ಕರ್ನಾಟಕ

karnataka

ETV Bharat / state

ಗಂಧದ ಗುಡಿಗೆ ಭರ್ಜರಿ ರೆಸ್ಪಾನ್ಸ್: ಹುಬ್ಬಳ್ಳಿ, ಧಾರವಾಡದಲ್ಲಿ ಟಿಕೆಟ್ ಸೋಲ್ಡ್ ಔಟ್ - ಗಂಧದ ಗುಡಿ ಸಾಕ್ಷ್ಯಚಿತ್ರ

ಪುನೀತ್ ರಾಜ್​ಕುಮಾರ್ ಅಭಿನಯದ ಗಂಧದ ಗುಡಿ ಸಾಕ್ಷ್ಯಚಿತ್ರ ಬಿಡುಗಡೆಯಾಗಿದ್ದು, ಧಾರವಾಡ ಮತ್ತು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಂಭ್ರಮ ಮನೆ ಮಾಡಿದೆ.

good response to gandhada gudi film
ಗಂಧದ ಗುಡಿಗೆ ಭರ್ಜರಿ ರೆಸ್ಪಾನ್ಸ್

By

Published : Oct 28, 2022, 2:23 PM IST

ಧಾರವಾಡ/ಹುಬ್ಬಳ್ಳಿ: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ ಕನಸಿನ ಸಾಕ್ಷ್ಯಚಿತ್ರ ಗಂಧದ ಗುಡಿ ಇಂದು ಬಿಡುಗಡೆಯಾಗಿದ್ದು, ಹುಬ್ಬಳ್ಳಿ ಧಾರವಾಡದಲ್ಲಿ ಅಭಿಮಾನಿಗಳ ಸಂಭ್ರಮ ಮನೆ ಮಾಡಿದೆ.

ಧಾರವಾಡದ ಪದ್ಮಾ ಚಿತ್ರಮಂದಿರದಲ್ಲಿ ಅಪ್ಪು ಅಭಿಮಾನಿಗಳು ಪಟಾಕಿ ಸಿಡಿಸಿ, ಡ್ಯಾನ್ಸ್ ಮಾಡುವ ಮೂಲಕ ಚಿತ್ರಕ್ಕೆ ಅದ್ಧೂರಿ ಸ್ವಾಗತ ಕೋರಿದರು. ಜೊತೆಗೆ ಪುನೀತ್ ಕಟೌಟ್‌ಗೆ ಮಾಲಾರ್ಪಣೆ ಮಾಡಿ ಸಂಭ್ರಮಿಸಿದರು. ಪದ್ಮಾ ಚಿತ್ರಮಂದಿರದಲ್ಲಿ ಎಲ್ಲ ಟಿಕೆಟ್ ಸೋಲ್ಡ್ ಔಟ್ ಆಗಿದೆ.

ಹುಬ್ಬಳ್ಳಿ, ಧಾರವಾಡದಲ್ಲಿ ಗಂಧದ ಗುಡಿಗೆ ಭರ್ಜರಿ ರೆಸ್ಪಾನ್ಸ್

ಇದನ್ನೂ ಓದಿ:ಪುನೀತ್​ ಕಟೌಟ್​ಗೆ ಹಾಲಿನ‌ ಅಭಿಷೇಕ - ಬೆಳಗಾವಿಯಲ್ಲಿ ಅಪ್ಪು ಅಭಿಮಾನಿಗಳಿಂದ ಸಸಿ ವಿತರಣೆ

ಇನ್ನು ಹುಬ್ಬಳ್ಳಿಯ ಅಪ್ಸರಾ ಚಿತ್ರ ಮಂದಿರದ ಎದುರು ಸಹ ಅಪ್ಪು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಪುನೀತ್ ರಾಜ್​ಕುಮಾರ್ ಕಟೌಟ್​ಗೆ ಹೂವಿನ ಮಾಲೆ ಹಾಕಿ, ಹಾಲಿನ ಅಭಿಷೇಕ ಮಾಡುವ ಜೊತೆಗೆ ಪಟಾಕಿ ಸಿಡಿಸಿ ವಿವಿಧ ವಾದ್ಯಗಳ ಮೂಲಕ ಸಿನಿಮಾವನ್ನ ಅಭಿಮಾನಿಗಳು ಬರಮಾಡಿಕೊಂಡರು.

ಇದನ್ನೂ ಓದಿ:ಗಂಧದ ಗುಡಿ ಅಪ್ಪು ಕೊನೆಯ ಚಿತ್ರವಲ್ಲ, ಇದು ಆರಂಭ: ಶಿವರಾಜ್ ಕುಮಾರ್

ABOUT THE AUTHOR

...view details