ಕರ್ನಾಟಕ

karnataka

By

Published : Nov 10, 2020, 8:12 PM IST

Updated : Nov 10, 2020, 9:59 PM IST

ETV Bharat / state

ಜನರು ಕೊಟ್ಟಂತಹ ತೀರ್ಪನ್ನು ನಾವು ಸ್ವೀಕಾರ ಮಾಡಲೇಬೇಕು: ಮಾಜಿ ಸಿಎಂ ದಿಗಂಬರ ಕಾಮತ್

ಬಿಹಾರ ಚುನಾವಣೆಯಲ್ಲಿ ಎಮ್​ಜಿಬಿ ಕಾಂಗ್ರೆಸ್ ಮೈತ್ರಿ ಕೂಟ ಬಹಳ ಅಂತರದಲ್ಲಿ ಸೋಲು ಕಾಣದು. ನಾವು ಸತತವಾಗಿ ಪ್ರಯತ್ನ ಮಾಡುತ್ತಿದ್ದೇವೆ.ಜನರು ಕೊಟ್ಟಂತಹ ತೀರ್ಪನ್ನು ನಾವು ಸ್ವೀಕಾರ ಮಾಡಲೇಬೇಕು ಎಂದು ಮಾಜಿ ಸಿಎಂ ದಿಗಂಬರ ಕಾಮತ್ ಹೇಳಿದ್ದಾರೆ.

ಮಾಜಿ ಸಿಎಂ ದಿಗಂಬರ ಕಾಮತ್
ಮಾಜಿ ಸಿಎಂ ದಿಗಂಬರ ಕಾಮತ್

ಹುಬ್ಬಳ್ಳಿ:ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆ ಜನರು ಕೊಟ್ಟಂತಹ ತೀರ್ಪನ್ನು ನಾವು ಸ್ವೀಕಾರ ಮಾಡಲೇಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಗೋವಾ ಮಾಜಿ ಸಿಎಂ ಕಾಮತ್ ಹೇಳಿದ್ದಾರೆ.

ನಗರದ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಅನಿಲ್​​ ಕುಮಾರ್ ಪಾಟೀಲ್ ಅವರ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಬಿಹಾರ ಚುನಾವಣೆಯಲ್ಲಿ ಎಮ್​ಜಿಬಿ ಕಾಂಗ್ರೆಸ್ ಮೈತ್ರಿ ಕೂಟ ಬಹಳ ಅಂತರದಲ್ಲಿ ಸೋಲು ಕಾಣದು. ನಾವು ಸತತವಾಗಿ ಪ್ರಯತ್ನ ಮಾಡುತ್ತಿದ್ದೇವೆ. ಸ್ವಲ್ಪ ಪ್ರಮಾಣದಲ್ಲಿ ಪ್ರಯತ್ನ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪಕ್ಷ‌ ಸಂಘಟನೆ ಮಾಡುತ್ತೇವೆ ಎಂದರು.

ಮಾಜಿ ಸಿಎಂ ದಿಗಂಬರ ಕಾಮತ್

ಕರ್ನಾಟಕದಲ್ಲಿ ನಡೆದ ವಿಧಾನಸಭಾ ಪರಿಷತ್ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮಾತನಾಡಿ,ಅಧಿಕಾರದಲ್ಲಿ ಯಾವ ಪಕ್ಷ ಇರುತ್ತೇ ಆ ಪಕ್ಷಕ್ಕೆ ಗೆಲುವು ಕಾಣುವುದು ಸಹಜ. ಇಲ್ಲಿ ಜನರ ತೀರ್ಪು ಅಂತಿಮವಾಗುತ್ತೆ ಎಂದರು. ಅದೇ ರೀತಿ ಬಿಹಾರದ ಚುನಾವಣೆಯನ್ನು ಬೇರೆ ಬೇರೆ ರೀತಿಯಲ್ಲಿ ನೋಡಬೇಕು. ಜನರಿಗೆ ಯಾರ‌ ಅವಶ್ಯಕತೆ ಇದೇ ಅವರನ್ನೇ ಆಯ್ಕೆ ಮಾಡುತ್ತಾರೆ. ಆದ್ದರಿಂದ ನಾವೂ ಜನರು ನೀಡಿದ ತೀರ್ಪು ಸ್ವೀಕಾರ ಮಾಡಬೇಕಾಗುತ್ತದೆ ಎಂದರು.

Last Updated : Nov 10, 2020, 9:59 PM IST

ABOUT THE AUTHOR

...view details