ಕರ್ನಾಟಕ

karnataka

ETV Bharat / state

ಕುಂದಗೋಳ ಬೈಎಲೆಕ್ಷನ್‌: ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ,ಪ್ರತಿಬಂಧಕಾಜ್ಞೆ

ಕುಂದಗೋಳ ಉಪಚುನಾವಣೆಗೆ ಸಂಬಂಧಿಸಿದಂತೆ 214 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿದೆ.ಕುಂದಗೋಳ‌ ವಿಧಾನಸಭಾ ಮತಕ್ಷೇತ್ರದಲ್ಲಿ 9 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ ತಿಳಿಸಿದರು.

ದೀಪಾ ಚೋಳನ,ಜಿಲ್ಲಾಧಿಕಾರಿ

By

Published : May 18, 2019, 6:22 PM IST

Updated : May 18, 2019, 8:52 PM IST

ಧಾರವಾಡ: ಕುಂದಗೋಳ ಉಪ‌ ಚುನಾವಣೆ ಮತದಾನಕ್ಕೆ ಕ್ಷಣಗಣನೇ ಆರಂಭವಾಗಿದ್ದು, ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ. ಕುಂದಗೋಳ ಉಪ ಚುನಾವಣೆಗೆ ಸಂಬಂಧಿಸಿದಂತೆ 214 ಮತಗಟ್ಟೆಗಳಿವೆ. ಕುಂದಗೋಳ‌ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 9 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್​ ತಿಳಿಸಿದರು.

ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನಕ್ಕೆ ಅವಶ್ಯವಿರುವ ವಿವಿ ಪ್ಯಾಟ್ ವಿದ್ಯುನ್ಮಾನ ಮತ ಯಂತ್ರಗಳನ್ನು ಮರು ಹಂಚಿಕೆ ಮಾಡಲಾಗಿದೆ ಎಂದರು.

ಕುಂದಗೋಳ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 97526 ಪುರುಷ ಮತದಾರರು, 91907 ಮಹಿಳಾ ಮತದಾರರು, 4 ತೃತೀಯ ಲಿಂಗಿಗಳು ಸೇರಿ 189437 ಮತದಾರರು ಇದ್ದಾರೆ ಎಂದರು.

ವಿಕಲಚೇತನ ಮತದಾರರಿಗೆ ಮತದಾನಕ್ಕೆ ಮತಗಟ್ಟೆಗೆ ಬರಲು 134 ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. 48 ಗಂಟೆಗಳ ಅವಧಿಯಲ್ಲಿ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ವಸತಿ ಗೃಹಗಳಲ್ಲಿ ವಾಸಿಸುತ್ತಿರುವ ಅನ್ಯ ಕ್ಷೇತ್ರದ ಮತದಾರರಿಗೆ ಹೊರ ಹೋಗಲು ಸೂಚನೆ ನೀಡಲಾಗಿದೆ. ಮಾದರಿ‌ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತೀವ್ರ‌ ನಿಗಾ ವಹಿಸುವಂತೆ ಹೆಚ್ಚುವರಿಯಾಗಿ ಆರು ಜನ ಅಧಿಕಾರಿಗಳನ್ನು ಪ್ರತಿ ಹೋಬಳಿಗೆ ನಿಯೋಜನೆ‌ ಮಾಡಲಾಗಿದೆ ಎಂದರು.

ದೀಪಾ ಚೋಳನ, ಜಿಲ್ಲಾಧಿಕಾರಿ

ಇನ್ನು ಫಲಿತಾಂಶದ ಹಿನ್ನೆಲೆಯಲ್ಲಿ ಮೇ 23 ಬೆಳಗ್ಗೆ 6 ಗಂಟೆಯಿಂದ ಮೇ 24 ರ ಬೆಳಗ್ಗೆ 6 ಗಂಟೆವರೆಗೆ ಪ್ರತಿಬಂಧಕಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ. ಈ ಕಾಲಾವಧಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ, ಸಭೆ, ಸಮಾರಂಭ ಏರ್ಪಡಿಸುವುದನ್ನು ನಿಷೇಧಿಸಲಾಗಿದೆ.

Last Updated : May 18, 2019, 8:52 PM IST

ABOUT THE AUTHOR

...view details