ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ನೈಋತ್ಯ ರೈಲ್ವೆ ಕಾರ್ಯವೈಖರಿಗೆ ಪ್ರಯಾಣಿಕರು ಖುಷ್​.. ದ್ವಿಪಥ ಮಾರ್ಗದಲ್ಲಿ 130 ಕಿ ಮೀ ವೇಗದಲ್ಲಿ ಓಡಲಿವೆ ರೈಲುಗಳು - ಎಸ್​ ಡಬ್ಲೂ ಆರ್ ವ್ಯವಸ್ಥಾಪಕ ನಿರ್ದೇಶಕ ಸಂಜೀವ ಕಿಶೋರ್

ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದ ಕಾರ್ಯವೈಖರಿಗೆ ಪ್ರಯಾಣಿಕರು ಸಂತಸ - ದ್ವಿಪಥ ಎಲೆಕ್ಟ್ರಿಪಿಕೇಶನ್ ಇಂಟರ್ ಲಾಕಿಂಗ್ ಕಾಮಗಾರಿ ಚುರುಕು -ಪ್ರಯಾಣಿಕರ ಸಮಯಕ್ಕೂ ಆದ್ಯತೆ- ಬಹುತೇಕ ದ್ವೀಪಥ ಕಾಮಗಾರಿ ಪೂರ್ಣ - 130 ಕಿಲೋ ಮೀಟರ್ ಓಡುವ ಬಗ್ಗೆ ಪ್ರಾಯೋಗಿಕ ಕಾರ್ಯಾಚರಣೆ ಯಶಸ್ವಿ - ಇಂಧನ ಉಳಿಸುವದೊಂದಿಗೆ ಪರಿಸರ ಸ್ನೇಹಿಯಾಗಿದ್ದ ನೈಋತ್ಯ ರೈಲ್ವೆ ಈಗ ಜನಸ್ನೇಹಿಯಾಗಿ ಕಾರ್ಯನಿರ್ವಹಣೆ.

SWR Director Sanjiva Kishore Inspection of various works
ಎಸ್​ ಡಬ್ಲೂ ಆರ್ ನಿರ್ದೇಶಕ ಸಂಜೀವ ಕಿಶೋರ್ ವಿವಿಧ ಕಾಮಗಾರಿ ಪರಿಶೀಲನೆ

By

Published : Jan 20, 2023, 3:48 PM IST

Updated : Jan 20, 2023, 10:51 PM IST

ಹುಬ್ಬಳ್ಳಿ ನೈಋತ್ಯ ರೈಲ್ವೆ

ಹುಬ್ಬಳ್ಳಿ:ವಿಶ್ವದ ಅತಿದೊಡ್ಡ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆ ಪಡೆದಿರುವ ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದ ಹೊಸ ಕಾರ್ಯವೈಖರಿಯಲ್ಲೂ ಸಾಕಷ್ಟು ಜನಮನ್ನಣೆ ಪಡೆಯುತ್ತಿದೆ. ಹುಬ್ಬಳ್ಳಿ - ಬೆಂಗಳೂರು ಮಾರ್ಗಮಧ್ಯದಲ್ಲಿ ಬಹುತೇಕ ದ್ವಿಪಥ ಕಾಮಗಾರಿ ಪೂರ್ಣ ಗೊಂಡಿದ್ದು, ಪ್ರತಿಗಂಟೆಗೆ 130 ಕಿ ಲೋ ಮೀಟರ್ ಓಡುವ ಬಗ್ಗೆ ಪ್ರಾಯೋಗಿಕ ಕಾರ್ಯಾಚರಣೆ ಕೂಡ ಮಾಡಲಾಗಿದೆ.

ಈಗಾಗಲೇ ಇಂಧನ ಉಳಿಸುವ ಮೂಲಕ ಪರಿಸರ ಸ್ನೇಹಿಯಾಗಿದ್ದ ನೈಋತ್ಯ ರೈಲ್ವೆ ಈಗ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಮಯದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಲು ರೈಲ್ವೆ ಇಲಾಖೆ ಮುಂದಾಗಿದೆ.

ದ್ವೀಪಥ ಕಾಮಗಾರಿ ಎಲೆಕ್ಟ್ರಿಪಿಕೇಶನ್ ಚುರುಕು:ನೈಋತ್ಯ ರೈಲ್ವೆ ವಲಯ ಈಗ ಕಾಮಗಾರಿ ಚುರುಕುಗೊಳಿಸಿರುವುದು ಮಾತ್ರವಲ್ಲದೇ ಸಮಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ. ಹುಬ್ಬಳ್ಳಿ-ಬೆಂಗಳೂರು ಸೇರಿದಂತೆ ಬಹುತೇಕ ಮಾರ್ಗದಲ್ಲಿ ರೈಲ್ವೆ ಮೂಲಕ ಸಂಚಾರ ನಡೆಸಬೇಕಾದವರು ದಿನಗಟ್ಟಲೇ ಸಂಚಾರ ಮಾಡಬೇಕಿತ್ತು. ಆದರೆ, ಈಗ ನೈಋತ್ಯ ರೈಲ್ವೆ ವಲಯ ದ್ವಿಪಥ ಕಾಮಗಾರಿ, ಎಲೆಕ್ಟ್ರಿಪಿಕೇಶನ್, ಇಂಟರ್ ಲಾಕಿಂಗ್ ಸೇರಿದಂತೆ ಬಹುತೇಕ ಕಾಮಗಾರಿ ಚುರುಕುಗೊಳಿಸಿದೆ. ಈ ನಿಟ್ಟಿನಲ್ಲಿ ಪ್ರತಿಗಂಟೆಗೆ 130 ಕಿಲೋಮೀಟರ್ ಕ್ರಮಿಸುವ ಸಾಮರ್ಥ್ಯವನ್ನು ಅಳವಡಿಸುವ ಮೂಲಕ ಜನರಿಗೆ ಹುಬ್ಬಳ್ಳಿ - ಬೆಂಗಳೂರು, ಹುಬ್ಬಳ್ಳಿ - ಮೈಸೂರು, ಹುಬ್ಬಳ್ಳಿ - ಬೆಳಗಾವಿ, ಹುಬ್ಬಳ್ಳಿ - ದೆಹಲಿ ಸೇರಿದಂತೆ ಹಲವಾರು ಮಾರ್ಗಗಳಲ್ಲಿ ಶೀಘ್ರಗತಿ ಪ್ರಯಾಣ ಮಾಡಬಹುದಾಗಿದೆ.

ಪ್ರಾಯೋಗಿಕ ಕಾರ್ಯಾಚರಣೆ ಯಶಸ್ವಿ: ಇನ್ನೂ ಈಗಾಗಲೇ ಹುಬ್ಬಳ್ಳಿ ಬೆಂಗಳೂರು ಮಾರ್ಗಮಧ್ಯದಲ್ಲಿ ಬಹುತೇಕ ದ್ವೀಪಥ ಕಾಮಗಾರಿ ಪೂರ್ಣಗೊಂಡಿದ್ದು, ಸ್ವಲ್ಪ ಪ್ರಮಾಣದ ಕಾಮಗಾರಿ ಬಾಕಿ ಇದೆ. ಹೀಗಿರುವಾಗ ನೈಋತ್ಯ ರೈಲ್ವೆ ವಲಯ ಟ್ರಾಯಲ್ ರನ್ ಕೂಡ ಮಾಡಿದ್ದು, ಪ್ರತಿಗಂಟೆಗೆ 130 ಕಿಲೋ ಮೀಟರ್ ಓಡುವ ಬಗ್ಗೆ ಪ್ರಾಯೋಗಿಕ ಕಾರ್ಯಾಚರಣೆ ಕೂಡ ಮಾಡಿದೆ. ಈಗಾಗಲೇ ಇಂಧನ ಉಳಿಸುವ ಮೂಲಕ ಪರಿಸರ ಸ್ನೇಹಿಯಾಗಿದ್ದ ನೈಋತ್ಯ ರೈಲ್ವೆ ಈಗ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ ಎನ್ನುತ್ತಾರೆ ಎಸ್​ ಡಬ್ಲೂ ಆರ್ ವ್ಯವಸ್ಥಾಪಕ ನಿರ್ದೇಶಕ ಸಂಜೀವ ಕಿಶೋರ್.

ಒಟ್ಟಿನಲ್ಲಿ ಒಂದಿಲ್ಲೊಂದು ರೀತಿ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡುವ ಮೂಲಕ ಹೆಸರುವಾಸಿ ನೈಋತ್ಯ ರೈಲ್ವೆ ಕಾರ್ಯ ಮತ್ತು ವಿಸ್ತರಿಸುವ ಮೂಲಕ ಜನರಿಗೆ ಸಿಗಲಿದೆ. ಅಲ್ಲದೇ ಈಗಾಗಲೇ ನಿರೀಕ್ಷಿತ ಮಟ್ಟದಲ್ಲಿರುವ ಭರವಸೆ ಈಡೇರುವ ಮೂಲಕ ಜನರಿಗೆ ಗುಣಮಟ್ಟದ ಸೇವೆಗೆ ಸನ್ನದ್ದವಾಗಿದೆ.

ಸರಕು ಸಾಗಣೆಯಲ್ಲೂ ಹುಬ್ಬಳ್ಳಿ ರೈಲ್ವೆ ದಾಖಲೆ:ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯ ಪ್ರಯಾಣಿಕರ ಸೇವೆಯಲ್ಲಿ ಮಾತ್ರವಲ್ಲದೇ ಸರಕು ಸಾಗಣೆಯಲ್ಲಿಯೂ ಕೂಡ ಹೊಸ ದಾಖಲೆ ಮಾಡಿದೆ. ಸರಕು ಸಾಗಣೆಯಲ್ಲಿ ಹುಬ್ಬಳ್ಳಿ ರೈಲ್ವೆ ವಿಭಾಗವು ಈ ವರ್ಷ 2,500 ಕೋಟಿ ರೂ. ಆದಾಯಗಳಿಸಿದೆ.

ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಪ್ರಯಾಣಿಕ ಸೌಲಭ್ಯಗಳ ಸುಧಾರಣೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಈ ಸಭೆಯಲ್ಲಿ ನಡೆಯುವ ಚರ್ಚೆ ಮತ್ತಷ್ಟು ಉತ್ತಮ ಸೌಲಭ್ಯ ಮತ್ತು ಸುಧಾರಿತ ಸೇವೆಯನ್ನು ಒದಗಿಸುವ ರೈಲ್ವೆಯ ಪ್ರಯತ್ನಕ್ಕೆ ಸಹಾಯ ಮಾಡಲಿದೆ. ಈ ನಿಟ್ಟಿನಲ್ಲಿ ವ್ಯವಸ್ಥಿತ ಸೇವೆಯ ಮೂಲಕ ನೈಋತ್ಯ ರೈಲ್ವೆ ಇಂತಹದೊಂದು ಸಾಧನೆ ಮಾಡಿರುವುದು ವಿಶೇಷವಾಗಿದೆ.

ರೈಲ್ವೆ ಒದಗಿಸುತ್ತಿರುವ ಸೇವೆ ಮತ್ತು ಸುಧಾರಣೆಗಳ ಬಗ್ಗೆ ರೈಲ್ವೆ ಆಡಳಿತ ಮತ್ತು ರೈಲ್ವೆ, ಬಳಕೆದಾರರ ನಡುವೆ ಸಲಹೆ, ಸಮಾಲೋಚನೆಗೆ ವೇದಿಕೆಯನ್ನು ಒದಗಿಸಲು ರೈಲ್ವೆ ವಿಭಾಗಗಳಲ್ಲಿ ಡಿಆರ್​ಯುಸಿಸಿಗಳನ್ನು ರಚಿಸಲಾಗಿದೆ. ಮೂಲ ಸೌಕರ್ಯ ಕಾಮಗಾರಿಗಳು, ಪ್ರಯಾಣಿಕ ಸೌಲಭ್ಯಗಳು, ರೈಲುಗಳ ನಿಲುಗಡೆ, ರೈಲುಗಳ ವಿಸ್ತರಣೆ ಇತ್ಯಾದಿ ವಿಷಯಗಳ ಕುರಿತು ಚರ್ಚಿಸಿದ್ದು, ಮತ್ತಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ನೈಋತ್ಯ ರೈಲ್ವೆ ವಿನೂತನ ಸೇವೆಯಿಂದ ಹೊರಹೊಮ್ಮಿದೆ.

ಇದನ್ನೂಓದಿ:40 ಕ್ಷೇತ್ರಕ್ಕೆ ಶೀಘ್ರ ಕೆಆರ್​ಪಿಪಿ ಅಭ್ಯರ್ಥಿಗಳು ಪ್ರಕಟ: ಜನಾರ್ದನ ರೆಡ್ಡಿ

Last Updated : Jan 20, 2023, 10:51 PM IST

ABOUT THE AUTHOR

...view details