ಕರ್ನಾಟಕ

karnataka

ETV Bharat / state

ಬಿಜೆಪಿಯವರು 2500 ಎಂಎಲ್​​​ಎಗಳನ್ನು ಖರೀದಿ ಮಾಡಿದ್ದಾರೆ : ಸಚಿವ ಸಂತೋಷ್​ ಲಾಡ್ - ಸಚಿವ ಸಂತೋಷ್​ ಲಾಡ್

ಸತೀಶ ಜಾರಕಿಹೊಳಿ ಅವರೊಬ್ಬ ಒಳ್ಳೆಯ ಮಾನವೀಯ ಗುಣದ ವ್ಯಕ್ತಿ ಎಂದು ಸಚಿವ ಸಂತೋಷ್​ ಲಾಡ್​ ಹೇಳಿದ್ದಾರೆ.

ಸಚಿವ ಸಂತೋಷ್​ ಲಾಡ್ ಹೇಳಿಕೆ
ಸಚಿವ ಸಂತೋಷ್​ ಲಾಡ್ ಹೇಳಿಕೆ

By ETV Bharat Karnataka Team

Published : Oct 28, 2023, 2:06 PM IST

Updated : Oct 28, 2023, 10:55 PM IST

ಸಚಿವ ಸಂತೋಷ್​ ಲಾಡ್ ಹೇಳಿಕೆ

ಧಾರವಾಡ: ಜಿ.ಪರಮೇಶ್ವರ ಮನೆಯಲ್ಲಿ ಡಿನ್ನರ್ ಪಾರ್ಟಿ ವಿಚಾರಕ್ಕೆ ನಮಗೆ ಎಲ್ಲ ಕಡೆಯೂ ಆಹ್ವಾನ ಇರುತ್ತದೆ ಎಂದು ಮಾಧ್ಯಮಗಳಿಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.

ಮಾಧ್ಯಮದವರು ಸತೀಶ್ ಜಾರಕಿಹೊಳಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸತೀಶ ಜಾರಕಿಹೊಳಿ ಅವರೊಬ್ಬ ಒಳ್ಳೆಯ ಮಾನವೀಯ ಗುಣದ ವ್ಯಕ್ತಿ. ಅಂಬೇಡ್ಕರವಾದ, ಬಸವವಾದ ಇರುವ ನಾಯಕ ಅವರನ್ನು ಮೂವತ್ತು ವರ್ಷದಿಂದ ನಾನು ನೋಡುತ್ತ ಬಂದಿದ್ದೇನೆ ರಾಜಕೀಯ ಭಿನ್ನಾಭಿಪ್ರಾಯ ಬಹಿರಂಗವಾಗಿ ಹೇಳುವ ವ್ಯಕ್ತಿಯಲ್ಲ. ಅಸಮಾಧಾನ ಬೇರೆ ರೀತಿ ತೋಡಿಕೊಂಡಿದ್ದಾರೆ. ಅದು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ ಇನ್ನು ಏನದರೂ ಸ್ಪಷ್ಟನೆ ಬೇಕಿದ್ದರೇ ಅವರನ್ನೇ ಕೇಳಬೇಕು ಎಂದು ಹೇಳಿದರು.

2500 ಎಮ್​ಎಲ್​ಎಗಳ ಖರೀದಿ: ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆಫರ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿಯವರು ಹತ್ತು ವರ್ಷದಲ್ಲಿ 2500 ಎಂಎಲ್‌ಗಳನ್ನು ಖರೀದಿ ಮಾಡಿದ್ದಾರೆ. ದುಡ್ಡು ಆಫರ್ ಮಾಡುವುದು ಬಿಜೆಪಿಗೆ ಹೊಸದೇನಲ್ಲ. ಅದು ದುಡ್ಡಿನ ಪಕ್ಷ ಅವರ ಪಕ್ಷದ ಹಣವೇ 7500 ಕೋಟಿ ರೂ.ಇದೆ. ಪಕ್ಷದಿಂದ ಸಂಗ್ರಹ ಆಗಿದ್ದು ಅಷ್ಟಿದೆ. ಕೋವಿಡ್ ಸಮಯದ ಪಿಎಂ ರಿಲೀಫ್ ಫಂಡ 30 ಸಾವಿರ ಕೋಟಿ ಆಗಿದೆ. ಅವರು ಗುಜರಾತ್‌ನಲ್ಲಿ ಸ್ಟೇಡಿಯಂ ಕಟ್ಟಿದ್ದಾರೆ. ಆದರೆ, ಅವರಿಗೆ ಒಂದೇ ಒಂದು ಆಸ್ಪತ್ರೆ ಕಟ್ಟಲು ಆಗಿಲ್ಲ ಎಂದು ಕೇಂದ್ರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ಸಾಲ ವಸೂಲಿಗಾಗಿ ರೈತರಿಗೆ ನೋಟೀಸ್ ವಿಚಾರಕ್ಕೆ ಮಾತನಾಡಿದ ಅವರು, ಸಾಲ ಮರುಪಾವತಿ ಮಾಡಿ ಅಂತಾ ಕೇಳುವಂತಹುದು ಇದೆ. ಆದರೆ ರೈತರಿಗೆ ಸಾಲ ತುಂಬಿ ಅಂತಾ ಒತ್ತಡ ಹಾಕುವುದು, ತೊಂದರೆ ಕೊಡುವುದು ಸರಿಯಲ್ಲ. ನಮ್ಮ ದೇಶದಲ್ಲಿ ಬೇರೆ ವ್ಯವಸ್ಥೆಯಲ್ಲಿ ನಾವು ಇದ್ದೇವೆ. ಸಣ್ಣ ಸಾಲ ಪಡೆದವರು ಅತ್ಯಂತ ನಿಯತ್ತಿನಿಂದ ಸಾಲ ತುಂಬುತ್ತಾರೆ. ಕಳೆದ ಮೂವತ್ತು ವರ್ಷದಿಂದ ಹೀಗೆ ಇದೆ. ಇದರ ಬಗ್ಗೆ ಹೆಚ್ಚಿಗೆ ಮಾತನಾಡಿದರೆ ರಾಜಕೀಯ ಆಗುತ್ತದೆ ಎಂದರು.

ಇದೇ ವೇಳೆ, ಮುಂಬರುವ ಸರ್ಕಾರಗಳು ಸಣ್ಣಪುಟ್ಟ ಉದ್ಯಮ ಮತ್ತು ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದು‌ ಸಚಿವರು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ರೈತರು ಸಾಲ ತುಂಬದಿದ್ದಲ್ಲಿ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ಎಲ್ಲರ ಸಾಲವನ್ನೂ ಮನ್ನಾ ಮಾಡಬೇಕಿಲ್ಲ ಅದಕ್ಕಾಗಿಯೇ ಮಾನದಂಡಗಳಿರಬೇಕು.‌ ಡಾ. ಅಂಬೇಡ್ಕರ್ ಅವರು ಸಂವಿಧಾನದಲ್ಲಿಯೇ ಈ ಬಗ್ಗೆ ಹೇಳಿದ್ದಾರೆ. ಬಹಳಷ್ಟು ರೈತರಿಗೆ ಸಾಲ ಕೊಡಲಾಗಿದೆ.‌ ಆದರೆ, ಕೆಲವರಿಗೆ ಮರಳಿ ತುಂಬಲು ಆಗುವುದಿಲ್ಲ ಅವರ ಬಗ್ಗೆ ಸರ್ಕಾರ ಮಾನವೀಯತೆ ದೃಷ್ಟಿಯಿಂದ ವಿಚಾರ ಮಾಡಬೇಕು ಎಂದರು.

ಹುಬ್ಬಳ್ಳಿಯಲ್ಲಿ ಲಾಡ್​ ಹೇಳಿಕೆ:ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸಂತೊಷ್​ ಲಾಡ್​, ಸಚಿವ ಸತೀಶ ಜಾರಕಿಹೊಳಿ ಅವರು ವಿದೇಶಕ್ಕೆ ಶಾಸಕರನ್ನ ಕರೆದೊಯ್ದರೆ ತಪ್ಪೇನಿದೆ? ಯಾವ್ಯಾವ ಶಾಸಕರು ಹೋಗುತ್ತಿದ್ದಾರೆ ಎಂಬ ನನಗೆ ಮಾಹಿತಿ ಇಲ್ಲ. ಜಾರಕಿಹೊಳಿಯವರು ಕೆಲವು ಶಾಸಕರನ್ನ ಸ್ನೇಹಪರವಾಗಿ ಕರೆದೊಯ್ಯುತ್ತಿದ್ದಾರೆ. ಇದರಲ್ಲಿ ರಾಜಕೀಯ ವಿಶ್ಲೇಷಣೆ ಮಾಡುವುದು, ಬಣ ಸೃಷ್ಟಿ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಇದನ್ನೂ ಓದಿ:50 ಕೋಟಿ ಆಫರ್, ಕಾಂಗ್ರೆಸ್ ಶಾಸಕರ ಖರೀದಿ ಯತ್ನದ ವಿಡಿಯೋ ದಾಖಲೆ ಇವೆ: ಶಾಸಕ ರವಿಕುಮಾರ್ ಗಣಿಗ ಸ್ಪೋಟಕ ಹೇಳಿಕೆ

Last Updated : Oct 28, 2023, 10:55 PM IST

ABOUT THE AUTHOR

...view details