ಕರ್ನಾಟಕ

karnataka

ETV Bharat / state

ನಾನು ಕೂಡ ಉಪಚುನಾವಣೆಯ ಟಿಕೆಟ್ ಆಕಾಂಕ್ಷಿ: ವಿ.ಎಸ್. ಪಾಟೀಲ್ - NWKRTC president VSPatil

ನಾನು ಕೂಡ ಉಪಚುನಾವಣೆಯ ಟಿಕೆಟ್ ಆಕಾಂಕ್ಷಿ. ಹೈಕಮಾಂಡ್ ಟಿಕೆಟ್ ನೀಡಿದ್ರೆ ನಾನು ಸ್ಪರ್ಧೆಗೆ ಸಿದ್ಧವೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷ ವಿ.ಎಸ್. ಪಾಟೀಲ್ ಹೇಳಿದ್ರು.

ವಿ.ಎಸ್.ಪಾಟೀಲ್

By

Published : Oct 14, 2019, 1:57 PM IST

ಹುಬ್ಬಳ್ಳಿ: ನಾನು ಕೂಡ ಉಪಚುನಾವಣೆಯ ಟಿಕೆಟ್ ಆಕಾಂಕ್ಷಿ. ಹೈಕಮಾಂಡ್ ಟಿಕೆಟ್ ನೀಡಿದ್ರೆ ನಾನು ಸ್ಪರ್ಧೆಗೆ ಸಿದ್ಧವೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷ ವಿ.ಎಸ್. ಪಾಟೀಲ್ ಚುನಾವಣಾ ಅಖಾಡಕ್ಕಿಳಿಯುವ ಸುಳಿವು ನೀಡಿದ್ದಾರೆ.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವರಾಮ ಹೆಬ್ಬಾರ್​ ತ್ಯಾಗದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ನಮ್ಮ ಪಕ್ಷ ಒಂದು ವೇಳೆ ಅವರಿಗೆ ಟಿಕೆಟ್ ನೀಡಿದ್ರೆ, ನಾನು ತ್ಯಾಗಕ್ಕೆ ಸಿದ್ಧ. ಒಂದು ವೇಳೆ ಅವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡುವುದಾದ್ರೆ, ನನಗೆ ಟಿಕೆಟ್ ಕೊಡಲಿ ಎಂದರು.

ವಿ.ಎಸ್. ಪಾಟೀಲ್ ಹೇಳಿಕೆ

881 ಕೋಟಿ ನಷ್ಟ :

ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ 881 ಕೋಟಿ ರೂಪಾಯಿ ನಷ್ಟದಲ್ಲಿದೆ. ರಾಜ್ಯ ಸರ್ಕಾರದಿಂದ 777 ಕೋಟಿ ಹಣ ಬಿಡುಗಡೆಯಾಗಬೇಕಿದೆ. ಪ್ರತಿದಿನ ಸಾರಿಗೆ ಸಂಸ್ಥೆ 70 ಲಕ್ಷ ನಷ್ಟದಲ್ಲಿ ನಡೆಯುತ್ತಿದೆ. ಈ‌ ಬಗ್ಗೆ ಸಿಎಂ‌ ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರೊಂದಿಗೆ ಚರ್ಚೆ ನಡೆಸಲಾಗುವುದು. ಸಾರಿಗೆ ಸಂಸ್ಥೆಗೆ ಆಗಿರುವ ನಷ್ಟವನ್ನ ಆರು ತಿಂಗಳಲ್ಲಿ ಸರಿದೂಗಿಸಲು ಪ್ರಯತ್ನಿಸಲಾಗುವುದು ಎಂದರು.

ಇನ್ನು, ಬಿಆರ್ ಟಿಎಸ್ ನಿಂದ ಒಂದು ತಿಂಗಳಿಗೆ ಸುಮಾರು ಒಂದು ಕೋಟಿಯಷ್ಟು ನಷ್ಟವಾಗುತ್ತಿದೆ. ಸಂಸ್ಥೆಯ ವ್ಯಾಪ್ತಿಯಲ್ಲಿ ಮುಂಬರುವ ವರ್ಷದಲ್ಲಿ 630 ನೂತನ ಬಸ್ ಸೇರ್ಪಡೆಗೊಳಿಸಲಾಗುವುದು. 500 ಹಳೆಯ ಬಸ್ ಗಳನ್ನು ನಿಷ್ಕ್ರಿಯಗೊಳಿಸಲಿದ್ದೇವೆ. 2020 ರ ವೇಳೆಗೆ 2,500 ಚಾಲನಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರು ಮಾಹಿತಿ ನೀಡಿದರು.

ABOUT THE AUTHOR

...view details