ಕರ್ನಾಟಕ

karnataka

ETV Bharat / state

ಲಾರಿ ಬೊಲೆರೋ ಅಪಘಾತ: ಸ್ಥಳದಲ್ಲಿ ಇಬ್ಬರ ಸಾವು - ಶಾಸಕ ಹರತಾಳು ಹಾಲಪ್ಪ

ಶಾಸಕ ಹರತಾಳು ಹಾಲಪ್ಪ ರಸ್ತೆಯಲ್ಲಿ ಶಾಲಾ ಮಕ್ಕಳಿಗೆ ಹೆದ್ದಾರಿಯಲ್ಲಿ ರಸ್ತೆ ನಿಯಮಗಳ ಬಗ್ಗೆ ಪಾಠ ಮಾಡಿರುವ ಪ್ರಸಂಗ ಮಾಡಿದೆ.

ಲಾರಿ ಬುಲೆರೋ ಅಪಘಾತ
ಲಾರಿ ಬುಲೆರೋ ಅಪಘಾತ

By

Published : Jan 17, 2023, 8:33 PM IST

Updated : Jan 17, 2023, 10:14 PM IST

ಲಾರಿ ಹಾಗೂ ಬೊಲೆರೋ ವಾಹನದ ನಡುವೆ ಭೀಕರ ರಸ್ತೆ ಅಪಘಾತ

ಧಾರವಾಡ: ಲಾರಿ ಹಾಗೂ ಬೊಲೆರೋ ವಾಹನದ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ನವಲಗುಂದ ನರಗುಂದ ನಡುವಿನ ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಸೊಲ್ಲಾಪುರ ಮೂಲದ ರಾಜು ಹಿರೇಮಠ (21) ಹಾಗೂ ವಿಜಯ ಕಾಶೆ (23) ಎಂಬಾತರು ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಸೊಲ್ಲಾಪುರ ರಾಷ್ಟೀಯ ಹೆದ್ದಾರಿ ಬೆಳವಟಗಿ ಫಾರ್ಮ್ ಹತ್ತಿರ ವೇಗವಾಗಿ ಬರುತ್ತಿದ್ದ ಟೊಮೇಟೊ ತುಂಬಿದ ಬುಲೆರೋ ವಾಹನ ಲಾರಿಗೆ ಗುದ್ದಿದೆ. ಪರಿಣಾಮ ಬೊಲೆರೋ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ನವಲಗುಂದ ಪೊಲೀಸರು ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆಗಾಗಿ ನವಲಗುಂದ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ.

ಬೆಂಕಿಯಿಂದ ಹೊತ್ತಿ ಉರಿದ ವಾಹನ

ಇನ್ನೊಂದೆಡೆ, ನಿಂತಿದ್ದ ಎರಡು ವಾಹನಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸುಟ್ಟು ಕರಕಲಾದ ಘಟನೆ ನಗರದ ಮಕ್ಕಳ ರಕ್ಷಣಾ ಘಟಕದ ಆವರಣದಲ್ಲಿ ನಡೆದಿದೆ. ಬೆಂಕಿ ಹೊತ್ತಿ ಎರಡು ವಾಹನಗಳು ಧಗಧಗನೇ ಉರಿದಿದೆ. ಇಲ್ಲಿನ ಮಕ್ಕಳ ರಕ್ಷಣಾ ಘಟಕದಲ್ಲಿನ ಕಚೇರಿ ಆವರಣದಲ್ಲಿ ನಿಂತಿದ್ದ ಮಿನಿ ಬಸ್ ಹಾಗೂ ಜೀಪ್‌ಗೆ ಈ ಆಕಸ್ಮಿಕ ಬೆಂಕಿ ತಗುಲಿದೆ. ಇದರಿಂದಾಗಿ ಎರಡು ವಾಹನಗಳು ಸುಟ್ಟು ಬೂದಿಯಾಗಿವೆ.

ಬೆಂಕಿ ಉರಿಯುತ್ತಿದ್ದಂತೆ ಕಚೇರಿ ಸಿಬ್ಬಂದಿ ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದರು. ವಾಹನಗಳಿಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದು ತಿಳಿದು ಬರಬೇಕಿದೆ.

ತುಮಕೂರಿನಲ್ಲಿ ದಂಪತಿ ಸಾವು: ನೀರಿನ ಕಟ್ಟೆಗೆ ಬಿದ್ದು ದಂಪತಿ ಮೃತಪಟ್ಟಿರುವ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ಮುಗಳೂರು ಗೊಲ್ಲರಹಟ್ಟಿ ಕಟ್ಟೆಯಲ್ಲಿ ನಡೆದಿದೆ. ಜುಂಜೇಗೌಡ (30) ಪತ್ನಿ ಶಿವಲಿಂಗಮ್ಮ(27) ಮೃತಪಟ್ಟವರಾಗಿದ್ದಾರೆ. ಕುರಿಗಳ ಮೈ ತೊಳೆಯಲು ಕಟ್ಟೆಗಿಳಿದಿದ್ದ ದಂಪತಿಗಳು ಮುಳುಗಿ ಹೇಗೆ ಮೃತಪಟ್ಟಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ. ಮೃತರು ಮುಗಳೂರು ಗೊಲ್ಲರಹಟ್ಟಿ ನಿವಾಸಿಗಳಾಗಿದ್ದಾರೆ. ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ ಅಪಘಾತದಲ್ಲಿ ಇಬ್ಬರ ಸಾವು:ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಡೆಗೋಡೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಜೋಡ ಗುಡಿಯ ಬಳಿ ನಡೆದಿದೆ. ಮೃತರು ಪ್ರಭು ಖ್ವಾಯಗೋಳ (34), ರಾಮಗೊಂಡ ಖ್ವಾಯಗೋಳ (23) ಎಂದು ಗುರುತಿಸಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಅಪಘಾತವು ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಶಾಸಕ ಹರತಾಳು ಹಾಲಪ್ಪ ಅವರು ಮಾತನಾಡಿದರು

ರಸ್ತೆ ಸುರಕ್ಷತಾ ನಿಯಮ ಬೋಧಿಸಿದ ಶಾಸಕ ಹರತಾಳು ಹಾಲಪ್ಪ : ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಪದೇ ಪದೆ ವಾಹನಗಳು ಶಾಲಾ- ಕಾಲೇಜು ವಿದ್ಯಾರ್ಥಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಬೆನ್ನಲ್ಲೇ ಸಾಗರ ಶಾಸಕ ಹರತಾಳು ಹಾಲಪ್ಪ ರಸ್ತೆಯಲ್ಲಿ ಶಾಲಾ ಮಕ್ಕಳಿಗೆ ಹೆದ್ದಾರಿಯಲ್ಲಿ ರಸ್ತೆ ನಿಯಮಗಳ ಬಗ್ಗೆ ಪಾಠ ಮಾಡಿರುವ ಪ್ರಸಂಗ ಮಾಡಿದೆ.

ಬದಲಾದ ನಿಯಮಗಳು ನಿಮಗೆ ಗೊತ್ತಿಲ್ಲವಾ, ನಡೆದುಕೊಂಡು ಹೋಗುವಾಗ ಪಾದಾಚಾರಿಗಳು ಬಲಕ್ಕೆ ಚಲಿಸಬೇಕು ಎಂದು ಬುದ್ಧಿವಾದ ಹೇಳಿರುವ ವಿಡಿಯೋ ಸದ್ದು ಮಾಡುತ್ತಿದೆ. ಆನಂದಪುರ ಗೌರಿ ಕೆರೆ ಏರಿಯ ಮೇಲೆ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಶಾಸಕ ಹಾಲಪ್ಪ ತೆರಳುತ್ತಿರುವಾಗ ಶಾಲಾ ಮಕ್ಕಳು ಎಡ ಭಾಗದಲ್ಲಿ ಗುಂಪು ಗುಂಪಾಗಿ ಅರ್ಧ ರಸ್ತೆಯನ್ನು ಆಕ್ರಮಿಸಿಕೊಂಡು ತೆರಳುತ್ತಿರುವುದು ಕಂಡು ತಕ್ಷಣ ವಾಹನ ನಿಲ್ಲಿಸಿ ಮಕ್ಕಳಿಗೆ ಬುದ್ಧಿವಾದ ಹೇಳಿದ್ದಾರೆ.

ಓದಿ : 'ಪರೀಕ್ಷಾ ಪೇ ಚರ್ಚಾ' ವೀಕ್ಷಣೆಗೆ ಶಾಲೆಗಳಲ್ಲಿ ಎಲ್‌ಇಡಿ ಸ್ಕ್ರೀನ್: ಸಚಿವ ಬಿ ಸಿ ನಾಗೇಶ್​

Last Updated : Jan 17, 2023, 10:14 PM IST

ABOUT THE AUTHOR

...view details