ಹುಬ್ಬಳ್ಳಿ: ಭ್ರಷ್ಟಾಚಾರಿಗಳು ಹಾಗೂ ಲೂಟಿಕೋರರು ಜಾತಿ ಹೆಸರು ಹೇಳಿ ಪಾರಾಗಲು ಸಾಧ್ಯವಿಲ್ಲ ಎಂದು ಕೇಂದ್ರದ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಪರೋಕ್ಷವಾಗಿ ಡಿಕೆಶಿ ಬೆಂಬಲಿಗರಿಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರ ಅವರು, ಡಿಕೆಶಿ ಹೆಸರಲ್ಲಿ 800 ಕೋಟಿ ರೂ., ಮಗಳ ಹೆಸರಲ್ಲಿ 108 ಕೋಟಿ ಆಸ್ತಿ, ಹಣ ಪತ್ತೆಯಾಗಿದೆ. ಇದೆಲ್ಲವೂ ಅವರೇ ದುಡಿದು, ಕಟ್ಟೆ ಹಾಕಿದ ಆಸ್ತಿನಾ ಎಂದು ಅವರೇ ಉತ್ತರಿಸಬೇಕು. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಲೂಟಿಕೋರರ ಪರ ಪ್ರತಿಭಟನೆ ನಡೆಸುತ್ತಿವೆ ಎಂದು ಕುಟುಕಿದರು.