ಹುಬ್ಬಳ್ಳಿ :ಕೊರೊನಾ ವೈರಸ್ ಸೋಂಕು ತಡೆಗೆ ಸರ್ಕಾರ ಲಾಕ್‌ಡೌನ್ ಮಾಡಿದೆ. ಆದರೆ, ನಗರ ನಿವಾಸಿಗಳು ಅನಗತ್ಯ ಓಡಾಟ ಬಿಟ್ಟಿಲ್ಲ. ಇಲ್ಲೊಂದು ಗ್ರಾಮದ ಜನ ತಮ್ಮ ಗ್ರಾಮಕ್ಕೆ ತಾವೇ ನಿರ್ಬಂಧ ಹಾಕಿಕೊಂಡು ಮಾದರಿಯಾಗಿದ್ದಾರೆ.
ಹೊರಗೆ ಹೋಗೋವಂತಿಲ್ಲ, ಒಳಗೂ ಬರೋವಂತಿಲ್ಲ.. ಈ ಊರೊಳಗೆ ಎಲ್ಲಾ ಬಂದ್! - ಹುಬ್ಬಳ್ಳಿ ಕೊರೊನಾ
ಏನಾದರೂ ಅವಶ್ಯಕತೆ ವಸ್ತುಗಳನ್ನು ತರಲು ಮಾತ್ರ ಜಿಲ್ಲಾಡಳಿತ ಸೂಚಿಸಿದ ವೇಳೆಯಲ್ಲಿ ಮಾತ್ರ ಹೊರಗೆ ಹೋಗಿ ಬರುತ್ತಿದ್ದಾರೆ. ನಂತರ ಯಾವುದೇ ಓಡಾಟಕ್ಕೆ ಅವಕಾಶ ನಿರ್ಬಂಧ ಮಾಡಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದ ರಸ್ತೆಗೆ ಮುಳ್ಳು ಹಾಕಿದ್ದಾರೆ ಜನ. ಈ ವೇಳೆ ತಮ್ಮ ಗ್ರಾಮಕ್ಕೆ ಯಾರೂ ಹೊರಗಿನವರು ಒಳಗಡೆ ಪ್ರವೇಶ ಮಾಡಬಾರದು, ಅಲ್ಲದೇ ಗ್ರಾಮದ ಒಳಗಡೆ ಇರುವವರು ಹೊರಗಡೆ ಹೋಗಬಾರದೆಂದು ತಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮುಳ್ಳು ಹಾಕಿದ್ದಾರೆ.
ಏನಾದರೂ ಅವಶ್ಯಕತೆ ವಸ್ತುಗಳನ್ನು ತರಲು ಮಾತ್ರ ಜಿಲ್ಲಾಡಳಿತ ಸೂಚಿಸಿದ ವೇಳೆಯಲ್ಲಿ ಮಾತ್ರ ಹೊರಗೆ ಹೋಗಿ ಬರುತ್ತಿದ್ದಾರೆ. ನಂತರ ಯಾವುದೇ ಓಡಾಟಕ್ಕೆ ಅವಕಾಶ ನಿರ್ಬಂಧ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅಷ್ಟೇ ಅಲ್ಲ, ಹುಬ್ಬಳ್ಳಿಯ ಚನ್ನಪೇಟೆಯ ನಿವಾಸಿಗಳು ಸಹಿತ ತಮ್ಮ ಏರಿಯಾದ ರಸ್ತೆಯನ್ನ ಬಂದ್ ಮಾಡಿ ಮಾದರಿಯಾಗಿದ್ದಾರೆ.