ಧಾರವಾಡ :ಕೋವಿಡ್ -19 ಸೋಂಕಿತರಾಗಿರುವ ಪಿ-3397 ಹಾಗೂ ಪಿ - 3398 ಇವರ ಪ್ರಯಾಣದ ವಿವರಗಳನ್ನು ಜಿಲ್ಲಾಡಳಿತವು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ.
ಪಿ-3397 ಪ್ರಯಾಣ ವಿವರ :ಪಿ- 3397 ( 47 ವರ್ಷ ಪುರುಷ) ಇವರು ಕಲಘಟಗಿ ತಾಲೂಕಿನ ಬಿ ಗುಡಿಹಾಳ ಗ್ರಾಮದ ನಿವಾಸಿಯಾಗಿದ್ದಾರೆ. ಇವರು ಲಾಕ್‌ಡೌನ್ ಅವಧಿಯಲ್ಲಿ ಬಾಡಿಗೆ ಬೊಲೆರೋ ವಾಹನದ ಮೂಲಕ ಹುಬ್ಬಳ್ಳಿಯ ಅಮರಗೋಳದ ಎಪಿಎಮ್‌ಸಿಯ ತರಕಾರಿ ಮಾರುಕಟ್ಟೆಗೆ ಏಳೆಂಟು ಬಾರಿ ಹೋಗಿ ಬಂದಿದ್ದಾರೆ. ಮೇ 18ರಂದು ಬಿಗುಡಿಹಾಳದಿಂದ ಅದೇ ಗ್ರಾಮದ ಪರಿಚಯದ ವ್ಯಕ್ತಿಯೊಂದಿಗೆ ಬೈಕ್ ಮೂಲಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಬೆಳಗ್ಗೆ 9:30 ಗಂಟೆಗೆ ಹೋಗಿದ್ದರು. ಬೆಳಗ್ಗೆ 11.30ಕ್ಕೆ ಗ್ರಾಮಕ್ಕೆ ಮರಳಿ, ತಮ್ಮ ಗ್ರಾಮದ ವ್ಯಕ್ತಿಯೊಬ್ಬರ ಶವಸಂಸ್ಕಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಮೇ 19ರಂದು ಅದೇ ಗ್ರಾಮದ ಇಬ್ಬರು ವ್ಯಕ್ತಿಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಟು ಮಧ್ಯಾಹ್ನ 12:30ಕ್ಕೆ ದುಮ್ಮವಾಡ ಗ್ರಾಮಕ್ಕೆ ಹೋಗಿ ಮಧ್ಯಾಹ್ನ 2:30ಕ್ಕೆ ಪುನಃ ತಮ್ಮ ಮನೆಗೆ ಹಿಂದಿರುಗಿದ್ದಾರೆ. ಅದೇ ದಿನ ಸಂಜೆ 6:30ಕ್ಕೆ ದ್ವಿಚಕ್ರ ವಾಹನದಲ್ಲಿ ಕಲಘಟಗಿಗೆ ಹೋಗಿ ಸಂಜೆ 7:30ಕ್ಕೆ ಮನೆಗೆ ಹಿಂದಿರುಗಿದ್ದಾರೆ. ಮೇ 20ರಂದು ಬೆಳಗ್ಗೆ 9:30ಕ್ಕೆ ದ್ವಿಚಕ್ರ ವಾಹನದಲ್ಲಿ ಕಲಘಟಗಿಗೆ ಹೋಗಿ ನಂತರ ಮಧ್ಯಾಹ್ನ 12 ಗಂಟೆಗೆ ಮನೆಗೆ ಹಿಂದಿರುಗಿ ಬಂದಿದ್ದಾರೆ.
ಮೇ 22 ರಂದು ಮಧ್ಯಾಹ್ನ 3:30ಕ್ಕೆ ಮಗನೊಂದಿಗೆ ದ್ವಿಚಕ್ರ ವಾಹನದ ಮೂಲಕ ಮಿಶ್ರಿಕೋಟಿಯಲ್ಲಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿ ಸಂಜೆ 4:30ಕ್ಕೆ ಮನೆಗೆ ಮರಳಿದ್ದಾರೆ. ಮೇ 22 ರಿಂದ ಮೇ 26 ರವರಗೆ ಮನೆಯಲ್ಲಿಯೇ ಇದ್ದು, ಮೇ 26 ರಂದು ರಾತ್ರಿ 9 ಗಂಟೆಗೆ ತಮ್ಮ ಇಂಡಿಕಾ ಕಾರ್‌ನಲ್ಲಿ ನಾಲ್ಕು ಜನ ಮಕ್ಕಳ ಜೊತೆ ಧಾರವಾಡ ಎಸ್‌ಡಿಎಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿ ದಾಖಲಾಗಿದ್ದಾರೆ. ಅಲ್ಲದೆ ಅದೇ ದಿನ ಅವರ ಗಂಟಲು ದ್ರವ ಮಾದರಿ ಪರೀಕ್ಷೆಗಾಗಿ ಪಡೆಯಲಾಗಿದೆ. ಮೇ 31ರಂದು ಪಿ-3397ರವರು ಕೋವಿಡ್ -19 ಸೋಂಕಿತರು ಎಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.