ಹುಬ್ಬಳ್ಳಿ: ಉಪಚುನಾವಣೆಗೆ ಮಹಾದಾಯಿ ವಿಷಯವನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ ಅಸ್ತ್ರ ಮಾಡಿಕೊಂಡಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಐದು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಮಹದಾಯಿ ಸಮಸ್ಯೆ ಇತ್ಯರ್ಥ ಮಾಡದವರಿಗೆ ಈ ಭಾಗದ ಜನ, ರೈತರು ಚುನಾವಣೆ ವೇಳೆ ತಕ್ಕ ಉತ್ತರ ಕೊಡಬೇಕು ಎಂದರು.
ಮಂತ್ರಿಗಿರಿ ಆಸೆ ತೋರಿಸೊ ಹುಮ್ಮಸ್ಸು ರೈತರ ಪರವಾಗಿಯೂ ಇರಬೇಕು. ಸಿಎಂ ಮಂತ್ರಿ ಮಾಡ್ತೀನಿ ಎಂದು ನೇರವಾಗಿ ಅನರ್ಹರಿಗೆ ಆಸೆ, ಆಮಿಷ ತೋರಿಸುತ್ತಿದ್ದಾರೆ. ಇದು ನೇರವಾಗಿ ಭ್ರಷ್ಟಾಚಾರ ಮಾಡಿದಂತೆ. ಚುನಾವಣಾ ಆಯೋಗ ಈ ಬಗ್ಗೆ ಗಮನ ಹರಿಸಬೇಕು. ಚುನಾವಣಾ ಆಯೋಗ ಯಾಕೆ ಸುಮ್ಮನಿದೆ ಅನ್ನೊ ಅನುಮಾನ ಕಾಡುತ್ತಿದೆ ಎಂದರು.