ಹುಬ್ಬಳ್ಳಿ:ಟಿಕೆಟ್ ಇಲ್ಲದೆ ಪ್ರಯಾಣಿಸುವ ಜನರಿಂದ ನೈರುತ್ಯ ರೈಲ್ವೆ ಡಿಸೆಂಬರ್ 2023ರವರೆಗೆ 46.31 ಕೋಟಿ ರೂ ದಂಡ ಸಂಗ್ರಹಿಸಿದೆ. ಎಕ್ಸ್‌ಪ್ರೆಸ್, ವಿಶೇಷ ರೈಲುಗಳು ಸೇರಿದಂತೆ ಇತರೆ ಪ್ರಯಾಣಿಕ ರೈಲು ಸೇವೆಗಳಲ್ಲಿ ಆರಾಮದಾಯಕ ಪ್ರಯಾಣ ಮತ್ತು ಉತ್ತಮ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿಶೇಷ ಟಿಕೆಟ್ ತಪಾಸಣೆ ಕಾರ್ಯವನ್ನು ರೈಲ್ವೇ ನಿಯಮಿತವಾಗಿ ನಡೆಸುತ್ತಿದೆ.
ಟಿಕೆಟ್‌ರಹಿತ ಪ್ರಯಾಣದ ಒಟ್ಟು 6,27,014 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 9.95 ಹೆಚ್ಚು. ನೈರುತ್ಯ ರೈಲ್ವೆ ಪ್ರಾರಂಭವಾದಾಗಿನಿಂದ ಸಂಗ್ರಹವಾದ ಅತಿ ಹೆಚ್ಚು ದಂಡ ವಸೂಲಿಯಾಗಿದೆ.