ಹುಬ್ಬಳ್ಳಿ:ಹಿಂದಿನಿಂದಲೂ ವಿಶ್ವಾಸಾರ್ಹ ಸೇವೆ ಸಲ್ಲಿಸಿಕೊಂಡು ಬಂದಿರುವ ಕೀರ್ತಿ ಅಂಚೆ ಇಲಾಖೆಯದು. ಈ ದಿನಗಳಲ್ಲಿ ಅಂತರ್ಜಾಲ ವ್ಯವಸ್ಥೆಯಿದ್ರೂ ಅಂಚೆ ಸೇವೆ ತನ್ನ ಮೌಲ್ಯ ಕಳೆದುಕೊಂಡಿಲ್ಲ. ಆದರೆ, ಕೆಲವೆಡೆ ಅಂಚೆ ಸೇವೆ ಅವ್ಯವಸ್ಥೆಯಿಂದ ಕೂಡಿದೆ.
ಈ ಅಂಚೆ ಪೆಟ್ಟಿಗೆಯೊಳಗೆ ಪತ್ರ ಹಾಕಿದರೆ ಅದು ಸಂಬಂಧಿಸಿದ ವಿಳಾಸ ತಲುಪುವುದೇ ಡೌಟು! - Poor maintainance of post boxes in Hubli
ಸಾರ್ವಜನಿಕರಿಗೆ ಸಹಾಯಕವಾಗಲಿ ಎಂಬ ನಿಟ್ಟಿನಲ್ಲಿ ಪ್ರಮುಖ ಬೀದಿಗಳಲ್ಲಿ ಅಂಚೆ ಪೆಟ್ಟಿಗೆಗಳನ್ನು ಇರಿಸಲಾಗುತ್ತದೆ. ಆದರೆ, ಕೆಲ ಅಂಚೆ ಪೆಟ್ಟಿಗೆ ಸ್ಥಿತಿಯನ್ನು ನೋಡಿ ಸಾರ್ವಜನಿಕರು ಪತ್ರ ಹಾಕಲು ಕೂಡ ಹಿಂದೇಟು ಹಾಕುವಂತಾಗಿದೆ. ಪತ್ರಗಳು ತಲುಪಬೇಕಾದ ವಿಳಾಸ ತಲುಪುತ್ತವೆಯೋ ಅಥವಾ ಕಸದ ತೊಟ್ಟಿ ಸೇರುತ್ತವೋ ಎಂಬ ಆತಂಕ. ಅಷ್ಟರಮಟ್ಟಿಗೆ ಇಲ್ಲಿನ ಅಂಚೆ ಪೆಟ್ಟಿಗೆಗಳು ಅವ್ಯವಸ್ಥೆಯಿಂದ ಕೂಡಿವೆ.
ವಾಣಿಜ್ಯನಗರಿ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆ ಸೇರಿದಂತೆ ಹು-ಧಾ ಮಹಾನಗರದ ಹಲವಾರು ಕಡೆಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಅಂಚೆ ಪೆಟ್ಟಿಗೆಯನ್ನು ಇರಿಸಲಾಗಿದೆ. ಆದರೆ, ಅಂಚೆ ಪೆಟ್ಟಿಗೆ ಪ್ರಸ್ತುತ ಸ್ಥಿತಿಯನ್ನು ನೋಡಿದರೆ ಇದು ಅಂಚೆ ಪೆಟ್ಟಿಗೆಯೋ ಅಥವಾ ಕಸದ ಡಬ್ಬಿಯೋ ಎಂದು ಸಾರ್ವಜನಿಕರು ಸಂಶಯಪಡುವಂತಾಗಿದೆ.