ಕರ್ನಾಟಕ

karnataka

ETV Bharat / state

ಮುನಿಸಿಕೊಂಡ್ರಾ ಜಗದೀಶ್ ಶೆಟ್ಟರ್ : ಮಾಧ್ಯಮಗಳಿಗೆ ನೋ ರಿಯಾಕ್ಷನ್ - ಬಸವರಾಜ ಬೊಮ್ಮಾಯಿ

ಮಾಜಿ ಸಚಿವ ಜಗದೀಶ್​ ಶೆಟ್ಟರ್ ಅವರು ಬೊಮ್ಮಾಯಿ ಸಂಪುಟಕ್ಕೆ ಸೇರುವುದಿಲ್ಲ ಎಂದು ಬುಧವಾರ ಸ್ಪಷ್ಟಪಡಿಸಿದ್ದರು. ಇಂದು ಸಿಎಂ ಹುಬ್ಬಳ್ಳಿಗೆ ಭೇಟಿ ನೀಡಿದಾಗಲೂ ಶೆಟ್ಟರ್​, ಅರವಿಂದ್​ ಬೆಲ್ಲದ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಇಂದು ಮಾಧ್ಯಮಗಳ ಜೊತೆ ಮಾತನಾಡಲು ಸಹ ಜಗದೀಶ್​ ಶೆಟ್ಟರ್​ ಹಿಂದೇಟು ಹಾಕಿರುವುದು ಅನುಮಾನಕ್ಕೆ ದಾರಿಮಾಡಿಕೊಟ್ಟಿದೆ.

ಮುನಿಸಿಕೊಂಡ್ರಾ ಜಗದೀಶ್ ಶೆಟ್ಟರ್

By

Published : Jul 29, 2021, 5:58 PM IST

ಹುಬ್ಬಳ್ಳಿ: ಮಾಜಿ ಸಚಿವ ಜಗದೀಶ್ ಶೆಟ್ಟರ್ ಅವರು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಮರಳಿ ಹುಬ್ಬಳ್ಳಿಗೆ ಆಗಮಿಸಿ ಮಾಧ್ಯಮಗಳ ಮುಂದೆ ಮಾತನಾಡಲು ನಿರಾಕರಿಸಿದ ಘಟನೆ ನಡೆಯಿತು.

ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾದ ನಂತರ ಸ್ವತಃ ತಾವೇ ಸಚಿವನಾಗಿ ಮುಂದುವರೆಯಲು ಸಾಧ್ಯವಿಲ್ಲ. ಬೊಮ್ಮಾಯಿ ಅವರ ಸಂಪುಟಕ್ಕೆ ಸೇರಲ್ಲ ಎಂದು ಬುಧವಾರ ಸ್ಪಷ್ಟನೆ ನೀಡಿದ್ದರು.

ಶೆಟ್ಟರ್ ಅವರು ಇಂದು ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರು ಮಾತನಾಡಿಸಲು ಮುಂದಾದರು ಕೂಡಾ ಯಾವುದೇ ಪ್ರತಿಕ್ರಿಯೆ ನೀಡದೇ ಮುಂದಕ್ಕೆ ತೆರಳಿದರು.

ವಿಡಿಯೋ ನೋಡಿ: ನಾನು ಸೀನಿಯರ್​​..ಮುಂದಿನ ಕ್ಯಾಬಿನೆಟ್‌ನಲ್ಲಿ ಸಚಿವನಾಗಲ್ಲ: ಜಗದೀಶ್ ಶೆಟ್ಟರ್

ಈ ಮೂಲಕ ಎಲ್ಲೋ ಜಗದೀಶ್ ಶೆಟ್ಟರ್ ಅವರಿಗೆ ಬೊಮ್ಮಾಯಿ ಸಿಎಂ ಅಗಿದ್ದು ಬೇಸರ ತಂದಿದೆಯಾ ಎಂಬ ಬಗ್ಗೆ ಅನುಮಾನ ಮೂಡುವಂತಾಗಿದೆ.

ABOUT THE AUTHOR

...view details