ಹುಬ್ಬಳ್ಳಿ:ಕೊರೊನಾ ಅಲೆಗೆ ತತ್ತರಿಸಿರುವ ಜನತೆಗೆ ಮತ್ತೊಂದು ಆಘಾತ ಎದುರಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿರುವ ಪರಿಣಾಮ ಕಿಮ್ಸ್ನಲ್ಲಿ ಬೆಡ್ ಕೊರತೆ ಎದುರಾಗಿದ್ದು, ಕೋವಿಡ್ ಸೋಂಕಿತರನ್ನು ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡುತ್ತಿರುವುದು ಕಂಡು ಬಂದಿದೆ.
ಹುಬ್ಬಳ್ಳಿ: ಕಿಮ್ಸ್ನಲ್ಲಿ ತಲೆದೂರಿದ ಬೆಡ್ ಕೊರತೆ.. ನೆಲದ ಮೇಲೆಯೇ ಸೋಂಕಿತರಿಗೆ ಚಿಕಿತ್ಸೆ - ಹುಬ್ಬಳ್ಳಿ ಆಸ್ಪತ್ರೆ
ಒಂದೇ ಬೆಡ್ನಲ್ಲಿ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಎಡವಟ್ಟು ಮಾಡಿಕೊಂಡಿದ್ದ ಕಿಮ್ಸ್ ಈಗ ಮತ್ತೊಂದು ಎಡವಟ್ಟು ಮಾಡಿದೆ, ಕೊರೊನಾ ರೋಗಿಗಳಿಗೆ ಕೆಳಗಡೆ ಮಲಗಿಸಿ ಹಾಗೂ ವ್ಹೀಲ್ ಚೇರ್ ಮೇಲೆ ಚಿಕಿತ್ಸೆ ನೀಡಿರುವುದು ಬೆಳಕಿಗೆ ಬಂದಿದೆ.
ನೆಲದ ಮೇಲೆಯೇ ಸೋಂಕಿತರಿಗೆ ಚಿಕಿತ್ಸೆ
ಈ ಹಿಂದೆ ಒಂದೇ ಬೆಡ್ನಲ್ಲಿ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಎಡವಟ್ಟು ಮಾಡಿಕೊಂಡಿದ್ದ ಕಿಮ್ಸ್ ಈಗ ಮತ್ತೊಂದು ಎಡವಟ್ಟು ಮಾಡಿದೆ, ಕೊರೊನಾ ರೋಗಿಗಳಿಗೆ ಕೆಳಗಡೆ ಮಲಗಿಸಿ ಹಾಗೂ ವ್ಹೀಲ್ ಚೇರ್ ಮೇಲೆ ಚಿಕಿತ್ಸೆ ನೀಡುತ್ತಿರುವುದನ್ನ ರೋಗಿಯ ಸಂಬಂಧಿಕರೊಬ್ಬರು ವಿಡಿಯೋ ಮಾಡಿದ್ದಾರೆ.
ಕಿಮ್ಸ್ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತಕ್ಷಣವೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಾರೆ.