ಹುಬ್ಬಳ್ಳಿ:ಸಾರಿಗೆ ನೌಕರರಿಗೆ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಏ. 7ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ಗೌರವಾಧ್ಯಕ್ಷ ಪಿ.ಎಚ್ ನೀರಲಕೇರಿ ಹೇಳಿದರು.
ಸಾರಿಗೆ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಏ. 7ರಿಂದ ಅನಿರ್ದಿಷ್ಟಾವಧಿ ಮುಷ್ಕರ - Transport workers Protest
ಸರ್ಕಾರ ಸಾರಿಗೆ ನೌಕರರ ಒಂಬತ್ತು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರೂ, ಕೆಲ ಬೇಡಿಕೆಗಳು ಪೂರೈಕೆ ಆಗದ ಹಿನ್ನೆಲೆಯಲ್ಲಿ ಏ. 7ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ಗೌರವಾಧ್ಯಕ್ಷ ಪಿ.ಎಚ್ ನೀರಲಕೇರಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಸಾರಿಗೆ ನೌಕರರ ಒಂಬತ್ತು ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಜೊತೆಗೆ ಸರ್ಕಾರಿ ನೌಕರರಾಗಿ ಸಾರಿಗೆ ನೌಕರರನ್ನ ನೇಮಕ ಮಾಡುವುದು ಹಾಗೂ ಸರ್ಕಾರ 6ನೇ ವೇತನ ಆಯೋಗ ಶಿಫಾರಸು ಅಡಿ ಸಂಬಳ ನೀಡುವ ಭರವಸೆ ನೀಡಿತ್ತು. ಆದ್ರೆ ಇಲ್ಲಿಯವರೆಗೂ ಬೇಡಿಕೆ ಪೂರೈಸಿಲ್ಲ. ಇದರಿಂದ 1.36 ಸಾವಿರ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಹೀಗಾಗಿ ಶೀಘ್ರವೇ ಬೇಡಿಕೆ ಈಡೇರಿಸಬೇಕು ಎಂದರು.
ಇನ್ನು ಸಾರಿಗೆ ನೌಕರರಿಗೆ ಆರೋಗ್ಯ ಸೇವೆ ನೀಡಬೇಕು. ಸರ್ಕಾರಿ ಶಿಕ್ಷಕರಂತೆ ಅಂತರ್ ನಿಗಮ ವರ್ಗಾವಣೆ ಪದ್ಧತಿಯನ್ನ ಜಾರಿಗೆ ತರಬೇಕು. ಕೊರೊನಾದಿಂದ ಮೃತಪಟ್ಟ ಸಾರಿಗೆ ನೌಕರರಿಗೆ 30 ಲಕ್ಷ ಜೀವ ವಿಮೆ ನೀಡಬೇಕು ಎಂದು ಆಗ್ರಹಿಸಿದ್ದು, ಏ.7 ರಂದು ಅನಿರ್ದಿಷ್ಟ ಮುಷ್ಕರ ಕೈಗೊಳ್ಳಲಾಗಿದೆ ಎಂದರು.