ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ಯುವಕರ ಗುಂಪೊಂದು ಇಬ್ಬರಿಗೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ದೇವಾಂಗಪೇಟೆಯ ಸ್ಮಶಾನದ ಬಳಿ ನಡೆದಿದೆ.
ಕಾರ್ತಿಕ್ ಹಾಗೂ ನಾಗರಾಜ್ ಎಂಬುವರ ಜೊತೆ ಯುವಕರ ಗುಂಪೊಂದು ಜಗಳ ತಗೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೇರಿದ್ದು, ಇಬ್ಬರ ಕುತ್ತಿಗೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ತೀವ್ರವಾಗಿ ಗಾಯಗೊಂಡ ಯುವಕರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.