ಕರ್ನಾಟಕ

karnataka

ETV Bharat / state

ಗದಗ್​​​ನಲ್ಲಿ 5 ಮಂದಿ ಸೋಂಕಿತರು ಡಿಸ್ಚಾರ್ಜ್​​: ವೈದ್ಯರ ಕಾಲಿಗೆ ನಮಸ್ಕರಿಸಿ ಸಂತಸ - GIIMS

ಗದಗದಲ್ಲಿ ಇಂದು ಮತ್ತೆ ಐದು ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮರಳಿದ್ದಾರೆ. ಈ ವೇಳೆ ಗುಣಮುಖನಾದ ವ್ಯಕ್ತಿಯೊಬ್ಬ ಖುಷಿಯಿಂದ ವೈದ್ಯರ ಕಾಲು ಮುಟ್ಟಿ ನಮಸ್ಕರಿಸಲು ಮುಂದಾಗಿದ್ದ. ಬಳಿಕ ಸಿಬ್ಬಂದಿ ಗುಣಮುಖರಾದ ಎಲ್ಲರಿಗೂ ಚಪ್ಪಾಳೆ ತಟ್ಟಿ ಬೀಳ್ಕೊಟ್ಟಿದ್ದಾರೆ.

5 more coronavirus cases recovers in Gadag: discharged from hospital
ಗದಗ್​​​ನಲ್ಲಿ 5 ಮಂದಿ ಸೋಂಕಿತರು ಡಿಸ್ಚಾರ್ಜ್​​: ವೈದ್ಯರ ಕಾಲಿಗೆ ನಮಸ್ಕರಿಸಿ ಸಂತಸ

By

Published : May 28, 2020, 10:42 PM IST

ಗದಗ: ಜಿಲ್ಲೆಯಲ್ಲಿಂದು ಮತ್ತೆ ಐವರು ಕೊರೊನಾ ಸೋಂಕಿತರು ಬಿಡುಗಡೆಯಾಗಿದ್ದಾರೆ. ಗದಗ ಜಿಮ್ಸ್ ನಿರ್ದೇಶಕ ಪಿ.ಎಸ್ ಭೂಸರಡ್ಡಿ ಈ ಬಗ್ಗೆ ಸ್ಪಷ್ಟಪಡಿಸಿದರು. ಇಂದು ಗದಗನ‌ ಕೋವಿಡ್-19 ಆಸ್ಪತ್ರೆಯಿಂದ ಪಿ-973, ಪಿ-1178 ಪಿ-1180, ಪಿ-1181 ಹಾಗೂ ಪಿ-1182 ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾದರು.

ಈ ವೇಳೆ ವ್ಯಕ್ತಿಯೊಬ್ಬ ವೈದ್ಯರ ಕಾಲಿಗೆ ನಮಸ್ಕರಿಸಲು ಮುಂದಾದ ಘಟನೆಯೂ ನಡೆಯಿತು. ಗುಣಮುಖರಾಗಿ ಮನೆಗೆ ತೆರಳುತ್ತಿರುವುದರಿಂದ ಖುಷಿಯಾಗಿ ಕೃತಜ್ಞತೆ ಸಲ್ಲಿಸಲು ನಮಸ್ಕಾರಕ್ಕೆ‌ ಮುಂದಾಗಿದ್ದ. ಈ ವೇಳೆ, ಸಿಬ್ಬಂದಿ ಚಪ್ಪಾಳೆ ತಟ್ಟಿ ಎಲ್ಲರನ್ನೂ ಬೀಳ್ಕೊಟ್ಟರು.

ಗದಗ್​​​ನಲ್ಲಿ 5 ಮಂದಿ ಸೋಂಕಿತರು ಡಿಸ್ಚಾರ್ಜ್​​: ವೈದ್ಯರ ಕಾಲಿಗೆ ನಮಸ್ಕರಿಸಿ ಸಂತಸ

5 ಜನ ಗುಣಮುಖರಾಗುವುದರ ಮೂಲಕ 35ಕ್ಕೆ ಏರಿದ್ದ ಸೋಂಕಿತರ ಸಂಖ್ಯೆ 23ಕ್ಕಿಳಿದಿದೆ. ಒಟ್ಟು 35 ಸೋಂಕಿತರ ಪೈಕಿ ಇದೂವರೆಗೂ 11 ಜನ ಗುಣಮುಖರಾಗಿ ಮನೆ ಸೇರಿದ್ದಾರೆ.‌ ಓರ್ವ ಸೋಂಕಿತ ವೃದ್ಧೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಉಳಿದ 23 ಸೋ‌ಂಕಿತರಿಗೆ ಕೊರೊನಾ ವಾರ್ಡ್​ನಲ್ಲಿ ಚಿಕಿತ್ಸೆ ‌ಮುಂದುವರಿದಿದೆ.

ಇಂದು ಬಿಡುಗಡೆಯಾದವರ ವಿವರ

  • ಪಿ. 973 (28 ವರ್ಷದ ಪುರುಷ ರೋಗಿ, ಮಂಜುನಾಥ ನಗರ ಗದಗ) ಇವರನ್ನು ಕೋವಿಡ್ ಸೋಂಕಿತ ಎಂದು ಗುರುತಿಸಿ ಮೇ. 12ರಂದು ಜಿಮ್ಸ್​ನಲ್ಲಿ ಗಂಟಲು ದ್ರವದ ಮಾದರಿಯನ್ನು ತೆಗೆದುಕೊಂಡಿದ್ದು, ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣ ಮೇ.14ರಂದು ಕೋವಿಡ್ ಪ್ರತ್ಯೇಕತಾ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು.
  • ಪಿ. 1178 (30 ವರ್ಷದ ಪುರುಷ ರೋಗಿ, ದೇರಿಹಾಲ ಶಿರೋಳ ಗದಗ) ಇವರನ್ನು ಕೋವಿಡ್ ಸೋಂಕಿತ ಎಂದು ಗುರುತಿಸಿ ಮೇ. 16ರಂದು ಜಿಮ್ಸ್​​ನಲ್ಲಿ ಗಂಟಲು ದ್ರವ ಮಾದರಿಯನ್ನು ತೆಗೆದುಕೊಂಡಿದ್ದು, ಅವರಿಗೆ ಸೋಂಕು ದೃಢಪಟ್ಟ ಕಾರಣ ಮೇ.17ರಂದು ಕೋವಿಡ್ ಪ್ರತ್ಯೇಕತಾ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು.
  • ಪಿ. 1180(58 ವರ್ಷದ ಪುರುಷ ರೋಗಿ, ಗಂಜಿಬಸವೇಶ್ವರ ವೃತ್ತ, ಗದಗ) ಇವರಿಗೆ ಮೇ. 16ರಂದು ಸೋಂಕು ದೃಢಪಟ್ಟ ಕಾರಣ ಒಳರೋಗಿಯಾಗಿ ದಾಖಲಿಸಲಾಗಿತ್ತು.
  • ಪಿ. 1181 (32 ವರ್ಷದ ಪುರುಷ ರೋಗಿ, ಗಂಜಿಬಸವೇಶ್ವರ ವೃತ್ತ, ಗದಗ) ಇವರನ್ನು ಕೋವಿಡ್ ಸೋಂಕಿತ ಎಂದು ಗುರುತಿಸಿ ಮೇ.16 ರಂದು ಜಿಮ್ಸ್​ನಲ್ಲಿ ಗಂಟಲು ದ್ರವದ ಮಾದರಿಯನ್ನು ತೆಗೆದುಕೊಂಡಿದ್ದು, ಅವರಿಗೆ ಸೋಂಕು ದೃಢಪಟ್ಟ ಕಾರಣ ಮೇ. 17 ರಂದು ಕೋವಿಡ್ ಪ್ರತ್ಯೇಕತಾ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು.
  • ಪಿ. 1182 (12 ವರ್ಷದ ಪುರುಷ ರೋಗಿ, ಗಂಜಿಬಸವೇಶ್ವರ ವೃತ್ತ, ಗದಗ) ಇವರನ್ನು ಮೇ. 17ರಂದು ಕೋವಿಡ್ ಪ್ರತ್ಯೇಕತಾ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು.

ABOUT THE AUTHOR

...view details