ಕರ್ನಾಟಕ

karnataka

ETV Bharat / state

ಕನ್ನಡ ನಿರ್ಲಕ್ಷ್ಯ ಮಾಡಬೇಕು ಎನ್ನುವ ಭಾವನೆ ಇಲ್ಲ: ಪ್ರಹ್ಲಾದ್​​​​​ ಜೋಶಿ

ಹಿಂದಿ ಬೇಡ, ಆದ್ರೆ ಇಂಗ್ಲಿಷ್​​ ಬೇಕು ಅಂತಾ ಕೆಲವರು ಹೇಳ್ತಾರೆ. ಅವರ ತಾತ, ಮುತ್ತಾತರೇನು ಇಂಗ್ಲಿಷಿನವರೇನು? ಎಲ್ಲರೂ ಹಿಂದಿ ಕಲಿಯಬೇಕು ಅಂತಾ ಅಮಿತ್​ ಶಾ ಹೇಳಿದ್ದಾರೆ. ಅದರರ್ಥ ಕನ್ನಡ ನಿರ್ಲಕ್ಷ್ಯ ಮಾಡಬೇಕು ಎನ್ನುವ ಭಾವನೆ ಅಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಸಮರ್ಥಿಸಿಕೊಂಡಿದ್ದಾರೆ.

ಕನ್ನಡ ನಿರ್ಲಕ್ಷ್ಯ ಮಾಡಬೇಕು ಎನ್ನುವ ಭಾವನೆ ಇಲ್ಲ; ಪ್ರಲ್ಹಾದ ಜೋಶಿ ಸಮರ್ಥನೆ

By

Published : Sep 15, 2019, 4:53 PM IST

ಧಾರವಾಡ:ಹಿಂದಿ ಬೇಡ, ಆದ್ರೆ ಇಂಗ್ಲಿಷ್​​ ಬೇಕು ಅಂತಾ ಕೆಲವರು ಹೇಳ್ತಾರೆ. ಅವರ ತಾತ, ಮುತ್ತಾತರೇನು ಇಂಗ್ಲಿಷಿನವರೇನು? ಎಲ್ಲರೂ ಹಿಂದಿ ಕಲಿಯಬೇಕು ಅಂತಾ ಅಮಿತ್​ ಶಾ ಹೇಳಿದ್ದಾರೆ. ಅದರರ್ಥ ಕನ್ನಡ ನಿರ್ಲಕ್ಷ್ಯ ಮಾಡಬೇಕು ಎನ್ನುವ ಭಾವನೆ ಅಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಸಮರ್ಥಿಸಿಕೊಂಡಿದ್ದಾರೆ.

ಪ್ರಹ್ಲಾದ್​ ಜೋಶಿ, ಕೇಂದ್ರ ಸಚಿವ

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಗ್ಲಿಷ್​​​ ಕಲಿಯಲು ತಯಾರಿದ್ದೇವೆ. ಇಂಗ್ಲಿಷ್​​​ ಮಾಧ್ಯಮ ಶಾಲೆ ಸ್ವಾಗತಿಸುವ ಒಂದು ವರ್ಗ ಕೂಡ ಇದೆ.‌ ಆದರೆ ಹಿಂದಿ ಕಲಿಯಬೇಕು ಅಂತ ಹೇಳಿದ್ರೆ ಯಾಕಿಷ್ಟು ವಿರೋಧ ಮಾಡ್ತಾರೆ ಗೊತ್ತಿಲ್ಲ. ಮೆಟ್ರೋದಲ್ಲಿ ಇಂಗ್ಲಿಷ್​​ ಬೋರ್ಡ್ ನಡೆಯುತ್ತೆ. ಹಿಂದಿ ಬೋರ್ಡ್ ತೆಗಿಬೇಕು ಅಂದರೆ ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಇನ್ನು ನೆರೆ ಪರಿಹಾರದ ತರದ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನಾವೇ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಮನಮೋಹನ್​​ ಸಿಂಗ್ ಸರ್ಕಾರ ಇದ್ದಾಗ ಎಷ್ಟು ಕೊಟ್ಟಿದ್ರು, ನಾವೆಷ್ಟು ಕೊಟ್ಟಿದೇವೆ ಅಂತಾ ಟ್ರ್ಯಾಕ್ ರೆಕಾರ್ಡ್ ನೋಡಲಿ. ಸದ್ಯ ಹತ್ತು ರಾಜ್ಯದಲ್ಲಿ ನೆರೆ ಬಂದಿದೆ. ಹೀಗಾಗಿ ನೆರೆ ಪರಿಹಾರ ಬರುವುದು ವಿಳಂಬ ಆಗುತ್ತಿದೆ. ಈ ಬಗ್ಗೆ ಗೃಹ ಸಚಿವರ ಬಗ್ಗೆ ಮತ್ತೊಮ್ಮೆ ಮಾತನಾಡಿ ಒತ್ತಡ ಹಾಕುತ್ತೇವೆ ಎಂದರು.

ಡಿಕೆಶಿ ಪ್ರಕರಣದಲ್ಲಿ ಏನು ರಾಜಕೀಯ ಮಾಡುತ್ತಿದ್ದೇವೆ ಅಂತಾ ಸ್ಪಷ್ಟಪಡಿಸಲಿ. ಒಂದು ಜನಾಂಗದ ಕೆಲವರನ್ನು ಕರೆದುಕೊಂಡು ಹೋಗಿ ಪ್ರತಿಭಟಿಸುವ ಪ್ರಯತ್ನವನ್ನೂ ಮಾಡಿದ್ರು. ಡಿಕೆಶಿಗೆ ನೂರಾರು ಕೋಟಿ ಯಾವಾಗ? ಎಲ್ಲಿಂದ ಬಂತು ಜನತೆಗೆ ತಿಳಿಸಬೇಕಲ್ವಾ? ಹೈಕೋರ್ಟ್, ಸುಪ್ರೀಂ ಕೋರ್ಟ್ ಕೂಡ ಇವರ ಬೇಲ್ ರದ್ದು ಮಾಡಿವೆ. ಹೀಗಿರುವಾಗ ಹೇಗೆ ರಾಜಕೀಯ ಅಂತಾ ಕಾಂಗ್ರೆಸ್ ಹೇಳುತ್ತೆ ಎಂದರು.

ABOUT THE AUTHOR

...view details