ಕರ್ನಾಟಕ

karnataka

ETV Bharat / state

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - ಈಟಿವಿ ಭಾರತ ಕನ್ನಡ

ಹುಬ್ಬಳ್ಳಿಯಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ - ಮೊಬೈಲ್​ ಕೊಡಿಸುವುದಾಗಿ ಆಮಿಷ ತೋರಿಸಿ ಅತ್ಯಾಚಾರ - ಗೋಕುಲ​ ರೋಡ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು - ಠಾಣೆಗೆ ಆಗಮಿಸಿ ದೂರು ದಾಖಲಿಸಿದ ಸಂತ್ರಸ್ತೆ

gang-rape-at-hubballi
ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ: ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

By

Published : Mar 9, 2023, 3:35 PM IST

ಹುಬ್ಬಳ್ಳಿ : ಬಾಲಕಿಯೊಬ್ಬಳ್ಳಿಗೆ ಮೊಬೈಲ್ ಕೊಡಿಸುವ ಆಮಿಷ ತೋರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಗರದ ಹೊರವಲಯದಲ್ಲಿರುವ ರಿಂಗ್ ರೋಡ್ ಬಳಿ ನಡೆದಿದೆ. ಘಟನೆ ಸಂಬಂಧ ನಾಲ್ವರ ವಿರುದ್ಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಹುಬ್ಬಳ್ಳಿ ತಾಲೂಕಿನ ಶೇರವಾಡದ ದೇವರಾಜ, ಪಕ್ಕಿರೇಶ ಸೇರಿದಂತೆ ನಾಲ್ವರ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಮೊಬೈಲ್​ ಕೊಡಿಸುವುದಾಗಿ ಅಮಿಷ ತೋರಿಸಿ ಅತ್ಯಾಚಾರ :ಅಪ್ರಾಪ್ತ ಬಾಲಕಿಯನ್ನು ಮೊಬೈಲ್ ಕೊಡಿಸುವುದಾಗಿ ಹುಬ್ಬಳ್ಳಿಗೆ ಕರೆಸಿ ಬೈಕ್ ನಲ್ಲಿ ರಿಂಗ್ ರೋಡ್ ಬಳಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಲಾಗಿದೆ. ಈ ಬಗ್ಗೆ ಬಾಲಕಿಯೇ ಗೋಕುಲ ರೋಡ್ ಪೊಲೀಸ್ ಠಾಣೆಗೆ ಆಗಮಿಸಿ ದೂರು ಸಲ್ಲಿಸಿದ್ದಾರೆ.

ಪ್ರಾಥಮಿಕ ವರದಿಯ ಪ್ರಕಾರ, ದೂರುದಾರ ಬಾಲಕಿಗೆ ಸಾಗರ ಎಂಬುವನ ಮುಖಾಂತರ ದೇವರಾಜ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಇವರು ಪರಸ್ಪರ ಮೊಬೈಲ್​​ನಲ್ಲಿ ಮಾತನಾಡುತ್ತಿದ್ದರು. ನಿನ್ನೆ ದಿನಾಂಕ 08-03-2023 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ದೇವರಾಜ ಅಪ್ರಾಪ್ತೆಗೆ ಕರೆ ಮಾಡಿದ್ದಾನೆ. ಬಳಿಕ ದೇವರಾಜ ಮೊಬೈಲ್​ ಕೊಡಿಸುತ್ತೇನೆ ಹುಬ್ಬಳ್ಳಿಗೆ ಬಾ ಎಂದು ಬಾಲಕಿಯನ್ನು ಕರೆದಿದ್ದಾನೆ. ಬಾಲಕಿಯು ದೇವರಾಜ ಹೇಳಿದಂತೆ ಹಳೇ ಬಸ್​ ನಿಲ್ದಾಣಕ್ಕೆ ಬಂದಿದ್ದಾಳೆ. ಬಳಿಕ ಅಲ್ಲಿಂದ ದೇವರಾಜನ ಜತೆ ಬಾಲಕಿ, ಹರ್ಷಾ ಕಾಂಪ್ಲೆಕ್ಸ್​ಗೆ ಹೋಗಿ ನಂತರ ಅಲ್ಲಿಂದ ನೆಹರು ಮೈದಾನಕ್ಕೆ ಹೋಗಿದ್ದಾರೆ. ಅಲ್ಲಿ ದೇವರಾಜ ತನ್ನ ಗೆಳೆಯ ಫಕಿರೇಶನನ್ನು ಭೇಟಿಯಾಗಿದ್ದಾನೆ.

ಅಲ್ಲಿಂದ ಫಕೀರೇಶ ಬಾಲಕಿಯನ್ನು ತನ್ನ ಬೈಕಿನಲ್ಲಿ ಕರೆದುಕೊಂಡು ಹುಬ್ಬಳ್ಳಿಯ ಗೋಕುಲ್​ ರಸ್ತೆಯಲ್ಲಿರುವ ಹೋಟೆಲ್​​ವೊಂದಕ್ಕೆ ಬಂದಿದ್ದಾರೆ. ಅಲ್ಲಿ ದೇವರಾಜ ಅಪ್ರಾಪ್ತೆಗೆ ಕಪಾಳಕ್ಕೆ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ. ಬಳಿಕ ಬಾಲಕಿಯನ್ನು ಬಲವಂತವಾಗಿ ಬೈಕ್​ ಹತ್ತಿಸಿಕೊಂಡು ಹಳೇ ಹುಬ್ಬಳ್ಳಿ ಮುಖಾಂತರ ಬೈಪಾಸ್​ ರಿಂಗ್​ ರೋಡ್​​ ಬ್ರಿಡ್ಜ್​ ಮೇಲೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಬಾಲಕಿಯನ್ನು ಬ್ರಿಡ್ಜ್​ ಕೆಳಗೆ ಕರೆದುಕೊಂಡು ಹೋದ ದೇವರಾಜ, ನಾನು ಹೇಳಿದಂತೆ ಕೇಳಬೇಕು. ಕೇಳದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿ ಅತ್ಯಾಚಾರ ಮಾಡಿದ್ದಾರೆ. ಬಳಿಕ ಆತನ ಗೆಳೆಯ ಫಕೀರೇಶ, ಜೊತೆಗೆ ಇನ್ನಿಬ್ಬರು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇಬ್ಬರನ್ನು ಬಾಲಕಿಯು ಗುರುತಿಸಿದ್ದು, ಇನ್ನಿಬ್ಬರನ್ನು ಕಂಡರೆ ಗುರುತಿಸುವುದಾಗಿ ಬಾಲಕಿ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಬೆಂಗಳೂರು ಮಸಾಜ್​ ಪಾರ್ಲರ್​ನಲ್ಲಿ ಯುವತಿಯ ಮೇಲೆ ಅತ್ಯಾಚಾರ : ಕಳೆದ ಫೆಬ್ರವರಿ 14ರಂದು ಬೆಂಗಳೂರಿನ ಮಸಾಜ್ ಪಾರ್ಲರ್​ ಒಂದರಲ್ಲಿ​ ಕೆಲಸ ಮಾಡುತ್ತಿದ್ದ ಯುವತಿ ಮೇಲೆ‌ ಅತ್ಯಾಚಾರವೆಸಗಿದ ಘಟನೆ ಜಯನಗರದಲ್ಲಿ ನಡೆದಿತ್ತು. ಪ್ರಕರಣ ಸಂಬಂಧ ಜಯನಗರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದರು. ಬಂಧಿತನನ್ನು ರವೀಂದ್ರ ಶೆಟ್ಟಿ ಎಂದು ಗುರುತಿಸಲಾಗಿತ್ತು. ಆರೋಪಿ ರವೀಂದ್ರ ಶೆಟ್ಟಿಯ ಸಂಬಂಧಿಗಳಿಗೆ ಸೇರಿದ ಸೆಲೂನ್​ನಲ್ಲಿ ಈ ಘಟನೆ ನಡೆದಿತ್ತು.

ಇದನ್ನೂ ಓದಿ :ಪಾರ್ಟಿ ನೆಪದಲ್ಲಿ ಸ್ನೇಹಿತೆಯರ ಮೇಲೆ ಅತ್ಯಾಚಾರ ಯತ್ನ; ಬೆಂಗಳೂರಲ್ಲಿ ಆರೋಪಿಗಳ ಬಂಧನ

ABOUT THE AUTHOR

...view details