ಹುಬ್ಬಳ್ಳಿ :ವಾಣಿಜ್ಯ ನಗರಿ, ಛೋಟಾ ಮುಂಬೈ, ಗಂಡು ಮೆಟ್ಟಿದ ನಾಡು ಅಂತೆಲ್ಲಾ ಕರೆಸಿಕೊಳ್ಳುವ ನಗರ ಇದೀಗ 'ಡಸ್ಟ್ ಸಿಟಿ' ಎಂದು ಕರೆಸಿಕೊಳ್ಳುವುದಕ್ಕೆ ಸಿದ್ಧವಾಗಿದೆ. ಹಲವು ವರ್ಷಗಳಿಂದ ನೆನಗುದಿಗೆ ಬಿದ್ದ ಕಾಮಗಾರಿಗಳು, ರಸ್ತೆ ಅಗಲೀಕರಣದಿಂದ ಇಂದು ಸ್ಮಾರ್ಟ್ ಸಿಟಿಗೆ ಡಸ್ಟ್ ಸಿಟಿ ಅನ್ನೋ ಕುಖ್ಯಾತಿ ಬಂದೊದಗಿದೆ. ರಾಜ್ಯದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ ಇದೀಗ ಅತಿ ಹೆಚ್ಚು ವಾಯುಮಾಲಿನ್ಯ ಹೊಂದಿದ ರಾಜ್ಯದ ಮೊದಲ ನಗರ ಅನ್ನೋ ಹಣೆಪಟ್ಟಿ ಹೊತ್ತಿದೆ.
ಹುಬ್ಬಳ್ಳಿ ಇದೀಗ ಸ್ವಿಜರ್ಲೆಂಡ್ ಮೂಲದ ಐಕ್ಯೂ ಏರ್ ನಡೆಸಿರುವ ಸಮೀಕ್ಷೆಯಲ್ಲಿ 29.7 ಸರಾಸರಿಯಲ್ಲಿ ಕಲುಷಿತ ವಾತಾವರಣ ದೃಢವಾಗಿದೆ. ಈ ಮೂಲಕ ರಾಜ್ಯದ ನಂಬರ್ ಒನ್ ಸ್ಥಾನಕ್ಕೆ ಹುಬ್ಬಳ್ಳಿನಗರ ಸೇರಿದೆ. ಐಕ್ಯೂ ಏರ್ ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗವಾದ ಅಂಕಿ ಅಂಶಗಳಲ್ಲಿ..
- ಹುಬ್ಬಳ್ಳಿ-29.7
- ಯಾದಗಿರಿ-29.2
- ಬೆಂಗಳೂರು- 29
- ಬೆಳಗಾವಿ-28.1
- ಚಿಕ್ಕಬಳ್ಳಾಪುರ- 26.1
ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ, ವಾಹನ ದಟ್ಟನೆಗಳಿಂದಲೇ ಕೂಡಿರುವ ಮತ್ತು ಹೆಚ್ಚು ಕಾರ್ಖಾನೆ ಹೊಂದಿರುವ ರಾಜಧಾನಿ ಬೆಂಗಳೂರು 3ನೇ ಸ್ಥಾನದಲ್ಲಿದ್ದು, ಹುಬ್ಬಳ್ಳಿ ಮಾತ್ರ ವಾಹನ ದಟ್ಟಣೆ ಹೊರತುಪಡಿಸಿ ಯಾವುದೇ ಕೈಗಾರಿಕಾ ಬೃಹತ್ ಕಾರ್ಖಾನೆಗಳಿಲ್ಲದಿದ್ದರೂ, ಸಹ ಮೊದಲ ಸ್ಥಾನಕ್ಕೇೆರಿದೆ.