ಹುಬ್ಬಳ್ಳಿ : ಜಾನುವಾರುಗಳ ಕೊರತೆಯಿಂದ ಜಿಲ್ಲೆಯ ಜನರು ತಮ್ಮ ಕೃಷಿ ಚಟುವಟಿಕೆಗಳಿಗೆ ಸೈಕಲ್ ಬಳಕೆ ಮಾಡಿಕೊಂಡಿದ್ದಾರೆ.
ಬೆಳೆಗಳಿಗೆ ಎಡೆ ಹೊಡೆಯುವ ಕೆಲಸಕ್ಕೆ ಹಳೆಯ ಸೈಕಲ್ಗಳನ್ನು ಸ್ವಲ್ಪ ಬದಲಾವಣೆ ಮಾಡಿ, ಅದಕ್ಕೆ ಒಂಟಿ ಚಕ್ರಕ್ಕೆ ಕಬ್ಬಿಣದ ಸಲಾಕಿ ಅಳವಡಿಸುವ ಮೂಲಕ ಎಡೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಜಾನುವಾರುಗಳ ಬದಲಿಗೆ ಸೈಕಲ್ ಬಳಕೆ ಮಾಡುತ್ತಿರುವುದು ಎಲ್ಲೆಡೆ ಸಾಮಾನ್ಯವಾಗಿದೆ.
ದನಗಳ ಜಾಗಕ್ಕೆ ಬಂತು ಹಳೆಯ ಸೈಕಲ್.. ಧಾರವಾಡ ಜಿಲ್ಲೆಯಲ್ಲಿ ಸತತ ಬರಗಾಲದಿಂದ ಜಾನುವಾರುಗಳಿಗೆ ನೀರಿಲ್ಲದೇ ಅವುಗಳ ನಿರ್ವಹಣೆ ಕಷ್ಟವಾಗ್ತಿದೆ. ಹಾಗಾಗಿ ಅವುಗಳನ್ನ ಮಾರಲು ಮುಂದಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಜಾನುವಾರುಗಳಿಲ್ಲದೇ ರೈತರು ಟ್ರ್ಯಾಕ್ಟರ್ ಗಳ ಬಳಕೆ ಮಾಡಿ ಬೀಜ ಬಿತ್ತಿದ್ದರು.
ಇದೀಗ ಬೆಳೆಗಳು ಬೆಳೆದು ನಿಂತಿದ್ದು, ಅವುಗಳ ಬೇರುಗಳಿಗೆ ಮಣ್ಣು ಏರಿಸಬೇಕಿದೆ. ಇದಕ್ಕಾಗಿ ತಮ್ಮ ಹಳೆಯ ಸೈಕಲ್ಗಳನ್ನೇ ಬಳಕೆ ಮಾಡಿಕೊಂಡಿರುವುದು ವಿಶೇಷವಾಗಿದೆ.