ಧಾರವಾಡ:ಕಾಲೇಜಿನ ಭದ್ರತಾ ಸಿಬ್ಬಂದಿ (ಸೆಕ್ಯೂರಿಟಿ ಗಾರ್ಡ್)ಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ ಖತರ್ನಾಕ್ ಗ್ಯಾಂಗ್ ಒಂದು ಗಂಧದ ಮರ ಕಳ್ಳತನ ಮಾಡಿದ ಘಟನೆ ಕರ್ನಾಟಕ ಕಾಲೇಜಿನಲ್ಲಿ ನಡೆದಿದೆ.
ಸೆಕ್ಯುರಿಟಿಗೆ ಧಮ್ಕಿ ಹಾಕಿ ಗಂಧದ ಮರ ಕಳ್ಳತನ - ಮಾರಕಾಸ್ತ್ರ ತೋರಿಸಿ ಬೆದರಿಕೆ
ಅಂದಾಜು 70 ರಿಂದ 80 ಸಾವಿರ ರೂಪಾಯಿ ಬೆಲೆಬಾಳುವ ಗಂಧದ ಮರವನ್ನು ಕಡಿದುಕೊಂಡು ಹೋಗುವವರೆಗೂ ಸೆಕ್ಯೂರಿಟಿ ಗಾರ್ಡ್ನನ್ನು ಕಳ್ಳರು ತಮ್ಮ ಹಿಡಿತದಲ್ಲೇ ಇಟ್ಟುಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.
ಶುಕ್ರವಾರ ತಡರಾತ್ರಿ ಕಾಲೇಜು ಆವರಣಕ್ಕೆ ಕಾಲಿಟ್ಟ ಈ ಕಳ್ಳರ ಗುಂಪು, ಸೆಕ್ಯುರಿಟಿ ಗಾರ್ಡ್‌ಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿ, ಕಾಲೇಜು ಆವರಣದಲ್ಲಿದ್ದ ಅಂದಾಜು 70 ರಿಂದ 80 ಸಾವಿರ ರೂಪಾಯಿ ಬೆಲೆಬಾಳುವ ಗಂಧದ ಮರವನ್ನು ಕಡಿದುಕೊಂಡು ಹೋಗಿದ್ದಾರೆ. ಅಷ್ಟೊತ್ತಿನವರೆಗೂ ಕಳ್ಳರ ಹಿಡಿತದಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ್, ಕಳ್ಳರು ಪರಾರಿಯಾದ ನಂತರ ಇತರ ಸಿಬ್ಬಂದಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಆನಂತರ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಳ್ಳರ ಪತ್ತೆಗಾಗಿ ಜಾಲ ಬೀಸಿದ್ದಾರೆ.
ಇದನ್ನೂ ಓದಿ:ಎಂಟು ಜನ ಶ್ರೀಗಂಧ ಮರ ಕಳ್ಳರ ಬಂಧನ: ₹3 ಕೋಟಿ ಮೌಲ್ಯದ ಮಾಲು ವಶ