ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ರೈಲ್ವೆ ಅಪ್ರೆಂಟಿಸ್ ಮುಗಿಸಿದ ಅಭ್ಯರ್ಥಿಗಳ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ - ನೈರುತ್ಯ ರೈಲ್ವೆ

ರೈಲ್ವೆ ಅಪ್ರೆಂಟಿಸ್ ಮುಗಿಸಿದವರ ನೇಮಕಕ್ಕೆ ಆಗ್ರಹಿಸಿ ಪೋಷಕರು ಹಾಗೂ ವಿದ್ಯಾರ್ಥಿಗಳು ಹುಬ್ಬಳ್ಳಿಯ ಗದಗ ರಸ್ತೆಯ ನೈರುತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.‌

protest in hubli
ರೈಲ್ವೆ ಅಪ್ರೆಂಟಿಸ್ ಮುಗಿಸಿದ ವಿದ್ಯಾರ್ಥಿಗಳ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ

By

Published : Mar 24, 2021, 4:35 PM IST

ಹುಬ್ಬಳ್ಳಿ: ಸರ್ಕಾರಿ ನೌಕರಿ ಸೇರಬೇಕು ಎಂದು ಐಟಿಐ ಕಲಿತು ನೈರುತ್ಯ ರೈಲ್ವೆ ಹಾಗೂ ಆರ್​ಡಬ್ಲ್ಯೂಎಫ್​​ನಲ್ಲಿ 3 ವರ್ಷದವರೆಗೆ ತರಬೇತಿ ಪಡೆದಿದ್ದ ಅಭ್ಯರ್ಥಿಗಳು ಈಗ ಕೆಲಸ ಸಿಗದೇ ರೈಲ್ವೆ ಇಲಾಖೆ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಅಪ್ರೆಂಟಿಸ್ ಮುಗಿಸಿದ ವಿದ್ಯಾರ್ಥಿಗಳ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ

ರೈಲ್ವೆ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ಆಸೆಯಿಂದ ಸುಮಾರು 2763 ವಿದ್ಯಾರ್ಥಿಗಳು ತರಬೇತಿ‌ ಪಡೆದಿದ್ದರು. ಆದರೆ ಇವರನ್ನು ನೇಮಕ ಮಾಡಿಕೊಳ್ಳಲು ರೈಲ್ವೆ ಇಲಾಖೆ ಹಿಂದೇಟು ಹಾಕಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಗದಗ ರಸ್ತೆಯ ನೈರುತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.‌ ಸಬ್‌ಸ್ಟಿಟ್ಯೂಟ್ ಮುಖಾಂತರ ರೈಲ್ವೆಯಲ್ಲಿ ಭರ್ತಿ ಮಾಡಿಕೊಳ್ಳಬೇಕೆಂದು ಆದೇಶವಿದ್ದರೂ ಸಹ ಭರ್ತಿಯಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ನೈರುತ್ಯ ರೈಲ್ವೆಯಲ್ಲಿ 2011 ರಿಂದ ಹಾಗೂ ಆರ್​ಡಬ್ಲ್ಯೂಎಫ್​​ನಲ್ಲಿ 2008 ರಿಂದ ತರಬೇತಿ ಪಡೆದವರನ್ನು ಸಹ ನೇಮಕ ಮಾಡಿಕೊಂಡಿಲ್ಲ. ಆದರೆ ನೆರೆಯ ಮಹಾರಾಷ್ಟ್ರದಲ್ಲಿ 2010-2017ರ ಅವಧಿಯಲ್ಲಿ ತರಬೇತಿ ಪಡೆದ 2490 ಅಭ್ಯರ್ಥಿಗಳನ್ನು ಸಬ್‌ಸ್ಟಿಟ್ಯೂಟನಲ್ಲಿ ಗ್ರೂಪ್ ಡಿ ಹುದ್ದೆಗೆ ಭರ್ತಿ ಮಾಡಿಕೊಳ್ಳಲಾಗಿದೆ. ಕರ್ನಾಟಕದ ಅಧಿಕಾರಿಗಳು ಮಾತ್ರ ಕುಂಟು ನೆಪ ಒಡ್ಡಿ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ರೈಲ್ವೆ ಮಂಡಳಿ 2016ರಲ್ಲಿ ಸಿಸಿಎಎಗಳಿಗೆ ಸಾರ್ವಜನಿಕ ನೇಮಕಾತಿಯಲ್ಲಿ ಶೇಕಡಾ 20 ರಷ್ಟು ಮೀಸಲಾತಿ ಕಾಯ್ದಿರಿಸಿ ಭರ್ತಿ ಮಾಡಿಕೊಳ್ಳಲು ಸೂಚಿಸಿದೆ. ಈ ಆದೇಶಕ್ಕೂ ಮೊದಲು 2008 ರಿಂದ 2016 ರವರೆಗೂ ಒಟ್ಟು 1766 ಜನ ತರಬೇತಿ ಪಡೆದುಕೊಂಡಿದ್ದಾರೆ. ಅವರನ್ನು ಸಹ ನೇಮಕ ಮಾಡಿಕೊಳ್ಳದಿರುವುದು ಭವಿಷ್ಯಕ್ಕೆ ಮಾರಕವಾಗಿದೆ ಎಂದು ವಿದ್ಯಾರ್ಥಿಗಳು, ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details