ಕರ್ನಾಟಕ

karnataka

ಕರಾವಳಿ ಭಾಗ ಹಿಂದುತ್ವ ಲ್ಯಾಬೋರೇಟರಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಜೋಶಿ ತಿರುಗೇಟು

By

Published : Jan 22, 2023, 5:33 PM IST

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ದ್ವಂದ್ವದಲ್ಲಿದ್ದಾರೆ- ಅವರಿಗೆ ಕ್ಷೇತ್ರ ಇಲ್ಲದ ಕಾರಣ ಏನೇನೋ ಮಾತನಾಡುತ್ತಿದ್ದಾರೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾತನಾಡಿದರು

ಧಾರವಾಡ: ಕರಾವಳಿ ಭಾಗ ಹಿಂದುತ್ವದ ಲ್ಯಾಬರೋಟರಿ ಎಂಬ ಪ್ರತಿಪಕ್ಷ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಧಾರವಾಡದಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಶಂಕು ಸ್ಥಾಪನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿರುವ ಹಿನ್ನೆಲೆ ಕರ್ನಾಟಕ ವಿವಿಯ ಹಲವು ಮೈದಾನಗಳನ್ನು ವೀಕ್ಷಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದುತ್ವದ ಲ್ಯಾಬೋರೇಟರಿ ಆಗಬಾರದಾ..? ನೀವು ಹಿಂದುತ್ವ, ಹಿಂದೂ ವಿರೋಧಿನಾ.. ಸಿದ್ದರಾಮಯ್ಯ ಬೇಸಿಕಲಿ ದ್ವಂದದಲ್ಲಿದ್ದಾರೆ ಎಂದು ಹೇಳಿದರು.

ಹೀಗಾಗಿ ಅವರು ಕ್ಷೇತ್ರ ಇಲ್ಲದ ಕಾರಣ ಕನಫ್ಯೂಸ್ ಅಲ್ಲಿ ಏನೆನೋ ಮಾತನಾಡಿರುತ್ತಾರೆ. ಡಿಸ್ಟರ್ಬ್ ಆಗಿ ಏನೇನೋ ಮಾತನಾಡುತ್ತಿದ್ದಾರೆ. ನಮಗೆ ಸಹಮತಿ ಇಲ್ಲದ ಪಾರ್ಟಿಯಲ್ಲಿದ್ದಾರೆ ಅವರು. ಆದರೆ ಅವರ ಬಗ್ಗೆ ಉತ್ತಮ ರಾಜಕಾರಣಿ ಅನ್ನೋ ಭಾವನೆ ಇತ್ತು ನಮಗೆ. ಆದ್ರೆ ಇತ್ತೀಚೆಗೆ ಅವರು ಸೋತ ನಂತರ ಕ್ಷೇತ್ರವೇ ಇರಲಾರದ ಸ್ಥಿತಿ ನಿರ್ಮಾಣ ಆಗಿದೆ. ರಾಹುಲ್ ಗಾಂಧಿ ಸಹವಾಸದಲ್ಲಿ ಜಾಸ್ತಿ ಇರುವುದರಿಂದ ಈಗ ಏನೇನೋ ಮಾತನಾಡುತ್ತಿದ್ದಾರೆ ಎಂದು ಜೋಶಿ ತಿರುಗೇಟು ನೀಡಿದ್ದಾರೆ.

ಹಿಟ್ಲರ್ ಹಾಗೂ ಮುಸಲೋನಿಗೆ ಹೋಲಿಸಿದ್ದಾರೆ. ಹೌದು ಅವರ ಪಾರ್ಟಿಯಲ್ಲಿ ಏನಿದೆ..? ಇವತ್ತಿಗೂ ಪಾಪ ಖರ್ಗೆಯವರನ್ನ ಅಧ್ಯಕ್ಷ ಅಂತ ಒಪ್ಪಿಕೊಳ್ಳಲು ತಯಾರಿಲ್ಲ ಇವರು. ಸಿದ್ದರಾಮಯ್ಯ, ರಾಹುಲ್ ಗಾಂಧಿ ವಿಚಾರವನ್ನು ಪ್ರಚಾರ ಮಾಡ್ತೀವಿ ಅಂತಾರೆ. ಚುನಾಯಿತ ಅಧ್ಯಕ್ಷ ಕೇವಲ ನಾಮಾಕಾವಸ್ಥೆ. ಮೋದಿ ಸಾಹೇಬರು ಒಬ್ಬ ಚುನಾಯಿತ ಪ್ರಧಾನ ಮಂತ್ರಿ. ಅಪಾಯಿಂಟ್​ ಅಲ್ಲ, ಗಾಂಧಿ ಪರಿವಾರದಿಂದ ಬಂದಿದ್ದಾರೆ ಅಂತ ಪ್ರಧಾನಿ ಆಗಿಲ್ಲ. ನೀವು ಬೇಕಾದ್ ಹೇಳಿ. ಜನ ಸ್ವೀಕಾರ ಮಾಡಿದ್ದಾರೆ. ಗುಜರಾತ್, ಉತ್ತರಾಖಂಡ್, ಉತ್ತರ ಭಾರತದಲ್ಲಿ ಚುನಾವಣೆ ಆಯಿತು. ಒಂದೇ ಒಂದು ಭಾಗದಲ್ಲಿ ಇವರ ಎಂಪಿಗಳು ಇಲ್ಲ. ಉತ್ತರ ಭಾರತದಲ್ಲಿ ಎಲ್ಲೂ ಇಲ್ಲ. ಹೀಗಾಗಿ ಅವರ ದುಸ್ಥಿತಿ ಇಂದು ಹೀಗಾಗಿ ಎಂದು ಹರಿಹಾಯ್ದರು.

ಮಾಧ್ಯಮದವರು ನೋಡ್ತಿದ್ದೀರಿ. ಮೋದಿಯವರಿಗೆ ಟೀಕೆ ಮಾಡಿದಷ್ಟು, ಹಾಗೆ‌ ಹೊಗಳಿದಷ್ಟು ಬಂದಿದೆ. ಆದ್ರೆ ಅದೇ ಸಂದರ್ಭದಲ್ಲಿ ಮೋದಿ ಟೀಕೆ ಮಾಡಿದಷ್ಟು ಯಾರಿಗೂ ಮಾಡಿಲ್ಲ. ಇಷ್ಟಾದರೂ ಸಹ ಮಾತಾಡ್ತಾರೆ ಅಂದ್ರೆ ಅದು ಅವರ ಮೆಂಟಲ್ ಬ್ಯಾಲೆನ್ಸ್ ತಪ್ಪಿದೆ ಎಂದರು.

ಕಾಂಗ್ರೆಸ್​ ಪಕ್ಷದವರಿಗೆ ಸುಳ್ಳು ಹೇಳುವುದೇ ಕಾಯಕ: ಇನ್ನೊಂದೆಡೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನ ಡಿಎನ್ಎನಲ್ಲಿ ನಿವೃತ್ತಿ, ಪ್ರಾಮಾಣಿಕತೆ ಇಲ್ಲ. ರಾಹುಲ್ ಗಾಂಧಿ ನಿವೃತ್ತಿ ಪಡೆದಿದ್ದಾರೆ ಏನು? ಎಂದು ಪ್ರಶ್ನಿಸಿದರು. ಕಾಂಗ್ರೆಸ್​ ಪಕ್ಷದವರಿಗೆ ಸುಳ್ಳು ಹೇಳುವುದೇ ಕಾಯಕ.‌ ಮಧ್ಯಪ್ರದೇಶದಲ್ಲಿ ನೀವು ಹೇಳಿದಂತೆ ಯಾಕೆ ಮಾಡಿಲ್ಲ ಎಂದು ಕೇಳಿದರು.

ಟ್ರಾನ್ಸ್ಪರೇಂಟ್ ವ್ಯವಸ್ಥೆ ಹದೆಗೆಡಿಸುತ್ತಿದ್ದಾರೆ: ಸಿಎಂ ಬಸವರಾಜ ಬೊಮ್ಮಾಯಿ ಅತ್ಯಂತ ಟ್ರಾನ್ಸ್​ಫರೆಂಟ್​ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ ಅವರಿಗೆ ದುಡ್ಡು ಹೊಡೆಯಲು ಸಿಗೋದಿಲ್ಲ. ಅದಕ್ಕೆ ಆ ಪಾರದರ್ಶಕ ವ್ಯವಸ್ಥೆ ಹದೆಗೆಡಿಸುತ್ತಿದ್ದಾರೆ. ಈ ಹಿಂದೆ ತಾವು ದುಡ್ಡು ಹೊಡೆಯಲಿಕ್ಕೆ ಹೇಗೆ ಲೋಕಾಯುಕ್ತ ಸಂಸ್ಥೆಯನ್ನು ಹಾಳು ಮಾಡಿದರಲ್ಲ, ಹಾಗೆ ಮುಂದಿನ ವ್ಯವಸ್ಥೆ ಹಾಳು ಮಾಡ್ತಾರೆ. ಸಿದ್ದರಾಮಯ್ಯ ಕರಪ್ಟ್ ರಾಜಕಾರಣಿ ಸತ್ಯ. ಹೀಗಾಗಿಯೇ ಚಾಮುಂಡಿ ಕ್ಷೇತ್ರದಲ್ಲಿ ಅವರನ್ನು ಜನ ಮನೆಗೆ ಕಳುಹಿಸಿದ್ರು. ನೀವು‌ ಇಡೀ ರಾಜದಲ್ಲಿ ಕ್ಷೇತ್ರ ಹುಡುಕಾಡುತ್ತೀರಿ. ಯಾಕೆ ಮೈಸೂರಿನಲ್ಲಿ ನಿಲ್ತಿಲ್ಲ? ಅಂದ್ರೆ ನೀವು ಕೆಲಸ ಮಾಡಿಲ್ಲ. ನೀವು ಹೇಳಿದ್ದ ಮಾತು ನಡೀತಿಲ್ಲ ಅಂತಾ ಇದರ ಅರ್ಥ ಎಂದು ಜೋಶಿ ತಿರುಗೇಟು ನೀಡಿದರು.

ಕಾಂಗ್ರೆಸ್​ನಲ್ಲಿ ಸರ್ವಾಧಿಕಾರ ತುಂಬಿ ತುಳುಕುತ್ತಾ ಇದೆ: ಎಲ್ಲವೂ ಕಾನೂನು ಮೇಲೆ ನಡೆಯಲ್ಲ. ಜನ ಏನು ತೀರ್ಮಾನ ಮಾಡಬೇಕೋ‌ ಅದನ್ನ ಮಾಡ್ತಾರೆ. ಪೊಲಿಟಿಕಲ್ ಫೈಟ್​ ಇರ್ತಾವೆ, ನಾವು‌ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ‌ ನಮ್ಮ ದೇಶದ ಚುನಾಯಿತ ಪ್ರಧಾನ ಮಂತ್ರಿ. ಪಾಪ ಖರ್ಗೆ ಅವರನ್ನ ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರದ್ದು ಏನು ಹೇಳಲ್ಲ, ರಾಹುಲ್ ಗಾಂಧಿ ಸಂದೇಶ ಅಂತಾ ಯಾಕೆ ಹೇಳ್ತಾರೆ. ಖರ್ಗೆ ಅವರದ್ದು ಅಂತಾ ಯಾಕೆ ಹೇಳಲ್ಲ. ಕಾಂಗ್ರೆಸ್​ನಲ್ಲಿ ಸರ್ವಾಧಿಕಾರ ತುಂಬಿ ತುಳುಕುತ್ತಾ ಇದೆ. ಯಾವುದು ಸರ್ವೆ ಮಾಡಿದ್ದು ಅಂತಾ ನನಗೆ ಗೊತ್ತಿಲ್ಲ, ನಾವು ಮತ್ತೊಮ್ಮೆ ಕಮ್ ಬ್ಯಾಕ್​​ ಮಾಡ್ತೇವಿ ಎಂದು ಕೇಂದ್ರ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಓದಿ :ಹಣ ಕೊಟ್ಟು ಕರೆಂಟ್​​ ಬೇಕು ಎಂದಾಗ ಕೊಡದೇ ಈಗ ಪುಕ್ಕಟ್ಟೆ ಭರವಸೆ ಕೊಡುತ್ತಿದ್ದಾರೆ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ABOUT THE AUTHOR

...view details