ಕರ್ನಾಟಕ

karnataka

ETV Bharat / state

ಏ ನಡೀರಿ.... ಆ ಈಶ್ವರಪ್ಪ ಬ್ರೇನ್​ಗೂ ನಾಲಿಗೆಗೂ ಕನೆಕ್ಷನ್ನೇ​ ಇಲ್ಲ.... ಸಿದ್ದು ಕಿಡಿಕಿಡಿ - ಉಮೇಶ್​ ಜಾಧವ್​

ಈಶ್ವರಪ್ಪಗೆ ಬ್ರೇನ್​ ​​ ಮತ್ತು ನಾಲಿಗೆ ಲಿಂಕ್​ ತಪ್ಪಿದೆ. ಹಾಗಾಗಿ ನಾನು ಈ ಬಗ್ಗೆ ಏನೂ ಹೇಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಶ್ವರಪ್ಪ ವಿರುದ್ಧ ಕಿಡಿಕಾರಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

By

Published : May 15, 2019, 2:16 PM IST

ಹುಬ್ಬಳ್ಳಿ: ಈಶ್ವರಪ್ಪಗೆ ಬ್ರೇನ್​​​ಗೂ​​ ಮತ್ತು ನಾಲಿಗೆಗೂ ಲಿಂಕ್​ ತಪ್ಪಿದೆ. ಇವರ ಬಗ್ಗೆ ಸಚಿವ ಡಿ.ಕೆ. ಶಿವಕುಮಾರ್​ ಈಗಾಗಲೇ ಹೇಳಿಕೆ ನೀಡಿದ್ದಾರೆ. ನಾನು ಈ ಬಗ್ಗೆ ಏನೂ ಹೇಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು.

ನಗರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಶ್ವರಪ್ಪ ಬಗ್ಗೆ ಪ್ರಶ್ನೆ ಕೇಳಬೇಡಿ. ಈಶ್ವರಪ್ಪ ಬ್ರೇನ್​​​ಗೂ​ ಮತ್ತು ನಾಲಿಗೆಗೂ ಲಿಂಕ್ ತಪ್ಪಿದೆ. ಸಮ್ಮಿಶ್ರ ಸರ್ಕಾರ ಪತನದ ಬಗ್ಗೆ ಬಿಜೆಪಿಯವರು ಒಂದು ವರ್ಷದಿಂದ ಹೇಳುತ್ತಿದ್ದಾರೆ. ಜನ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಲೇವಡಿ ಮಾಡಿದರು.

ಹುಬ್ಬಳ್ಳಿಯಲ್ಲಿ ಈಶ್ವರಪ್ಪನವರ ವಿರುದ್ಧ ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಉಮೇಶ್​ ಜಾಧವ್​ ಪ್ಯಾಕೇಜ್ ಆಮಿಷಕ್ಕೆ ಒಳಗಾಗಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆ ಇನ್ನೂ ಬಲಗೊಳ್ಳಬೇಕು. ಸ್ವಾರ್ಥ, ಹಣದ ಆಮಿಷಕ್ಕೆ ಅನೇಕರು ಬಲಿಯಾಗಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾತಿನ ಚಾಟಿ ಬೀಸಿದರು. ರಾಜಕೀಯ ವ್ಯವಸ್ಥೆ ಹಾಳಾಗುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗೋಕೆ ಶಾಸಕರನ್ನು ಖರೀದಿಸುತ್ತಿದ್ದಾರೆ. ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸೇರಿದಂತೆ ಯಾರೂ ಸಹ ಕಾಂಗ್ರೆಸ್​ ಪಕ್ಷವನ್ನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details