ಕರ್ನಾಟಕ

karnataka

ಕೋವಿಡ್ ರೋಗಿಗಳಿಗೆ ಜೀವದಾತ: ಮನೆ ಮನೆಗೆ ತೆರಳಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಕಿಮ್ಸ್ ವೈದ್ಯ

ಮೊದಲು ಪಾಸಿಟಿವ್ ರೋಗಿಗಳ ಲಿಸ್ಟ್ ಮಾಡಿಕೊಳ್ಳುವ ತಂಡ ಅವರ ಮನೆಗೆ ತೆರಳಿ ಅವಶ್ಯಕ ಚಿಕಿತ್ಸೆ ನೀಡುತ್ತಿದೆ. ಆಸ್ಪತ್ರಗೆ ಬಂದ್ರೆ ಬೆಡ್ ಸಮಸ್ಯೆ ಅಂತ ಅಷ್ಟೇನು ಸಿಂಟಮ್ಸ್ ಇಲ್ಲದ ವ್ಯಕ್ತಿಗಳಿಗೆ ಮನೆಗಳಲ್ಲಿಯೇ ಮಾತ್ರೆ ಔಷಧ ನೀಡಿ ಕಂಟ್ರೋಲ್ ಮಾಡ್ತಿದ್ದಾರೆ. ಅಲ್ಲದೇ ನಾನ್ ಕೋವಿಡ್​ ರೋಗಿಗಳಿಗೂ ಮನೆ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ.

By

Published : May 7, 2021, 7:48 PM IST

Published : May 7, 2021, 7:48 PM IST

Updated : May 7, 2021, 8:02 PM IST

ETV Bharat / state

ಕೋವಿಡ್ ರೋಗಿಗಳಿಗೆ ಜೀವದಾತ: ಮನೆ ಮನೆಗೆ ತೆರಳಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಕಿಮ್ಸ್ ವೈದ್ಯ

KIMS doctor who treats patient on their way home
ಮನೆ ಮನೆಗೆ ತೆರಳಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಕಿಮ್ಸ್ ವೈದ್ಯ

ಹುಬ್ಬಳ್ಳಿ:ದೇಶಾದ್ಯಂತ ಮಹಾಮಾರಿ ಕೊರೊನಾ ಆರ್ಭಟಿಸುತ್ತಿದೆ. ಅದೆಷ್ಟೋ ಜನ ಕೊರೊನಾ ಸೋಂಕಿನಿಂದಾಗಿ ಜನ‌ ಹೋರಾಟ ನಡೆಸಿದ್ದಾರೆ.‌ ಆಸ್ಪತ್ರೆಗೆ ಬಂದರೆ ಬೆಡ್ ಸಿಕ್ತಿಲ್ಲ. ಇತ್ತ ಪಾಸಿಟಿವ್ ಅಂದ್ರೆ ಡಾಕ್ಟರ್ ನೋಡ್ತಿಲ್ಲ. ಆದರೆ ಇಲ್ಲೊಬ್ಬ ವೈದ್ಯರು ಕೊರೊನಾ ಅಂದ್ರೆ ಸಾಕು ಮನೆ ಮನೆಗೆ ಹೋಗಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕೊರೊನಾ ಕಾಲದಲ್ಲಿ ರೋಗಿಗಳ ಪಾಲಿಗೆ ದೇವರಾಗಿದ್ದಾರೆ.

ಹೋಂ ಐಸೋಲೇಷನ್​ನಲ್ಲಿರುವ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಹುಬ್ಬಳ್ಳಿಯ ಕಿಮ್ಸ್ ವೈದ್ಯ ಡಾ.ಎಸ್.ವೈ ಮುಲ್ಕಿಪಾಟೀಲ್ ಮಾನವೀಯ ಕಾರ್ಯ ಮಾಡುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ 8 ರಿಂದ 2ರ ವರಗೆ ಕಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಕಾರ್ಯ ನಿರ್ವಹಿಸುವ ಇವರು, ಬೆಳಗ್ಗೆಯಿಂದ ಸಹಾಯವಾಣಿ ಮೂಲಕ ಕೊರೊನಾ ಸೋಂಕಿತರ ನೋಂದಣಿ ಮಾಡಿಕೊಳ್ಳುತ್ತಾರೆ. ಅದಕ್ಕಂತಲೇ ಸಹಾಯವಾಣಿ ತೆಗೆದಿರೋ ಮುಲ್ಕಿ ಪಾಟೀಲ್ ಅಲ್ಲಿ ನೋಂದಣಿಯಾದ ರೋಗಿಗಳ ಮನೆಗೆ ತೆರಳಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಮನೆ ಮನೆಗೆ ತೆರಳಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಕಿಮ್ಸ್ ವೈದ್ಯ

ಮೊದಲು ಪಾಸಿಟಿವ್ ರೋಗಿಗಳ ಲಿಸ್ಟ್ ಮಾಡಿಕೊಳ್ಳುವ ತಂಡ ಅವರ ಮನೆಗೆ ತೆರಳಿ ಅವಶ್ಯಕ ಚಿಕಿತ್ಸೆ ನೀಡುತ್ತಿದೆ. ಆಸ್ಪತ್ರಗೆ ಬಂದ್ರೆ ಬೆಡ್ ಸಮಸ್ಯೆ ಅಂತ ಅಷ್ಟೇನು ಸಿಂಟಮ್ಸ್ ಇಲ್ಲದ ವ್ಯಕ್ತಿಗಳಿಗೆ ಮನೆಗಳಲ್ಲಿಯೇ ಮಾತ್ರೆ ಔಷಧ ನೀಡಿ ಕಂಟ್ರೋಲ್ ಮಾಡ್ತಿದ್ದಾರೆ. ಅಲ್ಲದೆ ನಾನ್ ಕೋವಿಡ್​ ರೋಗಿಗಳಿಗೂ ಮನೆ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಕೊರೊನಾ ಅಂತ ಆಸ್ಪತ್ರೆಗೆ ಬರಲು ಭಯಪಡುವ ಜನರಿಗೆ ಈ ವೈದ್ಯರು ಆಶಾ ಕಿರಣವಾಗಿದ್ದಾರೆ.

ಇನ್ನು ಈ ವೈದ್ಯರಿಗೆ ಬೆನ್ನೆಲುಬಾಗಿ ನಿಂತಿದ್ದು, ಭಾರತೀಯ ಜೈನ್ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜೈನ್, ಯಾಕೆಂದರೆ ಇವರೇ ಬೆಳಗ್ಗೆಯಿಂದ ಸಹಾಯವಾಣಿಗೆ ಬರುವ ಕರೆಗಳನ್ನು ನೋಟ್ ಮಾಡಿಕೊಂಡು ವೈದ್ಯರನ್ನ ಅವರಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಸೋಂಕಿತರು ಹಾಗೂ ಸೋಂಕಿತರಲ್ಲದ ರೋಗಿಗಳಿಗೆ ಬೇಕಾದ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸುವ ಮೂಲಕ ಡಾ.ಮುಲ್ಕಿ ಪಾಟೀಲ್ ಅವರಿಗೆ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ.

ಒಟ್ಟಾರೆ ಕೊರೊನಾ ಸೋಂಕಿತರೆಂದರೆ ಸಾಕು ಚಿಕಿತ್ಸೆ ನೀಡೋದಿರ್ಲಿ, ಯಾವುದೇ ವೈದ್ಯರು ಅಥವಾ ಜನಸಾಮಾನ್ಯರು ಹತ್ತಿರವೇ ಸೇರಿಸಿಕೊಳ್ಳದ ಇಂದಿನ‌ ಪರಿಸ್ಥಿತಿಯಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ರೋಗಿಗಳ ಮನೆಗೆ ತೆರಳಿ ಉಚಿತ ಚಿಕಿತ್ಸೆ ನೀಡೋ ಮೂಲಕ ಮಾನವೀಯತೆ ಮರೆಯುತ್ತಿದ್ದಾರೆ.

ಇದನ್ನೂ ಓದಿ:ಧಾರವಾಡ ಜಿಲ್ಲೆಯಲ್ಲಿ 4 ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಕೇಂದ್ರ ಒಪ್ಪಿಗೆ.. ಸಚಿವ ಜೋಶಿ

Last Updated : May 7, 2021, 8:02 PM IST

ABOUT THE AUTHOR

...view details