ಕರ್ನಾಟಕ

karnataka

ETV Bharat / state

ಲಾಕ್​ಡೌನ್ ತೆರವಿನ ನಂತರವೂ ಚೇತರಿಕೆ ಕಾಣದ ವಾಯುವ್ಯ ಕ.ರ.ಸಾರಿಗೆ ಸಂಸ್ಥೆ - hubli news

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಬಸ್ ಸಂಚಾರ ಹೆಚ್ಚಿದರೂ ಆದಾಯದಲ್ಲಿ ಮಾತ್ರ ಕೋವಿಡ್ ಪೂರ್ವದ ಆದಾಯವನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ಸಂಕಷ್ಟದಲ್ಲಿ ನಲಗುತ್ತಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಕೋವಿಡ್ ಚೇತರಿಸಿಕೊಳ್ಳಲಾಗದಂತಹ ಹೊಡೆತ ಕೊಟ್ಟಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

By

Published : Dec 10, 2020, 1:16 PM IST

ಹುಬ್ಬಳ್ಳಿ: ಲಾಕ್​​ಡೌನ್ ಸಂಪೂರ್ಣ ತೆರವುಗೊಳಿಸಿದ ಬಳಿಕ ಜನಜೀವನ ಸಹಜ ಸ್ಥಿತಿಯತ್ತ ಮರಳಿದರೂ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಆದಾಯದಲ್ಲಿ ಏರಿಕೆ ಕಂಡಿಲ್ಲ. ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿ ಬಸ್​ಗಳ ಸಂಚಾರ ಹೆಚ್ಚಿದರೂ ಆದಾಯ ಅಷ್ಟಕಷ್ಟೆ ಎಂಬುವಂತಾಗಿದೆ.

ಲಾಕ್​ಡೌನ್ ತೆರವಿನ ನಂತರವೂ ಆದಾಯದಲ್ಲಿ ಚೇತರಿಕೆ ಕಾಣದ ಎನ್ ಡಬ್ಲೂಕೆಆರ್​ಟಿಸಿ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಬಸ್ ಸಂಚಾರ ಹೆಚ್ಚಿದರೂ ಆದಾಯದಲ್ಲಿ ಮಾತ್ರ ಕೋವಿಡ್ ಪೂರ್ವದ ಆದಾಯವನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ಸಂಕಷ್ಟದಲ್ಲಿ ನಲಗುತ್ತಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಕೋವಿಡ್ ಚೇತರಿಸಿಕೊಳ್ಳಲಾಗದಂತಹ ಹೊಡೆತ ಕೊಟ್ಟಿದೆ. ಈಗಾಗಲೇ ಅಂತಾರಾಜ್ಯ ಬಸ್ ಸಂಚಾರ ಕೂಡ ಪ್ರಾರಂಭವಾಗಿದ್ದು, ಜನರಲ್ಲಿರುವ ಭಯ ಮಾತ್ರ ಕಡಿಮೆಯಾಗಿಲ್ಲ.

ಓದಿ:ಹುಬ್ಬಳ್ಳಿ - ಬೆಳಗಾವಿ ನಡುವೆ ತಡೆರಹಿತ ವೋಲ್ವೋ ಬಸ್ ಸಂಚಾರ ಆರಂಭ

ಈ ಮೊದಲು ಶೇ.30ರಷ್ಟು ಹಾಗೂ ಶೇ.50ರಷ್ಟು ಜನರಿಗೆ ಸಂಚಾರಕ್ಕೆ ಅನುಮತಿ ನೀಡಿತ್ತು. ಆದರೆ ಈಗ ಬಸ್​ಗಳಲ್ಲಿ ನೂರಕ್ಕೆ ನೂರರಷ್ಟು ಜನರು ಸಂಚರಿಸುತ್ತಿದ್ದರೂ ಆದಾಯದಲ್ಲಿ ಚೇತರಿಕೆಯಾಗುತ್ತಿಲ್ಲ. ನವೆಂಬರ್​ ತಿಂಗಳಲ್ಲಿ ದಾಖಲೆ ಎಂಬಂತೆ ಶೇ.70ರಷ್ಟು ಆದಾಯವನ್ನು ತಲುಪಲು ಸಾಧ್ಯವಾಗಿತ್ತು. ಇನ್ನು ಬಿಆರ್​ಟಿಎಸ್ ಕೂಡ ಸಾಕಷ್ಟು ನಷ್ಟದಲ್ಲಿ ಸಾಗುತ್ತಿದ್ದು, ಇಲಾಖೆ ಆದಾಯ ಹೆಚ್ಚಳದ ಗುರಿ ಇಟ್ಟು ಕೆಲಸ ಮಾಡುತ್ತಿದೆ.

ABOUT THE AUTHOR

...view details