ಕರ್ನಾಟಕ

karnataka

ETV Bharat / state

ಎಚ್ಚೆತ್ತ ಹು-ಧಾ ಪಾಲಿಕೆ: ಶಿಥಿಲಾವಸ್ಥೆಯ ಕಟ್ಟಡದಲ್ಲಿರುವ ಅಂಗಡಿ ತೆರವಿಗೆ ನೋಟಿಸ್​ - ಹುಬ್ಬಳ್ಳಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ

ಹುಬ್ಬಳ್ಳಿಯ ಪ್ರಮುಖ ಮಾರುಕಟ್ಟೆ ಪ್ರದೇಶ ಬ್ರಾಡ್​​​ ವೇನಲ್ಲಿರುವ ಪಾಲಿಕೆಯ ವಾಣಿಜ್ಯ ಮಳಿಗೆ 60 ವರ್ಷಗಳ ಹಳೆಯದ್ದಾಗಿದ್ದು, ಯಾವುದೇ ಸಮಯದಲ್ಲಿ ಕುಸಿಯುವ ಅಪಾಯದಲ್ಲಿದೆ.‌ ಜನನಿಬಿಡ ಪ್ರದೇಶದಲ್ಲಿರುವ ಈ ಮಳಿಗೆ ಹಠಾತ್ ಕುಸಿದರೆ ಸಾವು-ನೋವುಗಳು ಸಂಭವಿಸುವ ಅಪಾಯವಿದೆ.

notice-to-clearing-shops-in-dilapidated-building-in-hubballi
ಎಚ್ಚೆತ್ತ ಹು-ಧಾ ಪಾಲಿಕೆ: ಶಿಥಿಲಾವಸ್ಥೆಯ ಕಟ್ಟಡದಲ್ಲಿರುವ ಅಂಗಡಿ ತೆರವಿಗೆ ನೋಟಿಸ್​

By

Published : Oct 4, 2021, 11:00 AM IST

ಹುಬ್ಬಳ್ಳಿ:ಬೆಂಗಳೂರು, ಧಾರವಾಡದಲ್ಲಿ ಬೃಹತ್ ಕಟ್ಟಡ ಕುಸಿದ ಘಟನೆಗಳು ನಡೆದ ಬೆನ್ನಲ್ಲೇ ಎಚ್ಚೆತ್ತ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ,‌ ನಗರದಲ್ಲಿರುವ ಶಿಥಿಲಾವಸ್ಥೆ ತಲುಪಿದ ವಾಣಿಜ್ಯ ಮಳಿಗೆಯನ್ನು ಗುರುತಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜನ ಸಂಚಾರ ಕಡಿಮೆ ಮಾಡಲು ಅಂಗಡಿಗಳ ಮುಂದೆ ಬ್ಯಾರಿಕೇಡ್ ಅಳವಡಿಸಿದೆ.

ನಗರದ ಪ್ರಮುಖ ಮಾರುಕಟ್ಟೆ ಪ್ರದೇಶ ಬ್ರಾಡ್​​​ ವೇನಲ್ಲಿರುವ ಪಾಲಿಕೆಯ ವಾಣಿಜ್ಯ ಮಳಿಗೆ 60 ವರ್ಷಗಳ ಹಳೆಯದ್ದಾಗಿದ್ದು, ಯಾವುದೇ ಸಮಯದಲ್ಲಿ ಕುಸಿಯುವ ಅಪಾಯದಲ್ಲಿದೆ.‌ ಜನನಿಬಿಡ ಪ್ರದೇಶದಲ್ಲಿರುವ ಈ ಮಳಿಗೆ ಹಠಾತ್ ಕುಸಿದರೆ ಸಾವು-ನೋವುಗಳು ಸಂಭವಿಸುವ ಅಪಾಯವಿದೆ. ಹಾಗಾಗಿ ಪಾಲಿಕೆಯ ಸೂಪರಿಟೆಂಡೆಂಟ್ ಎಂಜಿನಿಯರ್ ಟಿ. ತಿಮ್ಮಪ್ಪ‌ ನೇತೃತ್ವದ ತಂಡ ಮತ್ತೊಮ್ಮೆ ಖುದ್ದು ಪರಿಶೀಲಿಸಿ, ಕಟ್ಟಡದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಶಿಫಾರಸು ಮಾಡಿದೆ.

ಎಂಜಿನಿಯರ್​ಗಳ ಭೇಟಿ

ಅಲ್ಲದೇ ಎಸ್​​ಡಿಎಂ ಸಿವಿಲ್ ಎಂಜಿನಿಯರಿಂಗ್ ವಿಭಾಗದ ತಂಡವೂ ಕೂಡ ಈ ವಾಣಿಜ್ಯ ಮಳಿಗೆಯನ್ನು ಪರಿಶೀಲಿಸಿ ಯಾವುದೇ ಸಂದರ್ಭದಲ್ಲಿ ಕುಸಿಯಬಹುದಾಗಿದೆ ಎಂದು ಪಾಲಿಕೆಗೆ ವರದಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಅಂಗಡಿಗಳನ್ನು ತೆರವುಗೊಳಿಸುವಂತೆ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಅವರು ಅಂಗಡಿಕಾರರಿಗೆ ಮೂರನೇ ಮತ್ತು ಅಂತೀಮ ನೋಟಿಸ್ ನೀಡಿದ್ದಾರೆ. ಅಂಗಡಿ ತೆರವುಗೊಳಿಸದೆ ಕಟ್ಟಡ ಕುಸಿದು ಪ್ರಾಣಾಪಾಯ ಉಂಟಾದಲ್ಲಿ ತಾವೇ ಜವಾಬ್ದಾರಾಗುತ್ತೀರಿ ಎಂದು ಎಚ್ಚರಿಸಿದ್ದಾರೆ.

ವಲಯ ಕಚೇರಿ ನಂ 9ರ ವ್ಯಾಪ್ತಿಯಲ್ಲಿರುವ ಶಹರ ಪೊಲೀಸ್ ಠಾಣೆ ಎದುರಿಗೆ ಇರುವ ಮೂರು‌ ಅಂತಸ್ತಿನ ಈ ವಾಣಿಜ್ಯ ಕಟ್ಟಡವನ್ನು ಪಾಲಿಕೆಯು 60 ವರ್ಷಗಳ ಹಿಂದೆಯೇ ನಿರ್ಮಿಸಿದೆ. ಮೊದಲನೇ ಹಾಗೂ ಎರಡನೇ ಮಹಡಿಯ ಕಬ್ಬಿಣದ ಸರಳುಗಳು ತುಕ್ಕುಹಿಡಿದು ಹಾಳಾಗಿದ್ದು ಬಾಳಿಕೆ (ಸ್ಥಿರತೆ) ಕಳೆದುಕೊಂಡಿದೆ. ಛಾವಣಿಯ ಭಾಗವು ನೇತಾಡುವ ಸ್ಥಿತಿಯಲ್ಲಿದೆ. ಈ ಛಾವಣಿಗಳು ಯಾವುದೇ ಸಂದರ್ಭದಲ್ಲಿ ಬೀಳುವಂತಿವೆ. ಈ ಎರಡೂ ಛಾವಣಿಗಳು ಕುಸಿದಲ್ಲಿ ನೆಲಮಹಡಿಯೂ ಸಹ ಹೆಚ್ಚಿನ ಅಪಾಯ ಉಂಟಾಗಿ ದುರ್ಘಟನೆ ಸಂಭವಿಸಬಹುದಾಗಿದೆ ಎಂದು ಎಂಜಿನಿಯರ್​ಗಳು ಎಚ್ಚರಿಸಿದ್ದಾರೆ.

ಇದನ್ನೂ ಓದಿ:ಭಾರೀ ಮಳೆಯಿಂದ ಕೊಟ್ಟಿಗೆಗೆ ನುಗ್ಗಿದ ರಾಜಕಾಲುವೆ ನೀರು: 10ಕ್ಕೂ ಹೆಚ್ಚು ಜಾನುವಾರುಗಳು ಸಾವು

ABOUT THE AUTHOR

...view details