ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಪವರಫುಲ್ ನೆಲ. ಇಲ್ಲಿನ ಆರಾಧ್ಯದೈವ ಸಿದ್ಧಾರೂಢರಿಗೆ ಭಕ್ತಿ ಪೂರ್ವಕ ಪ್ರಣಾಮಗಳು. ಹುಬ್ಬಳ್ಳಿಯನ್ನು ನೋಡಿದಾಕ್ಷಣ ಏನೋ ಒಂಥರಾ ಮನಸ್ಸಿಗೆ ಖುಷಿಯಾಗುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾವನಾತ್ಮಕವಾಗಿ ಮಾತನಾಡಿದರು.
ರೈಲ್ವೆ ಮೂರನೇ ದ್ವಾರ ಲೋಕಾರ್ಪಣೆ ಬಳಿಕ ಮಾತನಾಡಿದ ಅವರು, ದೇಶದ ಆರ್ಥಿಕತೆಯ ವೃದ್ಧಿಯಲ್ಲಿ ಜೋಶಿ ಹಾಗೂ ಪ್ರಧಾನಮಂತ್ರಿ ಕೊಡುಗೆ ಮಹತ್ವದ್ದಾಗಿದೆ. ಈಗಾಗಲೇ ಬಹಳ ಬೇಡಿಕೆ ಇಡಲಾಗಿದೆ. ಆದಷ್ಟು ಬೇಗ ಹುಬ್ಬಳ್ಳಿಯಿಂದ ಶಬರಿಮಲೆ ಹಾಗೂ ವಾರಣಾಸಿಗೆ ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಹುಬ್ಬಳ್ಳಿ ರೈಲ್ವೆ ಮೂರನೇ ದ್ವಾರ ಲೋಕಾರ್ಪಣೆ ಕಾರ್ಯಕ್ರಮ ಕರ್ನಾಟಕ ಅಭಿವೃದ್ಧಿಗೆ ಮೋದಿ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ರೈಲ್ವೆಗೆ ಸಂಬಂಧಿಸಿದಂತೆ ಮೊದಲು ಕರ್ನಾಟಕಕ್ಕೆ 830 ಕೋಟಿ ಅನುದಾನ ಬರುತ್ತಿತ್ತು. ಇದರಿಂದ ಏನು ಆಗುತ್ತಿರಲಿಲ್ಲ. ಮೀಟರ್ ಗೇಜ್ನಿಂದ ಬ್ರಾಡ್ ಗೇಜ್ ಮಾಡಲು 20 ವರ್ಷ ಹಿಡಿದಿದೆ. ಆದರೆ, ಮೋದಿ ಬಂದ ಮೇಲೆ ದೇಶದ ವರ್ತಮಾನ ಬದಲಾಗಿದೆ. 6000 ಕೋಟಿ ರೈಲ್ವೆ ಅಭಿವೃದ್ಧಿಗೆ ಕೊಟ್ಟಿದ್ದಾರೆ. ಭೂಸ್ವಾಧೀನ ಹಾಗೂ ಹೊಸ ಮಾರ್ಗ ಅನುಷ್ಠಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಜೋಶಿ ಜೋಶ್: ಡ್ರಮ್ ಬಾರಿಸಿ ಖುಷಿಪಟ್ಟ ಕೇಂದ್ರ ಸಚಿವರು
'ದ್ವೀತಿಯ ದರ್ಜೆ ನಗರದಲ್ಲಿ ಒಂದು ರೈಲು ನಿಲ್ದಾಣಕ್ಕೆ ಮೂರನೇ ದ್ವಾರ ಇರುವುದು ಕೇವಲ ಹುಬ್ಬಳ್ಳಿಯಲ್ಲಿ ಮಾತ್ರ. ಸಿದ್ದಾರೂಢರ ಹೆಸರನ್ನು ಇಡುವ ಬಗ್ಗೆ ಮೊದಲು ಚರ್ಚೆಯಾಗಿತ್ತು. ದಿವಂಗತ ಸುರೇಶ್ ಅಂಗಡಿ ಅವರು ಮುತುವರ್ಜಿ ವಹಿಸಿ ಸಿದ್ದಾರೂಢರ ಹೆಸರು ನಾಮಕಾರಣ ಮಾಡಿದ್ದಾರೆ' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಸಿದ್ಧಾರೂಢರು ಸರ್ವ ಧರ್ಮದ ಗುರುಗಳಾಗಿದ್ದರು. ಹೀಗಾಗಿ, ಸೆಕ್ಯೂಲರ್ ಎನ್ನುವ ಪದ ಬರಲಿಲ್ಲ. ಇಲ್ಲದಿದ್ದರೆ ಆ ಪದ ಇಲ್ಲಿ ಹುಡುಕೋ ಸಾಧ್ಯತೆ ಇತ್ತು. ವಿಶ್ವದ ಅತೀ ಉದ್ದದ ರೈಲ್ವೆ ಪ್ಲಾಟ್ ಫಾರ್ಮ್ ಹೊಂದಿರುವ ಕೀರ್ತಿ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕಿದೆ. ಪ್ರಧಾನಿ ಮೋದಿ ಅವರನ್ನು ಡಿಸೆಂಬರ್ ತಿಂಗಳಲ್ಲಿ ಐಐಟಿ ಉದ್ಘಾಟನೆಗೆ ಬರುವಂತೆ ವಿನಂತಿಸಿದ್ದೇನೆ. ಅಶ್ವಿನಿ ವೈಷ್ಣವ್ ಅವರು ಗೋಲ್ಡ್ ಮೆಡಲ್ ಪಡೆದವರು. ರಾಜಕಾರಣಿ ಅಂದರೆ ಬುದ್ಧಿ ಇಲ್ಲದವರು ಅಂದುಕೊಳ್ಳುತ್ತಾರೆ. ಆದರೆ ಅಶ್ವಿನಿ ಅವರು ಇಂಜಿನಿಯರಿಂಗ್ನಲ್ಲಿ ಗೋಲ್ಡ್ ಮೆಡಲಿಸ್ಟ್. ವೈಷ್ಣವ್ ಎರಡು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಇದೀಗ ಮಂತ್ರಿಯಾಗಿ ಜನರಿಗೆ ಹತ್ತಿರವಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಧಾರವಾಡ ರೈಲು ನಿಲ್ದಾಣಕ್ಕೆ ಪ್ರಹ್ಲಾದ್ ಜೋಶಿ ಭೇಟಿ, ಸಿದ್ಧತಾ ಕಾರ್ಯ ಪರಿಶೀಲನೆ
ಭಾರತದಲ್ಲಿ ರೈಲ್ವೆ ಪ್ರಗತಿ ಸಾಧಿಸಿದೆ. ಹುಬ್ಬಳ್ಳಿಯಂದ ವಾರಣಾಸಿಗೆ ಇನ್ಮುಂದೆ ವಾರಕ್ಕೆ ಎರಡು ರೈಲ್ವೆ ಹೋಗಲಿವೆ. ಅಲ್ಲದೇ, ಬಹುತೇಕ ಬೇಡಿಕೆಗಳನ್ನು ಸಚಿವರ ಮುಂದಿಟ್ಟಿದ್ದೇವೆ. ಕೂಡಲೇ ಬಗೆಹರಿಸುವ ಬಗ್ಗೆ ಭರವಸೆ ಇದೆ ಎಂದು ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.