ಕರ್ನಾಟಕ

karnataka

ETV Bharat / state

ಫೇಸ್​ಬುಕ್​ನಲ್ಲಿ 'ಚೌಕಿದಾರ್' ನಾಮಫಲಕ: ಎಎಸ್ಐಗೆ ಚುನಾವಣಾಧಿಕಾರಿಯಿಂದ ನೋಟಿಸ್

ಲಕ್ಷ್ಮಣ ಪಾಟೀಲ್ ಎಂಬುವರು ನೈಋತ್ಯ ರೈಲ್ವೇ ವಲಯದ ಭದ್ರತಾ ಪೋಲಿಸ್ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಫೇಸ್‌ಬುಕ್‌ ಅಕೌಂಟ್​ನಲ್ಲಿ ಮೋದಿಪರ ಪ್ರಚಾರದ ಚೌಕಿದಾರ್ ಹೆಸರನ್ನು ಬಳಸಿಕೊಂಡು ಪೋಸ್ಟ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

By

Published : Mar 31, 2019, 11:27 AM IST

Updated : Mar 31, 2019, 12:11 PM IST

ಲಕ್ಷ್ಮಣ ಪಾಟೀಲ್

ಹುಬ್ಬಳ್ಳಿ:ಫೇಸ್​ಬುಕ್ ಪ್ರೊಫೈಲ್​ನಲ್ಲಿ ' ಮೈ ಭೀ ಚೌಕಿದಾರ್' ಎಂದು ಬರೆದುಕೊಂಡಿದ್ದ ರೈಲ್ವೆ ಸುರಕ್ಷಾ ದಳದ ( ಆರ್​ಪಿಎಫ್‌) ಎಸ್​ಐಗೆ ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ನೋಟಿಸ್ ಜಾರಿಗೊಳಿಸಿದ್ದಾರೆ‌.

ಲಕ್ಷ್ಮಣ ಪಾಟೀಲ್ ಎಂಬುವರು ನೈಋತ್ಯ ರೈಲ್ವೇ ವಲಯದ ಭದ್ರತಾ ಪೋಲಿಸ್ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಫೇಸ್‌ಬುಕ್‌ ಅಕೌಂಟ್​ನಲ್ಲಿ ಮೋದಿಪರ ಪ್ರಚಾರದ ಚೌಕಿದಾರ್ ಹೆಸರನ್ನು ಬಳಸಿಕೊಂಡು ಪೋಸ್ಟ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಲಕ್ಷ್ಮಣ ಪಾಟೀಲ್

ಸರ್ಕಾರಿ ನೌಕರರಾಗಿ ಪ್ರಧಾನಿ ಮೋದಿ ಪರ ಪ್ರಚಾರದ "ಚೌಕಿದಾರ್" ಪೋಸ್ಟನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.‌ ಹೀಗಾಗಿ ಜಿಲ್ಲಾ ಚುನಾವಣಾಧಿಕಾರಿ ನೋಟಿಸ್ ಜಾರಿ‌ ಮಾಡಿದ್ದಾರೆ.

ಈ ವಿಚಾರ ಚುನಾವಣಾಧಿಕಾರಿ ಗಮನಕ್ಕೆ ಬಂದಿದೆ ಎಂಬುದನ್ನು ಅರಿತ ಲಕ್ಷ್ಮಣ ಪಾಟೀಲ್ ಪ್ರೊಫೈಲ್ ಚಿತ್ರವನ್ನು ಅಳಿಸಿದ್ದಾರೆ. ಆದ್ರೆ ಹೆಸರಿನ ಮುಂದೆ ಬರೆದಿರುವ ಬರಹ ಹಾಗೆಯೇ ಉಳಿದಿದೆ.

Last Updated : Mar 31, 2019, 12:11 PM IST

ABOUT THE AUTHOR

...view details