ಹುಬ್ಬಳ್ಳಿ :ಆರ್‌ಆರ್‌ನಗರ ಬೈ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮಾಜಿ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದ ಕಮಿಟಿ ಮಾಡಿದ್ದೇವೆ. ಅವರ ವರದಿ ಮೇಲೆ ನಾಳೆ ಟಿಕೆಟ್ ಯಾರಿಗೆ ಎಂದು ಫೈನಲ್ ಮಾಡುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಹಥ್ರಾಸ್ ರೇಪ್ ಪ್ರಕರಣ.. ಯೋಗಿ ಸರ್ಕಾರ ದೇಶಕ್ಕೆ ರೋಗ ತಂದಿದೆ ಎಂದ ಡಿಕೆಶಿ ನಗರದ ಆರ್‌ಎನ್‌ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಅವರು, ಬೈ ಎಲೆಕ್ಷನ್ಗೆ ಬಹಳಷ್ಟು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಭೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ.
ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗುತ್ತಿದ್ದಂತೆ ಡ್ರಗ್ಸ್ ಪ್ರಕರಣದಲ್ಲಿ ಅಧಿಕಾರಿಗಳ ಎತ್ತಂಗಡಿ ಮಾಡಲಾಗುತ್ತಿದೆ. ಯಾವ ಮಟ್ಟಿಗೆ ಸರ್ಕಾರಕ್ಕೆ ಒತ್ತಡ ಇದೆ ಅಂತಾ ಇದ್ರಿಂದಲೇ ಗೊತ್ತಾಗಲಿದೆ ಎಂದರು.
ಅಧಿಕಾರಿಗಳ ವರ್ಗಾವಣೆ ಬಗ್ಗೆ ನಾನೇನು ಮಾತನಾಡೋದಿಲ್ಲ. ಸರ್ಕಾರ ಇರುತ್ತೋ ಇಲ್ವೋ ಅನ್ನೋ ಸಚಿವ ಆನಂದ್ ಸಿಂಗ್ ಹೇಳಿಕೆ ವಿಚಾರವಾಗಿ ಮಾತನಾಡಿದ ಡಿಕೆಶಿ, ಸರ್ಕಾರದ ಆಂತರಿಕ ಹುಳುಕುಗಳು ಸದ್ಯ ಹೊರಗೆ ಬರುತ್ತೆ, ಕಾದು ನೋಡಿ ಎಂದು ವ್ಯಂಗ್ಯವಾಡಿದರು.
ಹಥ್ರಾಸ್ ರೇಪ್ ಪ್ರಕರಣದ ಬಗ್ಗೆಯೂ ಮಾತನಾಡಿದ ಡಿಕೆಶಿ, ಯೋಗಿ ಸರ್ಕಾರ ದೇಶಕ್ಕೆ ರೋಗ ತಂದಿದೆ. ರೇಪ್ ಆಗಿದೆ ಅನ್ನೋದು ಇಡೀ ದೇಶಕ್ಕೆ ಗೊತ್ತು. ಆದರೂ ಇನ್ನೂ ಯುಪಿ ಸರ್ಕಾರ ಎಫ್ಐಆರ್ ಮಾಡಲು ಹಿಂದೇಟು ಹಾಕುತ್ತಿದೆ ಎಂದು ಕಿಡಿಕಾರಿದರು.