ಹುಬ್ಬಳ್ಳಿ: ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗುತ್ತಿದ್ದ ಹಾಗೆಯೇ ರಾಜ್ಯದ ಹಿರಿಯ ನಾಯಕರಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದು, ಇಂದು ಮತ್ತೆ ಜಗದೀಶ್ ಶೆಟ್ಟರ್ ಮಾತನಾಡಿದರು.
ಶಾಸಕನಾಗಿಯೇ ಅಭಿವೃದ್ಧಿ ಮಾಡಿ ತೋರಿಸುತ್ತೇನೆ : ಶೆಟ್ಟರ್ ಸವಾಲ್ - jagadish shetter latest update
ನಿನ್ನೆ ಮೊನ್ನೆಯಿಂದ ಜಗದೀಶ್ ಶೆಟ್ಟರ್ ನೂತನ ಸಿಎಂ ಬಗ್ಗೆ ಪರೋಕ್ಷವಾಗಿ ಬೇಸರ ಹೊರಹಾಕುತ್ತಲೇ ಬರುತ್ತಿದ್ದಾರೆ. ಇದರ ಬೆನ್ನಲ್ಲೇ ಇಂದು ಮತ್ತೆ ಈ ಬಗ್ಗೆ ಮಾತನಾಡಿದ್ದು, ನಾನು ಶಾಸಕನಾಗಿಯೇ ಏನು ಅಭಿವೃದ್ಧಿ ಮಾಡಬೇಕೋ ಅದನ್ನು ಮಾಡಿ ತೋರಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಶೆಟ್ಟರ್ ಸವಾಲ್
ನಗರದ ಕೇಶವ ಕುಂಜದಲ್ಲಿ ಮಾತನಾಡಿದ ಜಗದೀಸ್ ಶೆಟ್ಟರ್ ನನಗೆ ಸ್ವಾಭಿಮಾನ ಎಂಬುದು ಇದೆ. ಅಷ್ಟೇ ಅಲ್ಲದೆ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದ್ದು, ಹೀಗಾಗಿ ನಾನು ಸಂಪುಟದಲ್ಲಿ ಮಂತ್ರಿ ಆಗೋದಿಲ್ಲ. ಆದ್ರೂ ಕೂಡಾ ನಾನು ಇನ್ನೂ ಶಾಸಕನಾಗಿ ಇದ್ದೇನೆ. ಇದರಲ್ಲೇ ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ತಮ್ಮ ಬೇಸರ ಹೊರಹಾಕಿದರು.