ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಪಕ್ಕದ ಮನೆಯವರ ಜಗಳ ಬಿಡಿಸಲು ಹೋಗಿ ತಾನೇ ಪರಲೋಕ ಸೇರಿದ ಮಹಿಳೆ! - ಹುಬ್ಬಳ್ಳಿ ಪಕ್ಕದ ಮನೆ ಜಗಳ ಸುದ್ಧಿ

ಪಕ್ಕದ ಮನೆಯಲ್ಲಿ ಜಗಳವಾಡುತ್ತಿದ್ದವರಿಗೆ ಬುದ್ಧಿವಾದ ಹೇಳಲು ಹೋದ ಮಹಿಳೆಯೊಬ್ಬರು ಕೊಲೆಗೀಡಾಗಿದ್ದಾಳೆ. ಹುಬ್ಬಳ್ಳಿಯಲ್ಲಿ ಈ ಪ್ರಕರಣ ನಡೆದಿದೆ.

women
ಮಹಿಳೆ

By

Published : Nov 26, 2020, 7:54 AM IST

ಹುಬ್ಬಳ್ಳಿ :ಪಕ್ಕದ ಮನೆಯಲ್ಲಿ ಆರಂಭಗೊಂಡ ಜಗಳ ಮಹಿಳೆಯ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಗರದ ಹೊಸೂರು ವೀರ ಮಾರ್ಗದ ಪ್ರದೇಶದಲ್ಲಿ ನಡೆದಿದೆ. ಕೊಲೆ ಮಾಡಿದ ಆರೋಪಿಯನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಿವಾರ್ ಹಾವಳಿಗೆ 10ಕ್ಕೂ ಹೆಚ್ಚು ರೈಲುಗಳ ಸ್ಥಗಿತ : ಬುಕ್ಕಿಂಗ್ ಹಣ ಮರುಪಾವತಿಗೆ ನಿರ್ಧಾರ

ಗೀತಾ ಕೊಲೆ ಮಾಡಿದ ಆರೋಪಿ, ಮಂಜುಳಾ ಮಣ್ಣವಡ್ಡರ ಕೊಲೆಯಾದ ಮಹಿಳೆ. ಆರೋಪಿ ಗೀತಾ ತನ್ನ ಮನೆಯಲ್ಲಿ ತಾಯಿ ಹಾಗೂ ನಾದಿನಿಯೊಂದಿಗೆ ಜಗಳವಾಡುತ್ತಿದ್ದ ವೇಳೆ ಮಂಜುಳಾ ಮಣ್ಣವಡ್ಡರ ಬಿಡಿಸಲು ಹೋಗಿದ್ದಳು. ಇದಕ್ಕೆ ಸಿಟ್ಟುಗೊಂಡ ಮಂಜುಳಾ ನೀನೇಕೆ ಇಲ್ಲಿ ಜಗಳ ಬಿಡಿಸಲು ಬಂದಿರುವೆ ಎಂದು ಹಲ್ಲೆ ಮಾಡಿದ್ದಾಳೆ ಎನ್ನಲಾಗ್ತಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಂಜುಳಾ ಕೂಡಲೇ ನೆಲಕ್ಕುರುಳಿ ಮೃತಪಟ್ಟಿದ್ದಾಳೆ.

ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ‌ ‌ಪ್ರಕರಣ ದಾಖಲಾಗಿದ್ದು, ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ.

ABOUT THE AUTHOR

...view details