ಹುಬ್ಬಳ್ಳಿ: ಗಣೇಶ ಚತುರ್ಥಿ ಬಂದರೆ ಸಾಕು ಮನೆ ಮನೆಗಳಲ್ಲಿ ಸಂಭ್ರಮ ಮನೆ ಮಾಡಿರುತ್ತೆ. ಆದ್ರೆ ಮಹಾಮಾರಿ ಕೊರೊನಾ ಭೀತಿಯಿಂದಾಗಿ ಕ್ವಾರಂಟೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅದೆಷ್ಟೋ ರೋಗಿಗಳು ಗಣೇಶ ಚತುರ್ಥಿ ಆಚರಣೆ ಮಾಡದೇ ಹಬ್ಬದಿಂದ ವಂಚಿತರಾಗಿದ್ದಾರೆ.
ಹುಬ್ಬಳ್ಳಿಯ ಕೊರೊನಾ ಕೇರ್ ಸೆಂಟರ್ನಲ್ಲಿ ಗಣೇಶ ಹಬ್ಬ ಆಚರಣೆ - ಕೊರೊನಾ ಕೇರ್ ಸೆಂಟರ್ನಲ್ಲಿ ಗಣೇಶ ಹಬ್ಬ
ಹುಬ್ಬಳ್ಳಿಯ ಘಂಟಿಕೇರಿ ಪ್ರದೇಶದಲ್ಲಿರುವ ಕೋವಿಡ್ ಸೆಂಟರ್ನಲ್ಲಿ ಇಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಹಬ್ಬ ಆಚರಣೆ ಮಾಡಲಾಯಿತು.
ಕೊರೊನಾ ಕೇರ್ ಸೆಂಟರ್ನಲ್ಲಿ ಗಣೇಶ ಹಬ್ಬ ಆಚರಣೆ
ಆದರೆ, ಆ ರೀತಿ ವಂಚಿತರಾಗಿರುವ ಸೋಂಕಿತರು ಹಾಗೂ ಶಂಕಿತರಿಗೆ ಹಬ್ಬದ ವಾತಾವರಣ ಕಣ್ಣಿಗೆ ಕಟ್ಟುವಂತೆ ಮಾಡುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಘಂಟಿಕೇರಿ ಬಿ.ಸಿ ಹಾಸ್ಟೆಲ್ನ ಕೋವಿಡ್ ಕೇರ್ ಸೆಂಟರ್ ಯಶಸ್ವಿಯಾಗಿದ್ದು, ಗಣೇಶ ಚತುರ್ಥಿ ಆಚರಿಸುವ ಮೂಲಕ ರೋಗಿಗಳಲ್ಲಿ ಸಂತಸ ಮೂಡಿಸಿದೆ.
ಘಂಟಿಕೇರಿ ಪ್ರದೇಶದಲ್ಲಿರುವ ಕೋವಿಡ್ ಸೆಂಟರ್ನಲ್ಲಿಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಇಲ್ಲಿರುವ ನೂರಾರು ರೋಗಿಗಳಿಗೆ ಹಬ್ಬದ ವಾತಾವರಣ ಅನುಭವಿಸುವಂತೆ ಮಾಡಲಾಗಿದೆ.