ಕರ್ನಾಟಕ

karnataka

5 ರೂಪಾಯಿ ಕೇಳಿದ್ದಕ್ಕೆ ಬಾಲಕನ ಕೊಲೆ.. ಹುಬ್ಬಳ್ಳಿಯಲ್ಲಿ ಸೈಕೋ ರವಿ ಅರೆಸ್ಟ್​

By

Published : Apr 2, 2023, 5:55 PM IST

Updated : Apr 2, 2023, 7:22 PM IST

ಐದು ರೂಪಾಯಿ ಕೇಳಿದ್ದಕ್ಕೆ ಕೋಪಗೊಂಡು ಎಂಟು ವರ್ಷದ ಬಾಲಕನನ್ನು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

psycho-killed-the-boy-for-asking-only-5-rupees-dot
ಕೇವಲ 5 ರೂಪಾಯಿ ಕೇಳಿದ್ದಕ್ಕೆ ಬಾಲಕನನ್ನೇ ಕೊಂದ ಸೈಕೋ..!

5 ರೂಪಾಯಿ ಕೇಳಿದ್ದಕ್ಕೆ ಬಾಲಕನ ಕೊಲೆ.. ಹುಬ್ಬಳ್ಳಿಯಲ್ಲಿ ಸೈಕೋ ರವಿ ಅರೆಸ್ಟ್​

ಹುಬ್ಬಳ್ಳಿ:ಎಂಟು ವರ್ಷದ ಬಾಲಕ ಕೇವಲ 5 ರೂಪಾಯಿ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಮಗುವಿನ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಲೆಗೆ ರಜೆ ಕೊಟ್ಟಿದ್ದರಿಂದ ಬಾಲಕನು ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ದೊಡ್ಮನಿ ಕಾಲೋನಿಯಲ್ಲಿ ಅಜ್ಜಿ ಮನೆಗೆಂದು ಬಂದಿದ್ದ. ಆದರೆ, ದುರಾದೃಷ್ಟವೆಂಬಂತೆ ಸೈಕೋ ಕಿಲ್ಲರ್ ರವಿ ಬಳ್ಳಾರಿಗೆ ಆ ಬಾಲಕ ಕೇವಲ 5 ರೂ. ಕೇಳಿದ್ದಕ್ಕೆ ಕೊಲೆ ಮಾಡಿ, ಮಿರ್ಚಿ ಗ್ರೌಂಡ್ ಕಂಟಿಯಲ್ಲಿ ಎಸೆದು ಹೋಗಿದ್ದ. ಎರಡು ದಿನಗಳ ಹಿಂದೆ ಬಾಲಕನನ್ನು ಕೊಲೆ ಮಾಡಿ ಪರಾರಿಯಾಗಿದ್ದ ರವಿ ಬಳ್ಳಾರಿಯನ್ನು ಬೆಂಡಿಗೇರಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ತನಿಖೆ ಮಾಡಿದ ಕೂಡಲೇ ಐದು ರೂಪಾಯಿ ಕೇಳಿದ್ದಕ್ಕೆ ಕೊಲೆ ಮಾಡಿದ್ದೇನೆಂದು ಆರೋಪಿ ರವಿ ಬಳ್ಳಾರಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಅರೆಸ್ಟ್ ಮಾಡಿದ ಕೂಡಲೇ ಮೃತ ಬಾಲಕನ ಪೋಷಕರು ಪೊಲೀಸ್ ಠಾಣೆಗೆ ಆಗಮಿಸಿ ಎಂಟು ವರ್ಷದ ಮಗುವನ್ನು ಕೊಲೆ ಮಾಡಿದ ಇಂಥ ಕ್ರೂರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಪೊಲೀಸರಿಗೆ ಒತ್ತಾಯ ಮಾಡುತ್ತಿದ್ದಾರೆ. ಮೃತ ಬಾಲಕನಿಗೆ ರವಿ ಬಳ್ಳಾರಿ ಮೊದಲೇ ಗೊತ್ತಿದ್ದನಂತೆ, ಅದೇ ಕಾರಣಕ್ಕೆ ಬಾಲಕನು ರವಿ ಬಳಿ ಐದು ರೂಪಾಯಿ ಕೇಳಿದ್ದ. ಐದು ರೂಪಾಯಿ ಕೊಟ್ಟ ಬಳಿಕ ಮತ್ತೆ ಐದು ರೂಪಾಯಿ ಕೇಳಿದ್ದಕ್ಕೆ ಕೋಪಗೊಂಡು ಕೊಲೆ ಮಾಡಿರುವುದಾಗಿ ಪೊಲೀಸರ ಎದುರು ಆರೋಪಿ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ :ಪಂಜಾಬ್​ ಸೆಕ್ರೆಟರಿಯೇಟ್​ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕರ್ನಾಟಕದ ಯೋಧ ಆತ್ಮಹತ್ಯೆ

ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಿದ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಡಿಸಿಪಿ ರಾಜೀವ ಎಂ ಅವರು, ಬಾಲಕನ ಶವ ಪತ್ತೆಯಾದ ಬಳಿಕ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಈ ನಿಟ್ಟಿನಲ್ಲಿ ಬಾಲಕನ ಮರಣೋತ್ತರ ಪರೀಕ್ಷೆ ಜೊತೆಗೆ ಎಲ್ಲ ರೀತಿಯಲ್ಲಿ ತನಿಖೆ ನಡೆಸಿದ್ದೇವೆ‌. ಕುಡಿದ ಮತ್ತಿನಲ್ಲಿರುವಾಗಲೇ ಬಾಲಕನ ಕೆನ್ನೆಗೆ ರವಿ ಹೊಡೆದಿದ್ದಾನೆ. ಆಗ ಬಾಲಕ ಪ್ರಜ್ಞೆ ತಪ್ಪಿದ್ದು, ಗಾಬರಿಗೊಂಡ ಆರೋಪಿ ರವಿ ಬಳ್ಳಾರಿ ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.

ಅಲ್ಲದೇ ಬೆರಳಚ್ಚು ಸಾಕ್ಷಿ ಪೊಲೀಸರಿಗೆ ಲಭ್ಯವಾಗಬಾರದೆಂಬ ಹಿನ್ನೆಲೆಯಲ್ಲಿ ಆರೋಪಿ ರವಿ ಬಳ್ಳಾರಿ ಬಾಲಕನ ಬಟ್ಟೆ ಬಿಚ್ಚಲು ಮುಂದಾಗಿದ್ದನು. ಆದೇ ಸಮಯದಲ್ಲಿ ಸ್ಥಳಕ್ಕೆ ಮಹಿಳೆ ಬಂದದ್ದನ್ನು ಕಂಡು ಗಾಬರಿಯಿಂದ ಓಡಿಹೋಗಿದ್ದಾನೆ ಎಂದು ಹೇಳಿದರು. ಗೌಂಡಿ ಕೆಲಸ ಮಾಡಿಕೊಂಡಿದ್ದ ರವಿ ಬಳ್ಳಾರಿ ಬಾಲಕನ ಕೊಲೆ ಮಾಡಿರುವುದು ತನಿಖೆಯ ಮೂಲಕ ಮಾಹಿತಿ ಲಭ್ಯವಾಗಿದ್ದು, ಆರೋಪಿಯನ್ನು ಬಂಧಿಸಿದ್ದೇವೆ. ಅಲ್ಲದೇ ಎಲ್ಲ ರೀತಿಯ ದಾಖಲೆಗಳು ಹಾಗೂ ಮೆಡಿಕಲ್ ಡಾಕ್ಯುಮೆಂಟ್ ಕೂಡ ಲಭ್ಯವಾಗಿವೆ ಎಂದು ಡಿಸಿಪಿ ಮಾಹಿತಿ ನೀಡಿದರು.

ಇದನ್ನೂ ಓದಿ :ಚರಂಡಿ ನೀರು ಹರಿಯುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ: ಗಾಯಾಳುಗಳು ಆಸ್ಪತ್ರೆಗೆ ದಾಖಲು

Last Updated : Apr 2, 2023, 7:22 PM IST

ABOUT THE AUTHOR

...view details