ಹುಬ್ಬಳ್ಳಿ :ಸಿದ್ದರಾಮಯ್ಯ ಅವರು ನನ್ನ ನಂತರ ದಲಿತರನ್ನು ಮುಖ್ಯಮಂತ್ರಿ ಮಾಡುವದಾಗಿ ಹೇಳಿ, ಈಗ ಮತ್ತೇ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಚಿಂದಿ ಚಿತ್ರಾನ್ನವಾಗಿದೆ. ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷದ ವಿಲನ್. ಈಗ ಮತ್ತೊಮ್ಮೆ ನಾನೇ ಮುಖ್ಯಮಂತ್ರಿ ಅಂತಿದ್ದಾರೆ. ನಾನೇ ಹಿಂದುಳಿದ ವರ್ಗದ ಚಾಂಪಿಯನ್ ಅಂತ ಹೇಳುವ ಸಿದ್ದರಾಮಯ್ಯ ಏನ್ ಮಾಡಿದ್ದಾರೆ. ಕಾಗಿನೆಲೆ ಪೀಠ, ಬಂಜಾರ ಪೀಠಕ್ಕೆ ಅನುದಾನ ನೀಡಿದ್ದು ನಾವು. ಜಾತಿ-ಜಾತಿಗಳ ಮಧ್ಯೆ ಜಗಳ ತಂದಿಟ್ಟ ಈಗ ಕ್ಷಮೆ ಕೇಳುತ್ತಿದ್ದಾರೆ.
ಸಿದ್ದರಾಮಯ್ಯನವರ ಹಣೆಬರಹ ಗೊತ್ತಿದ್ದೆ. ಚಾಮುಂಡೇಶ್ವರಿ ಜನ ಸೋಲಿಸಿದ್ರು, ಬಾದಾಮಿ ಜನರಿಗೆ ಇವರ ಹಣೆಬರಹ ಗೊತ್ತಿಲ್ಲದೆ ಗೆಲ್ಲಿಸಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ನಿರ್ನಾಮವಾಗುತ್ತಿದೆ. ಕಾಂಗ್ರೆಸ್ ಜೆಡಿಎಸ್ ಸ್ಥಳೀಯ ಸಂಸ್ಥೆಗಳಲ್ಲಿ ಬೇರೆ ಬೇರೆ ನಿಲ್ಲುವ ಮಾತನಾಡುತ್ತಿದ್ದಾರೆ. ಆಗಾದ್ರೆ ಮೈತ್ರಿ ಮುಗಿದು ಹೊಯ್ತಾ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಬೊಗಳೆ ಬಿಡುತ್ತಾರೆ