಲ. ಇವರೆಲ್ಲ ನಕಲಿ ಗಾಂಧಿಗಳು. ಯಾರದೋ ಅಡ್ರೆಸ್ ತಂದು ಇಟ್ಟುಕೊಂಡು ಹುಟ್ಟಿವೆ. ಆ ರೀತಿ ಗಾಂಧಿ ಹೆಸರಿನಲ್ಲಿ ದೇಶ ಲೂಟಿ ಮಾಡಿದ್ದಾರೆ ಎಂದು ದೂರಿದರು.

ಪ್ರಿಯಾಂಕ್ ಖರ್ಗೆ ಹಾಗೂ ಪ್ರಿಯಾಂಕ್ ವಾದ್ರಾ ಹೆಸರಿನ ಬಗ್ಗೆ ವ್ಯಂಗ್ಯವಾಡಿದ ಯತ್ನಾಳ್, ಇದರಲ್ಲಿ ಗಂಡು ಯಾವುದೋ, ಹೆಣ್ಣು ಯಾವುದೋ, ನಂಗೆ ಗೊತ್ತೇ ಇಲ್ಲ. ಪ್ರಿಯಾಂಕ್ ಅನ್ನೋದು ಸ್ತ್ರೀ ಲಿಂಗವೋ ಅಥವಾ ಪುಲ್ಲಿಂಗವೋ? ಎಂದು ಪ್ರಶ್ನಿಸಿದರು.

ಡಿ.ಕೆ ಶಿವಕುಮಾರ್​ ವಿರುದ್ಧ ವಾಗ್ದಾಳಿ:ಎಲ್ಲ ಲೂಟಿ ಹೊಡೆದಿದ್ದಾರೆ. ಆದರೆ ಇದೀಗ ನಮಗೆ ಭ್ರಷ್ಟಾಚಾರ ಅಂತಾ ಹೇಳ್ತಾರೆ. ಇವರು ತಿಹಾರ ಜೈಲಿಗೆ ಹೋಗಿದ್ದು ಸ್ವಾತಂತ್ರ್ಯ ಹೋರಾಟಕ್ಕಾ?, ಮಹಾದಾಯಿ ನೀರಿನ‌ ಸಲುವಾಗಿ ಹೋಗಿದ್ರಾ? ಅಥವಾ ಮೇಕೆದಾಟು ದಾಟಲು ಹೋಗಿದ್ರಾ? ಎಂದು ಪ್ರಶ್ನಿಸಿದರು. ಮಾಡೋದೆಲ್ಲ ಕಳ್ಳತನ. ಆದರೆ ಬಿಜೆಪಿಯವರ ಮೇಲೆ 40 ಪರ್ಸೆಂಟ್​ ಕಮಿಷನ್​ ಆರೋಪ ಮಾಡುತ್ತಾರೆ. ಇಡೀ ಕನಕಪುರದಲ್ಲಿ ಗುಡ್ಡಗಳೆಲ್ಲ ಖಾಲಿಯಾಗಿವೆ ಎಂದು ಯತ್ನಾಳ್​ ಕಿಡಿಕಾರಿದರು.

ಇಂದು ನಮ್ಮ ಮಂದಿಗೆ ಕಿಮ್ಮತ್ತಿಲ್ಲ ಎನ್ನುವಂತಾಗಿದೆ. ಈ ದೇಶದಲ್ಲಿ ಮುಸ್ಲಿಮರಿಗಾಗಿ ನಾವಿದಿವಾ? ಅನ್ನುವಂತಾಗಿದೆ. ಗಣಪತಿ ಹಬ್ಬ ಸೇರಿ ಎಲ್ಲದಕ್ಕೂ ನಮಗೆ ಅನುಮತಿ ಬೇಕು. ಪೊಲೀಸರು ಸುಪ್ರೀಂಕೋರ್ಟ್ ಆರ್ಡರ್ ಇದೆ, ಮೈಕ್ ಹಾಕಬೇಡಿ ಎನ್ನುತ್ತಾರೆ. ಆದರೆ ಮುಸ್ಲಿಮರಿಗೆ ಈ ನಿಯಮ ಇಲ್ಲವೇ? ಎಂದು ಪ್ರಶ್ನಿಸಿದರು. ನಮಗೆ ಮೈಕ್, ಡಿಜೆ ಹಾಕಬೇಡಿ ಎನ್ನುತ್ತಾರೆ. ಗಣಪತಿ ಕೂರಿಸಲು ಅನುಮತಿ ಬೇಕು ಎನ್ನುತ್ತಾರೆ. ಆದರೆ ನಮ್ಮ ವಿಜಯಪುರದಲ್ಲಿ ಇದೆಲ್ಲವನ್ನೂ ನಾನು ತೆಗೆದು ಹಾಕಿದ್ದೇನೆ. ಪೊಲೀಸರು ಹಾಗೂ ಕಾರ್ಪೋರೇಶನ್ ಅಧಿಕಾರಿಗಳು ಗಣಪತಿ ಕುರಿಸುವ ಪೆಂಡಾಲ್ ಬಳಿ ಅವರೇ ಬಂದು ಬರೆದುಕೊಂಡು ಬರಬೇಕು. ಗಣಪತಿ ಕೂರಿಸಲಿಕ್ಕೆ ಮೊದಲು‌ ನಾಲ್ಕೂವರೆ ಸಾವಿರ ತೆಗೆದುಕೊಳ್ಳುತ್ತಿದ್ದರು. ಈಗ ಹಣ ಇಲ್ಲ. ಎಲ್ಲವೂ ಉಲ್ಟಾ ಆಗಿದೆ. ನಾನೇ ಒಂದೊಂದು ಗಣಪತಿಗೆ ಐದು ಸಾವಿರ ಕೊಡುತ್ತೇನೆ ಎಂದು ಕಾಂಗ್ರೆಸ್ ಪಕ್ಷದ ಮುಸ್ಲಿಂ ಓಲೈಕೆ ವಿರುದ್ಧ ಯತ್ನಾಳ್​ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ನಮ್ಮ ಅಭ್ಯರ್ಥಿಯನ್ನು ಕಡೆಗಣಿಸುವ ಮಾತೇ ಇಲ್ಲ: ಬಸನಗೌಡ ಪಾಟೀಲ್​ ಯತ್ನಾಳ್​

ABOUT THE AUTHOR

...view details