ಹುಬ್ಬಳ್ಳಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಉತ್ತಮ ಪ್ರಜಾಕೀಯ ಪಕ್ಷದ (ಯುಪಿಪಿ) ಸಂಸ್ಥಾಪಕ ಚಿತ್ರನಟ ಉಪೇಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲೇ ನಾವು ಸ್ಪರ್ಧಿಬೇಕಿತ್ತು. ಆದರೆ ಕಾರಣಾಂತರಗಳಿಂದ ಆಗಿಲ್ಲ. ಇದೀಗ ನಮ್ಮದೇ ಹೊಸ ಪಕ್ಷದಿಂದ ಸ್ಪರ್ಧೆ ಮಾಡುತ್ತೇವೆ. ನಾವು ಈ ಬಾರಿ ಐದು ವಿಚಾರಗಳಿಂದ ಚುನಾವಣೆಗೆ ಹೋಗುತ್ತಿದ್ದೇವೆ.
ಉತ್ತಮ ಪ್ರಜಾಕೀಯ ಪಕ್ಷದ (ಯುಪಿಪಿ) ಸಂಸ್ಥಾಪಕ ಚಿತ್ರನಟ ಉಪೇಂದ್ರ
ಕರಪ್ಷನ್, ಸೆಲೆಕ್ಷನ್, ಎಲೆಕ್ಷನ್, ರಿಜೆಕ್ಷನ್, ಪ್ರಮೋಷನ್ ಎಂಬ ವಿಚಾರದಡಿ ನಾವು ಚುನಾವಣೆಗೆ ಹೊಗುತ್ತಿದ್ದೇವೆ. ಪ್ರಜೆಗಳೇ ಈ ಐದು ವಿಚಾರಗಳನ್ನ ನಿರ್ಧಾರ ಮಾಡುತ್ತಾರೆ. ನಮ್ಮ ಪಕ್ಷದ ಅಭ್ಯರ್ಥಿಗಳನ್ನ ಪ್ರಜೆಗಳೇ ಸೆಲೆಕ್ಷನ್ ಮಾಡ್ತಾರೆ. ನಮ್ಮ ಪಕ್ಷದ ಪ್ರಣಾಳಿಕೆ ಎರಡೂ ರೀತಿಯಲ್ಲಿ ಇರುತ್ತೆ ಎಂದರು.
http://10.10.50.85:6060/reg-lowres/02-February-2019/kn_hbl_020219_upp-upendra_gaddad1_0202digital_00401_515.mp4
ಟೆಕ್ನಾಲಜಿ ಮುಂದುವರೆದಿದೆ, ಜನ ಬದಲಾಗ್ತಾರೆ ಎನ್ನೋ ನಂಬಿಕೆ ಇದೆ. ಡಿಜಿಟಲ್ ಆಗಿ ಅಂತ ಜನರಿಗೆ ಹೇಳುತ್ತಾರೆ. ಆದರೆ ನಮ್ಮ ಲೀಡರ್ಗಳೇ ಪೇಪರ್ ಹಿಡಿದುಕೊಂಡು ಪಾರ್ಲಿಮೆಂಟ್ನಲ್ಲಿ ಮಾತನಾಡುತ್ತಾರೆ. ಯಾಕೆ ಪಿಪಿಟಿ ತಮ್ಮ ಕ್ಷೇತ್ರದ ಬಗ್ಗೆ ಲೈವ್ ಮಾಡಿ ಮಾತನಾಡೋಕ್ಕಾಗಲ್ಲ ಎಂದು ವಾಗ್ದಾಳಿ ನಡೆಸಿದರು.
ಸಂಘಗಳನ್ನು ಮಾಡಿ ಅಲ್ಲೊಬ್ಬ ನಾಯಕನನ್ನು ಮಾಡಿ ಇಂತಹ ಅವ್ಯವಸ್ಥೆ ಸೃಷ್ಟಿ ಮಾಡುವಂತ ಪಕ್ಷ ಇದಲ್ಲ. ಈ ಹಿಂದಿನಿಂದ ನಡೆದುಕೊಂಡು ಬಂದಿರುವಂತ ಮೌಢ್ಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಹಿನ್ನೆಲೆಯಲ್ಲಿ ಉತ್ತಮ ಪ್ರಜಾಕೀಯ ಪಕ್ಷ ಜಾರಿಗೆ ಬಂದಿದೆ. ಪ್ರಜಾಕೀಯ ಪಕ್ಷದ ಗೆಲುವು ಅದು ನಿಜವಾಗಿಯೂ ಜನರ ಗೆಲುವು. ಅಧಿಕಾರ ಐದು ವರ್ಷಗಳ ಕಾಲ ಒಬ್ಬ ವ್ಯಕ್ತಿಯ ಕೈಯಲ್ಲಿರುವಂತದ್ದನ್ನು ಧಿಕ್ಕರಿಸುವ ಮೂಲಕ ಅಧಿಕಾರ ಜನಸಾಮಾನ್ಯರ ಕೈಯಲ್ಲಿರಬೇಕು ಎಂಬುದೇ ಪಕ್ಷದ ಆಶಯವಾಗಿದೆ ಎಂದರು.
ಉತ್ತಮ ಪ್ರಜಾಕೀಯ ಪಕ್ಷದ (ಯುಪಿಪಿ) ಸಂಸ್ಥಾಪಕ ಚಿತ್ರನಟ ಉಪೇಂದ್ರ
ಪ್ರಜಾಕೀಯ ಪಕ್ಷ ವೈಯಕ್ತಿಕ ಸ್ವಾರ್ಥಕ್ಕಾಗಿ ಹುಟ್ಟಿಕೊಂಡಿರುವಂತ ಪಕ್ಷವಲ್ಲ. ಇದು ದೇಶದ ಮೇಲಿನ ಪ್ರೀತಿಯಿಂದ ಹುಟ್ಟಿಕೊಂಡಿದೆ. ಅದ್ಭುತ ಬದಲಾವಣೆಗೆ ಎಲ್ಲರೂ ಕೈ ಜೋಡಿಸಬೇಕು. ಈಗಾಗಲೇ 15 ರಿಂದ 18 ಕ್ಷೇತ್ರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಇನ್ನುಳಿದ ಅಭ್ಯರ್ಥಿಗಳನ್ನು ಕೆಲವೇ ದಿನಗಳಲ್ಲಿ ಆಯ್ಕೆ ಮಾಡಲಾಗುವುದು ಎಂದರು. ಜಾತಿ ವ್ಯವಸ್ಥೆ, ಹಣದ ಆಮಿಷದಿಂದ ಇಲ್ಲಿ ಯಾವುದೇ ಅಧಿಕಾರ ಪಡೆಯುವಂತ ಪ್ರಕ್ರಿಯೆ ನಡೆಯುವುದಿಲ್ಲ ಅವರು ಮಾಹಿತಿ ನೀಡಿದರು.
ಉತ್ತಮ ಪ್ರಜಾಕೀಯ ಪಕ್ಷದ (ಯುಪಿಪಿ) ಸಂಸ್ಥಾಪಕ ಚಿತ್ರನಟ ಉಪೇಂದ್ರ