ಧಾರವಾಡ: ಜಿಲ್ಲೆಯಲ್ಲಿ ಇಂದು ಕೋವಿಡ್ ಸೋಂಕು ದೃಢಪಟ್ಟಿರುವ ಪಿ-1913, ಪಿ-1942, ಪಿ-1943, ಪಿ-1944 ಹಾಗೂ ಪಿ-1945 ಇವರ ಪ್ರಯಾಣದ ವಿವರಗಳನ್ನು ಸಾರ್ವಜನಿಕ ಮಾಹಿತಿಗಾಗಿ ಜಿಲ್ಲಾಧಿಕಾರಿಗಳು ಪ್ರಕಟಿಸಿದ್ದಾರೆ.
ಪಿ-1913 ಪ್ರಯಾಣ ವಿವರ : ಇವರು ಧಾರವಾಡ ನಗರದ ನಿವಾಸಿಯಾಗಿದ್ದು, ಮಾರ್ಚ್ 10 ರಂದು ಮುಂಬೈಗೆ ತೆರಳಿದ್ದರು. ಮೇ 9ರಂದು ಬಾಡಿಗೆ ಕಾರ್ ನಂ. ಎಂಹೆಚ್ - 02 ಇಆರ್ - 4057 ಮೂಲಕ ಮಧ್ಯಾಹ್ನ 2:30ಕ್ಕೆ ಮುಂಬೈಯಿಂದ ಹೊರಟು ರಾತ್ರಿ 10:30ಕ್ಕೆ ನಿಪ್ಪಾಣಿ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ( ಥರ್ಮಲ್ ಸ್ಕ್ರೀನಿಂಗ್ ) ಮಾಡಿಸಿಕೊಂಡಿದ್ದರು. ನಂತರ ಮೇ 10ರಂದು ತಡರಾತ್ರಿ 1 ಗಂಟೆಗೆ ಧಾರವಾಡ ತಲುಪಿದ್ದರು. ಮೇ 10 ರಂದು ಅವರ ಮೊದಲ ಬಾರಿಗೆ ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆಗೊಳಪಡಿಸಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಮೊದಲ ಬಾರಿಯ ಗಂಟಲು ದ್ರವ ಪರೀಕ್ಷೆ ನೆಗಟಿವ್ ಬಂದಿರುತ್ತದೆ. ಮೇ 21 ರಂದು ಎರಡನೇ ಬಾರಿಗೆ ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿದೆ. ಮೇ 23 ರಂದು ಪಿ -1913 ಇವರು ಕೋವಿಡ್ -19 ಸೋಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಿ-1942, 1943 ,1944 ಹಾಗೂ 1945 ಪ್ರಯಾಣ ವಿವರ :ಈ ಸೋಂಕಿತರು ಮಹಾರಾಷ್ಟ್ರದ ಮುಂಬೈ ನಿವಾಸಿಗಳು. ಮೇ 20ರಂದು ಕುಟುಂಬದ ಐದು ಜನ ಸದಸ್ಯರು ಹಾಗೂ ಇಬ್ಬರು ಸಂಬಂಧಿಕರು ಬಾಡಿಗೆ ಇನ್ನೋವಾ ಕಾರಿನಲ್ಲಿ ಮುಂಬೈಯಿಂದ ತಡರಾತ್ರಿ 1:30ಕ್ಕೆ ಹೊರಟು ಕರಾಡಿ ಮತ್ತು ಕೊಲ್ಲಾಪುರ ಮಾರ್ಗವಾಗಿ ಬೆಳಿಗ್ಗೆ 9:30ಕ್ಕೆ ನಿಪ್ಪಾಣಿ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ( ಥರ್ಮಲ್ ಸ್ಕ್ರೀನಿಂಗ್ ) ಒಳಪಟ್ಟಿದ್ದರು. ಕಿತ್ತೂರು ಹತ್ತಿರದ ದಾಬಾದಲ್ಲಿ ಮಧ್ಯಾಹ್ನ 2:30ಕ್ಕೆ ಊಟ ಮಾಡಿ, ಸಂಜೆ 4:30ಕ್ಕೆ ಧಾರವಾಡ ತಲುಪಿದ್ದರು. ಇಬ್ಬರು ಸಂಬಂಧಿಕರು ಅದೇ ದಿನ ವಾಪಸ್ ಮುಂಬೈಗೆ ಹಿಂದಿರುಗಿದ್ದರು. 5 ಜನ ಕುಟುಂಬ ಸದಸ್ಯರನ್ನು ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಮೇ 23ರಂದು ಪಿ-1942 , ಪಿ-1943 , ಪಿ-1944 ಹಾಗೂ ಪಿ-1945 ಅವರು ಕೋವಿಡ್ -19 ಸೋಂಕಿತರು ಎಂದು ದೃಢಪಟ್ಟಿದೆ.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಈ ವ್ಯಕ್ತಿಗಳನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆಯಿದ್ದು, ಇವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳು ಕೂಡಲೇ ಕೊರೊನಾ ಸಹಾಯವಾಣಿ 1077ಗೆ ಕರೆ ಮಾಡಿ ತಮ್ಮ ವಿವರಗಳನ್ನು ನೀಡಬೇಕು. ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.