ಹುಬ್ಬಳ್ಳಿ:ಧರ್ಮದ ಹೆಸರಿನಲ್ಲಿ ಗಲಭೆ ಸೃಷ್ಟಿಸುವುದು ಖಂಡನಾರ್ಹ. ಯಾರೂ ಇಂತಹ ಹೀನ ಕೃತ್ಯಗಳನ್ನು ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಧರ್ಮದ ಹೆಸರಿನಲ್ಲಿ ಗಲಭೆ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ: ಸಚಿವ ಶೆಟ್ಟರ್ - Hubli
ಯಾವುದೇ ಧರ್ಮಗುರುಗಳಿಗೆ ಗೌರವ ಕೊಡುವದು ನಮ್ಮ ಧರ್ಮ. ಧರ್ಮಗುರುಗಳ ವಿರುದ್ಧ ಅವಹೇಳನ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೆನಾದರೂ ಅವಹೇಳನ ಮಾಡಿದ್ರೆ ದೂರು ನೀಡಲಿ. ಅದು ಬಿಟ್ಟು ಕಾನೂನು ಕೈಗೆ ತೆಗೆದುಕೊಂಡ್ರೆ ಹೇಗೆ ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.
ಧರ್ಮದ ಹೆಸರಿನಲ್ಲಿ ಗಲಭೆ ಸೃಷ್ಟಿಸುವವರ ವಿರುದ್ದ ಕಠಿಣ ಕಾನೂನು ಕ್ರಮ: ಜಗದೀಶ್ ಶೆಟ್ಟರ್
ಕೆ.ಜಿ ಹಳ್ಳಿ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಧರ್ಮಗುರುಗಳಿಗೆ ಗೌರವ ಕೊಡುವದು ನಮ್ಮ ಧರ್ಮ. ಧರ್ಮಗುರುಗಳ ವಿರುದ್ಧ ಅವಹೇಳನ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೆನಾದರೂ ಅವಹೇಳನ ಮಾಡಿದ್ರೆ ದೂರು ನೀಡಲಿ. ಅದು ಬಿಟ್ಟು ಕಾನೂನು ಕೈಗೆ ತೆಗೆದುಕೊಂಡ್ರೆ ಹೇಗೆ? ಠಾಣೆಯ ಮೇಲೆ, ಶಾಸಕರ ಮನೆ ಮೇಲೆ ದಾಳಿ ಮಾಡೋದು ಎಷ್ಟು ಸರಿ? ಅಂತವರ ವಿರುದ್ಧ ಈಗಾಗಲೇ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಂಡಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದರು.