ಕರ್ನಾಟಕ

karnataka

ETV Bharat / state

ಬಿಜೆಪಿ ಸುಳ್ಳು ಸೃಷ್ಟಿ ಮಾಡುವ ಫ್ಯಾಕ್ಟರಿ: ಸಿದ್ದರಾಮಯ್ಯ ವಾಗ್ದಾಳಿ - ಪ್ರಾಮಾಣಿಕ ಪ್ರಯತ್ನ ಮಾಡಿದವರು ನಾವು

ನಮ್ಮ ಕಾರ್ಯಕ್ರಮಗಳು ಅವರದ್ದು ಎಂದು ಬಿಂಬಿಸಿಕೊಳ್ಳುವ ಪ್ರಯತ್ನ - ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ - ಬಿಕೆ ಹರಿಪ್ರಸಾದ್​ ಸಮರ್ಥಿಸಿಕೊಂಡ ನಲಪಾಡ್​​

ಬಿಜೆಪಿ ಸುಳ್ಳು ಸೃಷ್ಟಿ ಮಾಡುವ ಫ್ಯಾಕ್ಟರಿ; ಸಿದ್ದರಾಮಯ್ಯ ವಾಗ್ದಾಳಿ
siddaramaiah-attacks-on-bjp

By

Published : Jan 19, 2023, 3:30 PM IST

ಹುಬ್ಬಳ್ಳಿ: ಕಂದಾಯ ಗ್ರಾಮ, ಅರಣ್ಯ ಇಲಾಖೆಯ ಕಾನೂನು ತಿದ್ದುಪಡಿ ಮಾಡಿದ್ದು ನಾವು. ತಾಂಡಾ, ಹಟ್ಟಿ, ದೊಡ್ಡಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದವರು ನಾವು. ಈಗ ಚುನಾವಣಾ ಇರುವ ಹಿನ್ನೆಲೆ ಪ್ರಧಾನಿ ಮೋದಿಯವರನ್ನು ಕರೆಸಿ ನಾವೇ ಮಾಡಿದವರು ಎಂದು ಬಿಜೆಪಿ ಪ್ರಚಾರ ತೆಗೆದುಕೊಳ್ಳುತ್ತಿದೆ ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ

ನಗರದಲ್ಲಿಂದು ಮಾತನಾಡಿದ ಅವರು, ಅಡುಗೆ ಮಾಡಿದವರು ನಾವು ಊಟ ಮಾಡುವವರು ಬಿಜೆಪಿಯವರು. ಸೇವಲಾಲ್​ ಜಯಂತಿ, ಲಂಬಾಣಿ ಅಭಿವೃದ್ಧಿ ನಿಗಮ ಆ‌ರಂಭಿಸಿದ್ದು ನಾವು. ಸೇವಾಲಾಲ್​ ಹುಟ್ಟಿದ ಸ್ಥಳವನ್ನು ಅಭಿವೃದ್ಧಿಪಡಿಸಿದವರು ನಾವು, ನೂರಾರು ಕೋಟಿ ಅನುದಾನ ನೀಡಿದ್ದೇವೆ. ಲಂಬಾಣಿ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಕೇವಲ ಮೂರು ವರ್ಷದಲ್ಲಿ ಕೇವಲ ಮೂವತ್ತು ಕೋಟಿ ಕೊಟ್ಟಿದ್ದಾರೆ. ಹಕ್ಕು ಪತ್ರ ನಾವು ಸಿದ್ದಪಡಿಸಿದ್ದೇವೆ. ಅವರು ಈಗ ವಿತರಣೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಮೂವತ್ತು ಸಾವಿರ ಕೋಟಿ ಎಸ್​ಸಿಪಿ, ಟಿಎಸ್ ಪಿ ಹಣವಿತ್ತು. ಈಗ ಅದು 42 ಸಾವಿರ ಕೋಟಿ ಆಗಬೇಕಿತ್ತು, ಆದರೆ 28 ಸಾವಿರ ಕೋಟಿ ಆಗಿದೆ. ಇದರ ಅರ್ಥ ಬಿಜೆಪಿ ಎಸ್ ಸಿ ಪಿ /ಟಿಎಸ್ ಪಿ ಹಣವನ್ನು ಬೇರೆ ಕಡೆ ಡೈವರ್ಟ್ ಮಾಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಸುಳ್ಳು ಮ್ಯಾನಿಪೆಸ್ಟೋ ಮಾಡುವ ಫ್ಯಾಕ್ಟರಿ. ನರೇಂದ್ರ ಮೋದಿಯವರಿಂದ ಬರೀ ಸುಳ್ಳು ಹೇಳಿಸುತ್ತಿದ್ದಾರೆ. ನನಗೆ ಮೋದಿ ಕಂಡ್ರೆ ಭಯವಿಲ್ಲ. ಆದರೆ, ನನ್ನ ಕಂಡ್ರೆ ಮೋದಿಗೆ ಭಯ. ನಾನು ಆರ್ ಎಸ್ ಎಸ್ ಟೀಕೆ ಮಾಡತ್ತೇನೆ. ಸತ್ಯ ಹೇಳತ್ತೇನೆ ಎನ್ನುವ ಭಯ. ಮೋದಿ ಭಾಷಣ ಮಾಡಿದ ತಕ್ಷಣ ಬಿಜೆಪಿ ಗೆಲ್ಲುವುದಿಲ್ಲ. ಸುಳ್ಳು ಹೇಳಿದರೆ ಜನ ನಂಬುವುದಿಲ್ಲ. ಮೋದಿ ಬಂದ್ರೆ ಮೋಡಿ ಆಗುವುದಿಲ್ಲ, ಜನಾನೇ ತೀರ್ಮಾನ ಮಾಡತ್ತಾರೆ ಎಂದರು.

ಭ್ರಷ್ಟಚಾರದಲ್ಲಿ ಬಿಜೆಪಿ: ನಲಪಾಡ್​ ವಾಗ್ದಾಳಿ:ಬಿಜೆಪಿ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನಪರವಾದ ಸರ್ಕಾರ ಬಂದೆ ಬರುತ್ತದೆ ಎಂದು ಯೂಥ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013 ರಿಂದ 2018 ರ ವರೆಗೆ ಕಾಂಗ್ರೆಸ್ ಉತ್ತಮ ಆಡಳಿತ ಮಾಡಿದೆ‌. ಈಗಿನ‌ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜನಪರವಾದ ಸರ್ಕಾರ 2023 ಕ್ಕೆ ಬಂದೆ ಬರುತ್ತದೆ ಎಂದರು.

ಪಕ್ಷಾಂತರ ಮಾಡುವವರೆಗೆ ಬಿ.ಕೆ. ಹರಿಪ್ರಸಾದ ಸರಿಯಾಗಿ ಹೇಳಿದ್ದಾರೆ. ನಾನೂ ಸಹ ಅದೇ ವೇದಿಕೆಯಲ್ಲಿ ಇದ್ದೆ. ಬಿ.ಕೆ. ಹರಿಪ್ರಸಾದ ಮಾತನಾಡಿದ್ದರಲ್ಲಿ ತಪ್ಪಿಲ್ಲ. ಪಕ್ಷದ ಚಿಹ್ನೆ ಮೇಲೆ ಗೆದ್ದು, ಬೇರೆ ಕಡೆ ಹೋದ್ರೆ ಅವರ ನಡತೆ ಏನೆಂಬುದನ್ನು ಸ್ಪಷ್ಟವಾಗಿ ತಿಳಿಯುತ್ತದೆ. ಇವರೆಲ್ಲ ಜನರನ್ನ ಮಾರಿಕೊಂಡವರು, ಇವರನ್ನು ಜನರು ಮತ್ತೆ ಗೆಲ್ಲಿಸುತ್ತಾರೆ ಎನ್ನುವುದನ್ನು ಅವರು ಅರಿತುಕೊಳ್ಳಬೇಕು. ಇನ್ನೊಂದು ಪಕ್ಷಕ್ಕೆ ದುಡ್ಡಿಗೆ ಮಾರಾಟ ಆದವರನ್ನ ಏನೂ ಅಂತ ಕರಿಯಬೇಕು ಎಂದರು.

ಇದನ್ನೂ ಓದಿ: ಶಾಸಕರ ಬೆಂಬಲಿಗ ಅಧಿಕಾರಿಯಿಂದ ಬೆದರಿಕೆ ಕರೆ ಆರೋಪ: ಆಡಿಯೋ ಬಿಡುಗಡೆ ಮಾಡಿದ ಕೆ.ಮಥಾಯಿ

ABOUT THE AUTHOR

...view details