ಹುಬ್ಬಳ್ಳಿ:ಏಪ್ರಿಲ್ ಹಾಗೂ ಮೇ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಹಣ್ಣುಗಳ ರಾಜ ಮಾವಿನ ಹಣ್ಣಿನ ಮಾರಾಟ ಜೋರಾಗಿ ನಡೆಯುತಿತ್ತು. ಆದ್ರೆ ಈ ಬಾರಿ ಲಾಕ್ಡೌನ್ ಘೋಷಣೆ ಮಾಡಿದ ಪರಿಣಾಮ ಮಾವಿನ ಹಣ್ಣಿನ ಮಾರಾಟ ತೀವ್ರ ಕುಸಿತ ಕಂಡಿದೆ.
ಮಾವಿನ ಹಣ್ಣಿಗೂ ತಟ್ಟಿದ ಲಾಕ್ಡೌನ್ ಎಫೆಕ್ಟ್: ಕುಸಿತ ಕಂಡ ವಹಿವಾಟು - Lockdown effect on mango sale
ಕೊರೊನಾ ಭೀತಿ ಹಿನ್ನೆಲೆ ಲಾಕ್ಡೌನ್ ಮಾಡಲಾಗಿದ್ದು, ಇದರಿಂದ ಮಾವಿನ ಹಣ್ಣಿನ ವ್ಯಾಪಾರ ತೀವ್ರ ಕುಸಿತ ಕಂಡಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಾವಿನ ಹಣ್ಣಿನ ಸೀಜನ್ ಪ್ರಾರಂಭವಾಗುತಿದ್ದಂತೆ ರಾಜ್ಯದ ವಿವಿಧ ಮೂಲೆಗಳಿಂದ ಆಪುಸ್, ಕಲ್ಮಿ, ಮಲಗೋಬಾ ಸೇರಿದಂತೆ ಹಲವಾರು ತಳಿಯ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿದ್ದವು. ಆದರೆ, ಈ ಬಾರಿ ಲಾಕ್ಡೌನ್ ಹಿನ್ನೆಲೆ ಮಾರುಕಟ್ಟೆಗೆ ಬರುವ ಹಣ್ಣಿನ ಪ್ರಮಾಣ ಕಡಿಮೆಯಾಗಿದ್ದು, ಸಾರ್ವಜನಿಕರ ಖರೀದಿಯ ಪ್ರಮಾಣ ಪಾತಾಳಕ್ಕೆ ಕುಸಿದಿದೆ.
ಈದ್ಗಾ ಮೈದಾನ, ಜನತಾ ಬಜಾರ್, ದುರ್ಗದ ಬೈಲ್ ಸೇರಿದಂತೆ ವಾಣಿಜ್ಯನಗರಿಯ ಆಯಕಟ್ಟಿನ ಪ್ರದೇಶಗಳಲ್ಲಿ ಪ್ರವೇಶಿಸುತ್ತಿದ್ದಂತೆ ಮಾವಿನ ಹಣ್ಣಿನ ವಾಸನೆ ಹಣ್ಣು ಪ್ರಿಯರನ್ನು ಆಕರ್ಷಿಸುತ್ತಿತ್ತು. ಈ ಬಾರಿ ಲಾಕ್ಡೌನ್ ಮಾವಿನ ಮಾರಾಟಕ್ಕೆ ಹೊಡೆತ ನೀಡಿದೆ. ಅಲ್ಲದೇ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ.