ಹುಬ್ಬಳ್ಳಿ:ನೈರುತ್ಯ ರೈಲ್ವೇ ಪ್ರಧಾನ ಕಚೇರಿ ವತಿಯಿಂದ ಕ್ಲಬ್ ರಸ್ತೆಯ ರೈಲ್ವೇ ಕ್ರೀಡಾ ಮೈದಾನದಲ್ಲಿ 71 ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ನೈರುತ್ಯ ರೈಲ್ವೇಯಿಂದ ಹುಬ್ಬಳ್ಳಿಯಲ್ಲಿ ಗಣರಾಜ್ಯೋತ್ಸವ ಆಚರಣೆ
ಹುಬ್ಬಳ್ಳಿಯ ನೈರುತ್ಯ ರೈಲ್ವೇ ಪ್ರಧಾನ ಕಚೇರಿ ವತಿಯಿಂದ ಕ್ಲಬ್ ರಸ್ತೆಯ ರೈಲ್ವೇ ಕ್ರೀಡಾ ಮೈದಾನದಲ್ಲಿ 71 ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರಸಿಂಗ್ ಧ್ವಜಾರೋಹಣ ನೇರವೇರಿಸಿದರು.
ಧ್ವಜಾರೋಹಣ ನೇರವೇರಿಸಿ ಮಾತನಾಡಿದ ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರಸಿಂಗ್, ಪ್ರಸಕ್ತ ವರ್ಷದ ಮೂರನೇ ತ್ರೈಮಾಸಿಕದ ಅಂತ್ಯದವರೆಗೆ ಎಸ್‌ಡಬ್ಲ್ಯುಆರ್ ಸಾಧನೆ ಉತ್ತೇಜನಕಾರಿಯಾಗಿದ್ದು, ಡಿಸೆಂಬರ್ 2019 ರ ಅಂತ್ಯದ ವರೆಗೆ ಒಟ್ಟು ಗಳಿಕೆ 4,34 ಕೋಟಿ ರೂ ಆಗಿದೆ. ಈ ಬಾರಿ ಕಳೆದ ವರ್ಷಕ್ಕಿಂತ 22 ಕೋಟಿ ರೂ ಹೆಚ್ಚಾಗಿದೆ ಎಂದರು.
ಇನ್ನೂ ಈ ಅವಧಿಯಲ್ಲಿ 27 ಮಿಲಿಯನ್ ಟನ್ ಸರಕುಗಳನ್ನು ಲೋಡ್ ಮಾಡಲಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.1 ರಷ್ಟು ಹೆಚ್ಚಾಗಿದೆ. ದಿನಕ್ಕೆ 5 ಲಕ್ಷ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಹಿನ್ನಲೆ ಪ್ರಯಾಣಿಕರ ಅನುಕೂಲಕ್ಕಾಗಿ ಈ ವರ್ಷ ಹೊಸ ರೈಲು ಸೇವೆಗಳನ್ನು ಒದಗಿಸಲಾಗದೆ. ಎಸ್‌ಡಬ್ಲ್ಯುಆರ್‌ನಲ್ಲಿ 5 ಹೊಸ ರೈಲು ಸೇವೆಗಳು ಮತ್ತು 15 ತಾತ್ಕಾಲಿಕ ವಿಶೇಷ ರೈಲುಗಳನ್ನು ಪರಿಚಯಿಸಲಾಗಿದೆ. ಇದಲ್ಲದೆ 3 ರೈಲು ಸೇವೆಗಳನ್ನು ವಿಸ್ತರಿಸಲಾಗಿದೆ ಮತ್ತು ಒಂದು ರೈಲಿನ ಆವರ್ತನ ಹೆಚ್ಚಾಗಿದೆ. 101 ಸುವಿಧಾ ರೈಲುಗಳನ್ನು ಓಡಿಸಲಾಗಿದೆ. ದ್ವಿಗುಣಗೊಳಿಸುವಿಕೆ ಮತ್ತು ಇತರ ಟ್ರ್ಯಾಕ್ ನವೀಕರಣ ಮತ್ತು ನಿರ್ವಹಣಾ ಕಾರ್ಯಗಳ ಅಪಾರ ಸಂಖ್ಯೆಯ ಮೂಲಸೌಕರ್ಯ ಕಾರ್ಯಗಳ ಹೊರತಾಗಿಯೂ ಇತ್ತೀಚಿನ ತಿಂಗಳುಗಳಲ್ಲಿ ಎಸ್‌ಡಬ್ಲ್ಯುಆರ್ ಸಮಯಪ್ರಜ್ಞೆಯ ಸುಧಾರಣೆಯನ್ನು ದಾಖಲಿಸಿದೆ. 24 ರ ಗುರಿಯಂತೆ ಈ ವರ್ಷ 70 ಶಾಶ್ವತ ವೇಗ ನಿರ್ಬಂಧಗಳನ್ನು (ಪಿಎಸ್‌ಆರ್) ಸಡಿಲಿಸಲಾಗಿದೆ ಎಂದರು.